HOME » NEWS » State » SECOND PUC EXAM 7 STUDENT FROM VIJAYAPURA DEBARRED SESR MVS

ದ್ವಿತೀಯ ಪಿಯು ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ವಿಜಯಪುರದಲ್ಲಿ ಒಬ್ಬ ಮೇಲ್ವಿಚಾರಕ ಅಮಾನತು; 7 ವಿದ್ಯಾರ್ಥಿಗಳು ಡಿಬಾರ್​​

ಪ್ರಶ್ನೆ ಪತ್ರಿಕೆಯನ್ನು ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಂತೆ ಅದನ್ನು ಕಿಟಕಿಯಲ್ಲಿ ತೋರಿಸಿ ಲೀಕ್​ ಮಾಡಿದ ಮುರುಘೇಂದ್ರ ಹಿರೇಮಠ ಮತ್ತು ಫೋಟೋ ತೆಗೆದ ಭಾಗಪ್ಪ ಸಗರ ಪೊಲೀಸರ ವಶಕ್ಕೆ ಪಡೆಯಲಾಗಿದೆ

news18-kannada
Updated:March 4, 2020, 5:21 PM IST
ದ್ವಿತೀಯ ಪಿಯು ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ವಿಜಯಪುರದಲ್ಲಿ ಒಬ್ಬ ಮೇಲ್ವಿಚಾರಕ ಅಮಾನತು; 7 ವಿದ್ಯಾರ್ಥಿಗಳು ಡಿಬಾರ್​​
ಪರೀಕ್ಷೆ
  • Share this:
ವಿಜಯಪುರ(ಮಾ. 04): ಇಂದಿನಿಂದ ದ್ವಿತೀಯ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಭೌತಶಾಸ್ತ್ರದ ಪರೀಕ್ಷೆ ಇತ್ತು. ಇನ್ನು ಪರೀಕ್ಷೆ ಆರಂಭವಾದ ಗಂಟೆಯೊಳಗೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಓರ್ವ ಮೇಲ್ವಿಚಾರಕರನ್ನು ಅಮಾನತ್ತು ಮಾಡಲಾಗಿದ್ದು, ನಕಲು ಮಾಡುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.


ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿದ ಬೆನ್ನಲ್ಲೇ  ಕಿಡಿಗೇಡಿಗಳು ಮೊಬೈಲ್​ನಲ್ಲಿ ಫೋಟೋ ತೆಗೆದು ಲೀಕ್​ ಮಾಡಿದ್ದಾರೆ. ಈ ಪ್ರಕರಣದಲ್ಲಿ, ಕೊಠಡಿ ಮೇಲ್ವಿಚಾರಣೆ ನಡೆಸುತ್ತಿದ್ದ ನಾರಾಯಣಕರ್​ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈಎಸ್​ ಪಾಟೀಲ ತಿಳಿಸಿದರು. ಇದರ ಬೆನ್ನಲ್ಲೇ ನಕಲು ಮಾಡುತ್ತಿದ್ದ ಇಂಡಿಯ ಶಾಂತೇಶ್ವರ ಪಿಯು ಕಾಲೇಜಿನ 7 ಜನ ವಿದ್ಯಾರ್ಥಿಗಳನ್ನು ಡಿಬಾರ್​ ಮಾಡಲಾಗಿದೆ ಎಂದು ಮಾಹಿತಿಯನ್ನು ಅವರು ನೀಡಿದರು.

ಇದನ್ನು ಓದಿ: ಪಿಯುಸಿ ಪರೀಕ್ಷೆ ಆರಂಭವಾದ ಗಂಟೆಯಲ್ಲೇ ವಿಜಯಪುರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

ಇನ್ನು ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುತ್ತಿದ್ದಂತೆ ಅದನ್ನು  ಕಿಟಕಿಯಲ್ಲಿ ತೋರಿಸಿ ಲೀಕ್​ ಮಾಡಿದ ಮುರುಘೇಂದ್ರ ಹಿರೇಮಠ ಮತ್ತು ಫೋಟೋ ತೆಗೆದ ಭಾಗಪ್ಪ ಸಗರ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮುಂದಿನ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು  ಎಸ್ಪಿ ಅನುಪಮ ಅಗರವಾಲ ತಿಳಿಸಿದರು.
Youtube Video

 
First published: March 4, 2020, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories