• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Second PUC Exam Time Table: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಎಕ್ಸಾಂ ಟೈಮ್​ ಟೇಬಲ್

Second PUC Exam Time Table: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಎಕ್ಸಾಂ ಟೈಮ್​ ಟೇಬಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾ ಸಮಯದಲ್ಲಿ ಶಾಲೆ ಆರಂಭ ಸಂಬಂಧ ಆರೋಗ್ಯ ಸಚಿವರ ಜತೆ ಸಭೆ ನಡೆಸಿದೆವು. ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿದೆವು. ನವೆಂಬರ್​ನಲ್ಲಿ ನಡೆದ ಸಭೆಯಲ್ಲಿ ತರಗತಿ ಪ್ರಾರಂಭಿಸೋದು ಬೇಡ ಎನ್ನಲಾಗಿತ್ತು. ಬಳಿಕ ಡಿಸೆಂಬರ್​ನಲ್ಲಿ ಸಭೆ ಸೇರಿ ಜನವರಿ 1ರಿಂದ, 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. ಇದೀಗ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ಆರಂಭಕ್ಕೆ ತೀರ್ಮಾನ ತೆಗೆದುಕೊಂಡು, ಪರೀಕ್ಷೆ ದಿನಾಂಕ ಪ್ರಕಟಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

    ಬೆಂಗಳೂರು; ನೆನ್ನೆಯಷ್ಟೇ ಎಸ್​ಎಸ್​ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟಿಸಿದ್ದ ಶಿಕ್ಷಣ ಇಲಾಖೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. 2020 - 21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಪಟ್ಟಿ ಪ್ರಕಟಿಸಲಾಗಿದ್ದು, ಮೇ 24 ರಿಂದ ಜೂನ್ 10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ನೆನ್ನೆ ಸುದ್ದಿಗೋಷ್ಠಿ ನಡೆಸಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದರು. ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದಾರೆ.


    ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ


    • ಮೇ 24 -ಭೌತಶಾಸ್ತ್ರ, ಇತಿಹಾಸ

    • ಮೇ 26- ಮೈನಾರಿಟಿ ಲ್ಯಾಂಗ್ವೇಜಸ್

    • ಮೇ 26 - ಲಾಜಿಕ್, ಹೋಮ್​ ಸೈನ್ಸ್, ಗಣಿತ

    • ಮೇ 27 - ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್

    • ಮೇ 28 - ಉರ್ದು ಮತ್ತು ಸಂಸ್ಕೃತ

    • ಮೇ 29 - ಪೊಲಿಟಿಕಲ್​ ಸೈನ್ಸ್

    • ಜೂನ್​ 1- ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ

    • ಜೂನ್​ 3 - ಹಿಂದಿ

    • ಜೂ.4 -  ಅರ್ಥಶಾಸ್ತ್ರ

    • ಜೂನ್​ 5 - ಕನ್ನಡ

    • ಜೂನ್​ 7 - ಇಂಗ್ಲಿಷ್

    • ಜೂನ್​ 8 - ಬ್ಯೂಟಿ ಮತ್ತು ವೆಲ್​ನೆಸ್​

    • ಜೂ.9 - ಸಮಾಜಶಾಸ್ತ್ರ

    • ಜೂನ್ 10-  ಜಿಯೋಗ್ರಫಿ


    ಇದನ್ನು ಓದಿ: SSLC Exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ

    ಕೊರೋನಾ ಸಮಯದಲ್ಲಿ ಶಾಲೆ ಆರಂಭ ಸಂಬಂಧ ಆರೋಗ್ಯ ಸಚಿವರ ಜತೆ ಸಭೆ ನಡೆಸಿದೆವು. ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿದೆವು. ನವೆಂಬರ್​ನಲ್ಲಿ ನಡೆದ ಸಭೆಯಲ್ಲಿ ತರಗತಿ ಪ್ರಾರಂಭಿಸೋದು ಬೇಡ ಎನ್ನಲಾಗಿತ್ತು. ಬಳಿಕ ಡಿಸೆಂಬರ್​ನಲ್ಲಿ ಸಭೆ ಸೇರಿ ಜನವರಿ 1ರಿಂದ, 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು.  6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಶಾಲೆಗಳಲ್ಲಿ ಸರಾಸರಿ ಹಾಜರಾತಿ 12ನೇ ತರಗತಿಯಲ್ಲಿ ಶೇ. 75 ಹಾಗೂ 10ನೇ ತರಗತಿಯಲ್ಲಿ ಶೇ. 70 ಹಾಜರಾತಿ ಇದೆ. ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಹಾಜರಾತಿಯಲ್ಲಿ ಶೇ. 45 ರಷ್ಟು ಹಾಜರಾತಿ ಇದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದರು.

    Published by:HR Ramesh
    First published: