ಪಿಯುಸಿ ರಿಪೀಟರ್ಸ್ ಪಾಸ್, ಆದರೆ ಪ್ರೈವೇಟ್ ಸ್ಟೂಡೆಂಟ್ಸ್​ಗೆ ಪರೀಕ್ಷೆ? ನಾಳೆ ನಿರ್ಧಾರ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನ ತೇರ್ಗಡೆ ಮಾಡಲಾಗಿದೆ. ಪ್ರತಿಭಟನೆಯ ಬಳಿಕ ಇದೀಗ ರಿಪೀಟರ್ಸ್​ಗಳನ್ನೂ ಪಾಸ್ ಮಾಡುವ ಸಾಧ್ಯತೆ ಇದೆ. ಆದರೆ, ಪ್ರೈವೇಟ್ ಸ್ಟೂಡೆಂಟ್ಸ್ ಪರೀಕ್ಷೆ ಬರೆಯಬೇಕಾಗಬಹುದು.

ಸಭೆಯಲ್ಲಿ ಸಚಿವ ಸುರೇಶ್ ಕುಮಾರ್

ಸಭೆಯಲ್ಲಿ ಸಚಿವ ಸುರೇಶ್ ಕುಮಾರ್

  • Share this:
ಬೆಂಗಳೂರು: ದ್ವಿತೀಯ ಪಿಯುಸಿ ಫ್ರೆಶರ್ಸ್ ವಿದ್ಯಾರ್ಥಿಗಳನ್ನೇನೊ ಪಾಸ್ ಮಾಡಲಾಯ್ತು. ನಮ್ಮನ್ನೂ ಪಾಸ್ ಮಾಡಿ ಅಂತ ಕೋರ್ಟ್ ಮೆಟ್ಟಿಲೇರಿದ ರಿಪೀಟರ್ಸ್​ಗೂ ಗುಡ್ ನ್ಯೂಸ್ ಸಿಗುತ್ತಿದೆ. ದ್ವಿತೀಯ ಪಿಯು ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶದಲ್ಲೂ ಪಿಯು ಬೋರ್ಡ್ ಮಹತ್ತರ ನಿರ್ಧಾರ ಕೈಗೊಂಡಿದೆ. ರಿಪೀಟರ್ಸ್ ಪಾಸ್ ಮಾಡಬಹುದು, ಆದರೆ ಪ್ರೈವೇಟ್ ಸ್ಟೂಡೆಂಟ್ಸ್ ಪರೀಕ್ಷೆ ಬರೆಯಬೇಕಾಗುವುದು. ನಾಳೆ ಸೋಮವಾರ ಈ ಬಗ್ಗೆ ಅಂತಿಮ ತೀರ್ಮಾನ ಹೊರ ಬೀಳಲಿದೆ.

ಕೊರೋನಾ ತಾಂಡವವಾಡ್ತಿದ್ದ ಕಾರಣ, ದ್ವಿತೀಯ ಪರೀಕ್ಷೆ ಇಲ್ಲದೆ ಫ್ರೆಶರ್ಸ್ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿತ್ತು. ಹತ್ತನೇ ತರಗತಿ ಹಾಗೂ ಪ್ರಥಮ ಪಿಯು ಅಂಕಗಳ ಆಧಾರದ ಮೇಲೆ ಫ್ರೆಶರ್ಸ್ ಗಳ ಪಾಸ್ ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಆದ್ರೆ ಇದನ್ನ ಪ್ರಶ್ನಿಸಿ ರಿಪೀಟರ್ಸ್ ಸಹ ಕೋರ್ಟ್ ಮೆಟ್ಟಿಲೇರಿದ್ರು. ಕೋರ್ಟ್ ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡುವಂತೆ ಸರ್ಕಾರಕ್ಕೆ ಚಾಟಿ ಬೀಸಿತ್ತು. ಬಳಿಕ ಎಚ್ಚೆತ್ತ ಪಿಯು ಬೋರ್ಡ್, 12 ಸಮಿತಿಯನ್ನ ರಚನೆ ಮಾಡಿತ್ತು. ಇದೀಗ ಕಮಿಟಿಯ ರಿಪೋರ್ಟ್ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕೋರ್ಟ್ ನಾಳೆ ತೀರ್ಮಾನ ಪ್ರಕಟಿಸಲಿದೆ.

ಪಿಯು ಫ್ರೆಶರ್ಸ್ ಜೊತೆ ಎಲ್ಲ ರಿಪೀಟರ್ಸ್ ಗಳನ್ನ ಪ್ರೊಮೋಟ್ ಮಾಡುವ ಸಾಧ್ಯತೆ ಇದೆ. ಗ್ರೇಸ್ ಅಂಕ ನೀಡಿ ಬ್ಯಾಲೆನ್ಸ್ ಉಳಿಸಿಕೊಂಡಿದ್ದ ಸಬ್ಜೆಕ್ಟ್ ಗಳಿಗೆ ಮಿನಿಮಮ್ ಮಾರ್ಕ್ಸ್ ನೀಡಿ ಪ್ರಮೋಟ್ ಮಾಡಲಾಗುತ್ತೆ ಎಂಬ ಮಾಹಿತಿ ನ್ಯೂಸ್ 18ಗೆ ಪಿಯು ಬೋರ್ಡ್ ಉನ್ನತ ಮೂಲಗಳಿಂದ ದೊರೆತಿವೆ. ಹಾಗಿದ್ರೆ ಯಾವ ಮಾದರಿಯಲ್ಲಿ ರಿಪೀಟರ್ಸ್ ಗಳನ್ನ‌ ಪಾಸ್ ಮಾಡಲು ಇಲಾಖೆ ಪ್ಲ್ಯಾನ್ ಮಾಡಿದೆ ಅಂತ ಮಾಹಿತಿ ಈ ಕೆಳಗೆ ಇದೆ.

ಇದನ್ನೂ ಓದಿ: Explainer | ಪಾನ್ ಕಾರ್ಡ್ ಕಳೆದಿದ್ದೀರಾ? ಆನ್​ಲೈನ್​ನಲ್ಲಿ E-PAN ಪಡೆಯುವ ಸರಳ ವಿಧಾನ ಇಲ್ಲಿದೆ

ದ್ವಿತೀಯ ಪಿಯು ರಿಪೀಟರ್ಸ್ ವಿಚಾರದಲ್ಲಿ ಪಿಯು ಬೋರ್ಡ್ ನಿಲುವೇನು..?

ಪ್ರತೀ ರಿಪೀಟರ್ ವಿದ್ಯಾರ್ಥಿಗೆ 35 ಕನಿಷ್ಠ ಅಂಕದ ಜೊತೆಗೆ 5 ಗ್ರೇಸ್ ಮಾರ್ಕ್ಸ್ ನೀಡಲಾಗುವುದು. ಒಟ್ಟು 40 ಅಂಕ ಕೊಟ್ಟು ಪಿಯು ರಿಪೀಟರ್ಸ್ ಪ್ರೊಮೋಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನ್ಯೂಸ್18ಗೆ ಸಿಕ್ಕಿದೆ. 12 ಜನರ ಸಮಿತಿ ನೀಡಿರುವ ಈ ವರದಿ ನಾಳೆ ಕೋರ್ಟ್​ಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಇನ್ನು, 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 6,86,816 ವಿದ್ಯಾರ್ಥಿಗಳು ಪರೀಕ್ಷೆ ನೊಂದಣಿ ಮಾಡಿಕೊದ್ದರು. ಈ ಪೈಕಿ 76,387 ರಿಪೀಟರ್ಸ್ ವಿದ್ಯಾರ್ಥಿಗಳು ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಆದ್ರೆ ಕೇವಲ ರಿಪೀಟರ್ಸ್ ಗಳನ್ನ ಮಾತ್ರ ಪ್ರೊಮೋಟ್ ಮಾಡಲು ಇಲಾಖೆ ನಿರ್ಧರಿಸಿದ್ದು, ಸೋಂಕು ಕಡಿಮೆಯಾದ ಬಳಿಕ ಖಾಸಗಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ಮುಂದಾಗಿದೆ. ನಾಳೆ ಈ ಬಗ್ಗೆ ಕೋರ್ಟ್ ಗೆ ಸರ್ಕಾರ ವರದಿ ಸಲ್ಲಿಸಲಿದೆ. ವರದಿ ಮೇಲೆ ಕೋರ್ಟ್ ಏನು ಸೂಚನೆ ನೀಡುತ್ತೋ ಆನಂತರ ನಮ್ಮ ಹೋರಾಟ ರೂಪುರೇಷ ಬಗ್ಗೆ ನಿರ್ಧರಿಸುತ್ತೇವೆ ಎಂದು ಪಿಯುಸಿ ರಿಪೀಟರ್ಸ್ ಹಾಗೂ ಪ್ರೈವೇಟ್ ಸ್ಟೂಡೆಂಟ್ಸ್ ಪರ ಅರ್ಜಿ ಸಲ್ಲಿಸಿರುವ ವಕೀಲ ಸೋಮಶೇಖರಯ್ಯ ಪ್ರತಿಕ್ರಿಯೆ ನೀಡುತ್ತಾರೆ.

ಒಟ್ಟಿನಲ್ಲಿ ದ್ವಿತೀಯ ಪಿಯು ಫ್ರೆಶರ್ಸ್ ಗಳನ್ನು ಮಾತ್ರ ಪಾಸ್ ಮಾಡಿದ್ದ ಸರ್ಕಾರ, ಇದೀಗ ರಿಪೀಟರ್ಸ್ ಗಳನ್ನ ಪ್ರಮೋಟ್ ಮಾಡೋಕೆ ಮುಂದಾಗಿದೆ. ಆದ್ರೆ ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯಿಂದ ವಿನಾಯ್ತಿ ಇಲ್ಲ. ಈ ಬಗ್ಗೆ ನಾಳೆಯೇ‌ ಕೋರ್ಟ್ ನಿಂದ ಅಧಿಕೃತ ತೀರ್ಮಾನ ಹೊರ ಬೀಳಲಿದೆ.

ವರದಿ: ಶರಣು ಹಂಪಿ
Published by:Vijayasarthy SN
First published: