HOME » NEWS » State » SECOND PUC EXAM BOARD INSTRUCTIONS TO PARENTS AND STUDENTS SESR

Second PUC Exam: ಅಕ್ರಮ ತಡೆಗೆ ವಿದ್ಯಾರ್ಥಿಗಳು, ಪೋಷಕರಿಗೆ ವಿಶೇಷ ಸೂಚನೆ ನೀಡಿದ ಪರೀಕ್ಷಾ ಮಂಡಳಿ

2nd PU Exam 2020: ರಾಜ್ಯದಲ್ಲಿ 2,46,772 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು. ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ನಿಗಾವಹಿಸಬೇಕು. ಜೊತೆಗೆ ಉನ್ನತ ಮೌಲ್ಯ ಮಾಪನಾ ಗುಣಮಟ್ಟ ಕಾಪಾಡಲು ವಿಶೇಷ ಸೂಚನೆ ಹೊರಡಿಸಲಾಗಿದೆ.

Seema.R | news18-kannada
Updated:February 24, 2020, 12:08 PM IST
Second PUC Exam: ಅಕ್ರಮ ತಡೆಗೆ ವಿದ್ಯಾರ್ಥಿಗಳು, ಪೋಷಕರಿಗೆ ವಿಶೇಷ ಸೂಚನೆ ನೀಡಿದ ಪರೀಕ್ಷಾ ಮಂಡಳಿ
ಸಾಂಧರ್ಭಿಕ ಚಿತ್ರ
  • Share this:
ಬೆಂಗಳೂರು (ಫೆ. 24): ಇದೇ ಮಾರ್ಚ್​ 4ರಿಂದ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಈಗಾಗಲೇ ಪರೀಕ್ಷಾ ಸಿದ್ಧತೆ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಇದೇ ವೇಳೆ ಪರೀಕ್ಷಾ ಅಕ್ರಮಗಳ ತಡೆ  ಅಕ್ರಮಗಳನ್ನು ಇಲಾಖೆ ಅನೇಕ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ಹೊರಡಿಸಿದೆ.

ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಕೇಂದ್ರಕ್ಕೆ ಹಾಜರಾಗುವ ಅಧಿಕಾಗಿರಳು ಹಾಗೂ ಸಿಬ್ಬಂದಿಗಳಿಗೂ  ಗುರುತಿನ ಚೀಟಿ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ ಇಲ್ಲದವರಿಗೆ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಮಾತ್ರವಲ್ಲದೇ ಪರೀಕ್ಷಾ ಕೇಂದ್ರದ ಸುತ್ತಮುತ್ತ ಕೂಡ ಮೊಬೈಲ್​ ಫೋನ್​ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.



ಪರೀಕ್ಷಾ ಕೇಂದ್ರದ 200 ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದ್ದು, ಈ ವೇಳೆ ಯಾರಾದರೂ ಅತಿಕ್ರಮವಾಗಿ ಪರೀಕ್ಷಾ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದರೆ ಅವರ ವಿರುದ್ಧ ಪೊಲೀಸ್​ ದೂರು ದಾಖಲಾಗುವುದು. ಪರೀಕ್ಷೆ ನಕಲಿಗೆ ಸಹಾಯ ಮಾಡುವುದು, ಬದಲಿ ವ್ಯಕ್ತಿ ಪರೀಕ್ಷೆ ಬರೆಯುವುದು, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವುದರ ಜೊತೆ 5 ಲಕ್ಷ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ 2,46,772 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು. ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ನಿಗಾವಹಿಸಬೇಕು. ಜೊತೆಗೆ ಉನ್ನತ ಮೌಲ್ಯ ಮಾಪನಾ ಗುಣಮಟ್ಟ ಕಾಪಾಡಬೇಕು ಎಂದು ಈಗಾಗಲೇ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸೂಚನೆ ನೀಡಿದ್ದಾರೆ.

ಇದನ್ನು ಓದಿ: 2nd PUC Exam Time Table: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ದಿನಾಂಕ ತಿಳಿಯಲು ಕ್ಲಿಕ್​ ಮಾಡಿ

ಪರೀಕ್ಷೆ ಬಳಿಕ ಕೂಡ ಖಜಾನೆ ಸೇರಲಿರುವ ಉತ್ತರ ಪತ್ರಿಕೆ ಮೇಲೆ ಹದ್ದಿನ ಕಣ್ಣಿಡಲಾಗುವುದು. ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಅತ್ಯಂತ ಸುಸಜ್ಜಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
Youtube Video
First published: February 24, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories