2nd PUC ಉತ್ತರ ಪತ್ರಿಕೆ ಪಡೆಯಲು ನಾಳೆಯೇ ಕೊನೆಯ ದಿನ; ಡೌನ್​ಲೋಡ್​ ಸಮಸ್ಯೆ ಉಂಟಾದ್ರೆ ಹೀಗೆ ಮಾಡಿ

ದ್ವಿತೀಯ ಪಿಯು ((2nd PUC) ವಾರ್ಷಿಕ ಪರೀಕ್ಷೆಯ ಉತ್ತರ ಪ್ರತಿಗಳನ್ನು ಸ್ಕ್ಯಾನ್ಡ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ನಾಳೆಯೇ ಕೊನೆ ದಿನವಾಗಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಯನ್ನು https://pue.karnataka.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬೆಂಗಳೂರು (ಜು.15)ದ್ವಿತೀಯ ಪಿಯು ((2nd PUC) ವಾರ್ಷಿಕ ಪರೀಕ್ಷೆಯ ಉತ್ತರ ಪ್ರತಿಗಳನ್ನು ಸ್ಕ್ಯಾನ್ಡ್ಪ್ರತಿಗಳನ್ನು ಡೌನ್ಲೋಡ್ಮಾಡಿಕೊಳ್ಳಲು ಇತ್ತೀಚಿಗಷ್ಟೆ ದಿನಾಂಕ ವಿಸ್ತಾರಣೆ ಮಾಡಲಾಗಿತ್ತು. ಇದೀಗ ಉತ್ತರ ಪ್ರತಿ ಡೌನ್​ಲೋಡ್​ ಮಾಡಿಕೊಳ್ಳಲು ನಾಳೆಯೇ (ಜುಲೈ 15) ಕೊನೆಯ ದಿನ ಎಂದು ಶಿಕ್ಷಣ ಇಲಾಖೆ (Department of Education) ಮಾಹಿತಿ ಹೇಳಿದೆ. ಇನ್ನುವಿದ್ಯಾರ್ಥಿಗಳು ಪುಟಗಳನ್ನು ಡೌನ್ಲೋಡ್ಮಾಡಿಕೊಂಡ ನಂತರ ನ್ಯೂನತೆಗಳು  ಕಂಡುಬಂದರೆ  jdexam.dpue@gmail.com ಗೆ ಮನವಿ ಕಳುಹಿಸಬಹುದು. ಅಥವಾ 080–23083860, 23083864  ನಂಬರ್​ಗೆ ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಬಹುದಾಗಿದೆ. 


18ರವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಶಿಕ್ಷಣ ಇಲಾಖೆ ವೆಬ್​ ಸೈಟ್​ಗಳಲ್ಲಿಬಿಡುಗಡೆಗೊಳಿಸಿದೆ.  ಉತ್ತರ ಪತ್ರಿಕೆ ಪಡೆಯಲು ಪಿಯು ವಿದ್ಯಾರ್ಥಿಗಳು ಮುಗಿಬಿದ್ದಿದ್ದರು. ಹೀಗಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಡೌನ್‌ಲೋಡ್ (Download) ಮಾಡಿಕೊಳ್ಳುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ಇದೇ ತಿಂಗಳು 18 ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಇಲಾಖೆ ವೆಬ್​ಸೈಟ್​ನಲ್ಲಿ ಲಭ್ಯವಿರುತ್ತೆ, ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು  ಪಿಯು ಬೋಡ್೯ (PU Board)  ತಿಳಿಸಿತ್ತು.

5 ದಿನಗಳ ಕಾಲ ದಿನಾಂಕ ವಿಸ್ತರಣೆ

ಕಳೆದೆರಡು ದಿನಗಳಿಂದ ತಾಂತ್ರಿಕ ಕಾರಣದಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ, ಇದೀಗ ವೆಬ್​ಸೈಟ್​ನಲ್ಲಿ ಉತ್ತರ ಪತ್ರಿಕೆಗಳು ಲಭ್ಯವಿದ್ದು, ಪ್ರತಿ ವಿಷಯಕ್ಕೂ ಓಟಿಪಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ, ಉತ್ತರ ಪತ್ರಿಕೆ ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ಪಿಯು ಬೋರ್ಡ್ 5 ದಿನಗಳ ಕಾಲ ದಿನಾಂಕ ವಿಸ್ತರಣೆ ಮಾಡಿದೆ ಎಂದು ಪಿಯು ಬೋರ್ಡ್ ಡೈರೆಕ್ಟರ್ ರಾಮಚಂದ್ರನ್ ಹೇಳಿದ್ದರು.

ಉತ್ತರ ಪತ್ರಿಕೆಯನ್ನು ಡೌನ್​ಲೋಡ್​ ಮಾಡಿಕೊಳ್ಳೋದು ಹೇಗೆ?

ಉತ್ತರ ಪತ್ರಿಕೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರೋ ವಿದ್ಯಾರ್ಥಿಗಳ ಮೊಬೈಲ್​ಗೆ ಓಟಿಪಿ

ಅರ್ಜಿ ಸಲ್ಲಿಸುವ ವೇಳೆ ನೀಡಿರೋ ಮೊಬೈಲ್‌ಗೆ ಓಟಿಪಿ ಕಳಿಸಲಿರೋ ಶಿಕ್ಷಣ ಇಲಾಖೆ

ಓಟಿಪಿ ಬಂದ ಬಳಿಕ ವೆಬ್‌ಸೈಟ್‌ನಲ್ಲಿ ಪ್ರತಿ ಡೌನ್‌ಲೋಡ್ ಮಾಡಬಹುದು

ವಿದ್ಯಾರ್ಥಿಗಳಿಗೆ ಉಪಯುಕ್ತವಾಗೋ ನಿಟ್ಟಿನಲ್ಲಿ ಸರಳೀಕರಣ ಮಾಡಲಾಗಿದೆ

ಇದನ್ನೂ ಓದಿ: Karnataka Rains: ಕರಾವಳಿಯಲ್ಲಿ ಭಾರೀ ಮಳೆ, ಇಲ್ಲಿವೆ ಕೆಲವು ಫೊಟೋಸ್

ಈ ಲಿಂಕ್​ನಲ್ಲಿ ಉತ್ತರ ಪ್ರತಿ ಪಡೆಯಬಹುದು:

https://pue.karnataka.gov.in/

4,22,966 ವಿದ್ಯಾರ್ಥಿಗಳು ಉತ್ತೀರ್ಣ

ಈ ವರ್ಷ ಒಟ್ಟು 6,83,563 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಅವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸೈನ್ಸ್‌ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದರು.

ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷದ ದ್ವಿತೀಯ ಪಿಯಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ,ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಿಣ ನಾಲ್ಕನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿತ್ತು.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.

ಇದನ್ನೂ ಓದಿ: PSI Recruitment Scam: ಅಮೃತ್ ಪೌಲ್​ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಅವ್ರ ಡೈರಿಯಲ್ಲಿ ಏನಿದೆ ಹೇಳಿ- ಸಿದ್ದರಾಮಯ್ಯ

ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ 

ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಗಳನ್ನು  ಹಂತಹಂತವಾಗಿ ವೆಬ್‌ಸೈಟ್‌ನಲ್ಲಿ ಅಪ್​ಲೋಡ್​ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಕುರಿತು ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್‌ ಮೂಲಕ ಸಂದೇಶವನ್ನೂ ಕಳುಹಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿತ್ತು. ಸಂದೇಶ ಸ್ವೀಕರಿಸಿದ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಯನ್ನು https://pue.karnataka.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
Published by:Pavana HS
First published: