ಬೆಂಗಳೂರು (ಫೆ. 12): ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದೆ. ಮೇ 24 ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಈ ಹಿಂದೆ ಪ್ರಕಟವಾಗಿದ್ದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳಿಗೆ ಒಂದುವಾರ ಸಮಯ ನಿಗದಿಪಡಿಸಿತ್ತು. ಬಳಿಕ ರಾಜ್ಯದ ವಿವಿಧೆಡೆಯ ಹಲವಾರು ಪೋಷಕರು ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ನೀಟ್, ಜೆಇಇ ಗಳಂತಹ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಈಗ ಹೊಸ ಮತ್ತು ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮೇ 24ರಿಂದ ದ್ವಿತೀಯ ಪಿಯು ಪರೀಕ್ಷೆ
ದ್ವಿತೀಯ ಪಿಯು ಪರೀಕ್ಷೆ ಅಧಿಕೃತ ವೇಳಾಪಟ್ಟಿ
ಮೇ 24ರಂದು ಇತಿಹಾಸ ಪರೀಕ್ಷೆ,
ಮೇ 25-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
ಮೇ 26- ಭೂಗೋಳ ಶಾಸ್ತ್ರ
ಮೇ 27- ಮನಃಶಾಸ್ತ್ರ/ಬೇಸಿಕ್ ಮ್ಯಾತ್ಸ್,
ಮೇ 28- ತರ್ಕಶಾಸ್ತ್ರ, ಮೇ 29-ಹಿಂದಿ,
ಮೇ 31-ಇಂಗ್ಲಿಷ್,
ಜೂ.1- ಮಾಹಿತಿ ತಂತ್ರಜ್ಞಾನ/ಹೆಲ್ತ್ರ್
ಜೂ.2- ರಾಜ್ಯಶಾಸ್ತ್ರ/ಗಣಕ ವಿಜ್ಞಾನ,
ಜೂ.3- ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್
ಜೂ.4-ಅರ್ಥಶಾಸ್ತ್ರ, ಜೂ.5-ಗೃಹ ವಿಜ್ಞಾನ,
ಜೂ.7-ವ್ಯವಹಾರ ಅಧ್ಯಯನ/ ಭೌತಶಾಸ್ತ್ರ,
ಜೂ.8-ಐಚ್ಛಿಕ ಕನ್ನಡ,
ಜೂ.9-ತಮಿಳು/ತೆಲುಗು/ಮಲಯಾಳಂ/ಮರಾಠಿ
ಜೂ.10-ಸಮಾಜ ಶಾಸ್ತ್ರ/ ರಸಾಯನಶಾಸ್ತ್ರ
ಜೂ.11- ಉರ್ದು/ ಸಂಸ್ಕೃತ,
ಜೂ.12- ಸಂಖ್ಯಾಶಾಸ್ತ್ರ,
ಜೂ.14-ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ,
ಜೂ.15- ಭೂಗರ್ಭಶಾಸ್ತ್ರ,
ಜೂ.16- ಕನ್ನಡ
ಕೊರೋನಾ ಹಿನ್ನಲೆ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳನ್ನು ಜನವರಿಯಿಂದ ಆರಂಭಿಸಲಾಗಿತ್ತು. ಜನವರಿ 1ರಿಂದ 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. 6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಶಾಲೆಗಳಲ್ಲಿ ಸರಾಸರಿ ಹಾಜರಾತಿ ಶೇ. 75 ರಷ್ಟು ಹಾಜರಾತಿ ಕಂಡು ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ