ಬೆಂಗಳೂರು(ಡಿ.9): ದೇಶಕ್ಕೆ ಕೊರೋನಾ(Corona) ಕಾಲಿಟ್ಟಾಗಿನಿಂದ ವ್ಯವಸ್ಥೆಯೇ ಬದಲಾಗಿ ಹೋಗಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ಸಹ ಅನೇಕ ಬದಲಾವಣೆಗಳಾಗಿವೆ. ಇದು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿದೆ. ಇಂದಿನಿಂದ ದ್ವಿತೀಯ ಪಿಯು(Second PU) ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ(Mid Term Exam) ಪ್ರಾರಂಭವಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲೆಂದು ಪಿಯು ಬೋರ್ಡ್(PU Board) ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಅದರಂತೆ ಪಿಯು ಮಂಡಳಿ ಕೆಲವು ಮಾರ್ಗಸೂಚಿ ಹಾಗೂ ಸೂಚನೆಗಳನ್ನು ಕಾಲೇಜುಗಳಿಗೆ ನೀಡಿದೆ.
ಈ ಸೂಚನೆ ಪಾಲಿಸದಿದ್ರೆ ಕಠಿಣ ಕ್ರಮ
ಕೊರೋನಾ ರೂಪಾಂತರ ಹೊಸ ಓಮಿಕ್ರಾನ್ ಆತಂಕದ ನಡುವೆಯೇ ಇಂದು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಕೋವಿಡ್ ಸೋಂಕು ತಗುಲಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವಂತೆ ಒತ್ತಡ ಹೇರಬಾರದು ಎಂದು ಪಿಯು ಬೋರ್ಡ್ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ನಿಯಮ ಉಲ್ಲಂಘಿಸಿ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ಒತ್ತಡ ಹಾಕಿದರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿಂದು ತುಂತುರು ಅಥವಾ ಸಾಧಾರಣ ಮಳೆ: ಬೆಂಗ್ಳೂರಲ್ಲಿ ಮೋಡ ಕವಿದ ವಾತಾವರಣ!
ಕಾಲೇಜುಗಳಿಗೆ ಪಿಯು ಬೋರ್ಡ್ ಸೂಚನೆ
ಒಂದು ವೇಳೆ ಸೋಂಕಿತರು ತಾವಾಗಿಯೇ ಪರೀಕ್ಷೆ ಬರೆಯಲು ಇಚ್ಛಿಸಿದರೆ, ಆಗ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ. ಆದರೆ ಒತ್ತಡ ಹಾಕಬೇಡಿ. ಈ ಹಿಂದಿನ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಕೋವಿಡ್ ವಿದ್ಯಾರ್ಥಿಗಳು ಚೇತರಿಸಿಕೊಂಡ ನಂತರ ತಡವಾಗಿ ಪರೀಕ್ಷೆ ನಡೆಸಬೇಕು ಎಂದು ಪಿಯು ಬೋರ್ಡ್ ಸೂಚನೆ ನೀಡಿದೆ.
ಹಳೇ ಮಾರ್ಗಸೂಚಿಯಂತೆ ಪರೀಕ್ಷೆ
ಮಧ್ಯಂತರ ಪರೀಕ್ಷೆಗೆ ಹೊಸ ಮಾರ್ಗಸೂಚಿ ಇಲ್ಲ. ಈ ಹಿಂದೆ ಇಲಾಖೆ ಹೊರಡಿಸಿದ್ದ ಮಾರ್ಗಸೂಚಿ ಅನ್ವಯದಂತೆ ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ನಿಗದಿತ ಅವಧಿಯೊಳಗೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಕಾಲೇಜುಗಳಿಗೆ ಪಿಯು ಬೋರ್ಡ್ ಸೂಚಿಸಿದೆ.
ಇದನ್ನೂ ಓದಿ: Bengaluru Power Cut: ಇಂದು ಬೆಂಗಳೂರಿನ ಯಾವೆಲ್ಲ ಏರಿಯಾದಲ್ಲಿ ಪವರ್ ಕಟ್? ಇಲ್ಲಿದೆ ಮಾಹಿತಿ
ಕಾಲೇಜುಗಳಿಗೆ ಈ ನಿಯಮ ಪಾಲನೆಗೆ ಸೂಚನೆ
ಕಾಲೇಜು ಕೊಠಡಿಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಈ ಮಧ್ಯೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕಂಡುಬರುವ ಕೋವಿಡ್ ವರದಿಗಳ ಬಗ್ಗೆ ಪ್ರತಿದಿನ ಇಲಾಖೆಗೆ ಮಾಹಿತಿ ನೀಡಬೇಕು . ತಪ್ಪಿದರೆ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ