Second PU Exam: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; ಹಿಜಾಬ್​ಗಿಲ್ಲ ಅವಕಾಶ, ಸಮವಸ್ತ್ರ ಪಾಲನೆ ಕಡ್ಡಾಯ

ಎಸ್​ಎಸ್​ಎಲ್​​  ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಕಡ್ಡಾಯ ಪಾಲನೆ ಮಾಡುವಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ. 21):  ಹಿಜಾಬ್ ಗೊಂದಲದ ನಡುವೆಯೇ ಎಸ್​ಎಸ್​ಎಲ್​ಸಿ ಪರೀಕ್ಷೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಸರಾಗವಾಗಿ ಮುಗಿದಿದೆ.  ಈಗ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದೆ. ನಾಳೆಯಿಂದ ಅಂದರೆ ಏಪ್ರಿಲ್​ 22 ರಿಂದ ಮೇ 11ರವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಯಶಸ್ವಿಯಾಗಿ ಸುಸೂತ್ರವಾಗಿ ನಡೆಸಲು ಎಲ್ಲ ಬಿಗಿ ಕ್ರಮ ನಡೆಸಲಾಗಿದೆ. 

ವಿದ್ಯಾರ್ಥಿ ಜೀವನದಲ್ಲಿ ವೃತ್ತಿಪರ ಕೋರ್ಸ್ ಗೆ ಪಿಯುಸಿ ಪರೀಕ್ಷೆ ಪ್ರಮುಖ ಘಟ್ಟ. ಯಾವುದೇ ಗೊಂದಲ, ಆತಂಕಗಳಿಲ್ಲದೇ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್​ ಪ್ರಕರಣಗಳು ಕಡಿಮೆ ಇದ್ದರೂ ಆತಂಕ ನಿವಾರಣೆಯಾಗದ ಹಿನ್ನಲೆ  ಆರೋಗ್ಯ ಇಲಾಖೆಯ SOP ಪ್ರಕಾರ ಪರೀಕ್ಷೆ ಕೇಂದ್ರಗಳಲ್ಲಿ ಸಿದ್ಧತೆ ನಡೆಸಲಾಗಿದೆ.

ಯಶಸ್ವಿಯಾಗಿ ಪರೀಕ್ಷೆ ನಡೆಸಲು ತಯಾರಿ

ಇಂದು ಮೊದಲ ಪರೀಕ್ಷೆ ತರ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯ ಇರಲಿದೆ‌.  ಬೆಳಗ್ಗೆ 10: 15 ರಿಂದ ಮಧ್ಯಾಹ್ನ 1:3 0ರವರೆಗೆ ಪರೀಕ್ಷೆ ನಡೆಯಲಿದೆ. ಒಂದು ದಿನಕ್ಕೆ ಒಂದು ಪತ್ರಿಕೆಗಳಿಗೆ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮೊದಲ ಪರೀಕ್ಷೆಗೆ ಒಟ್ಟು 6 ಲಕ್ಷದ 84 ಸಾವಿರ 255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 3 ಲಕ್ಷ 46 ಸಾವಿರ 936 ಬಾಲಕರು ಹಾಗೂ 3 ಲಕ್ಷ 37 ಸಾವಿರ 319 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ರೆಗ್ಯುಲರ್ ವಿದ್ಯಾರ್ಥಿಗಳು 6,00,519, ಪುನರಾವರ್ತಿತ ಅಭ್ಯರ್ಥಿಗಳು- 61,808 ಹಾಗೂ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 21,928 ಪರೀಕ್ಷೆ ಬರೆಯಲಿದ್ದಾರೆ.

ಇದನ್ನು ಓದಿ: ಮಾಲೂರಿನಲ್ಲಿ ಜನತಾ ಜಲಧಾರೆ ಜೊತೆ ಉಚಿತ ಪೆಟ್ರೋಲ್ ಧಾರೆ; ಬಂಪರ್ ಆಫರ್​ ನೀಡಿದ ಜೆಡಿಎಸ್​ ಮುಖಂಡ

ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರಲಿದ್ದು, 200 ಮೀಟರ್ ನಿಷೇದಾಜ್ಞೆ ಜಾರಿಯಾಗಿದೆ. ಪರೀಕ್ಷೆ ಪ್ರವೇಶ ಪತ್ರ ತೋರಿ KSRTC ಹಾಗೂ BMTC ಬಸ್ ನಲ್ಲಿ ಉಚಿತ ಸೇವೆ ಇರಲಿದೆ. ನಾಳೆ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಸ್ವಲ್ಪ ಆತಂಕಕ್ಕೆ ಒಳಗಾಗದೇ ಪರೀಕ್ಷೆ ಬರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಸಮವಸ್ತ್ರ ಪಾಲನೆ ಕಡ್ಡಾಯ

ಇನ್ನು ಎಸ್​ಎಸ್​ಎಲ್​​  ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಕಡ್ಡಾಯ ಪಾಲನೆ ಮಾಡುವಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.  ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಪಾಲನೆ ಮಾಡುವುದು ಅವಶ್ಯ ಆಗಿದೆ.  ಈ ಸಂಬಂಧ ಈಗಾಗಲೇ ಆಯಾ ಕಾಲೇಜುಗಳ  ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದೆ. ಕೋರ್ಟ್ ಅದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ

ಇದನ್ನು ಓದಿ: ಮಂಗಳೂರಿನಲ್ಲಿ ದರ್ಗಾ ನವೀಕರಣದ ವೇಳೆ ಹಿಂದೂ ದೇವಸ್ಥಾನ ಪತ್ತೆ!

ಪರೀಕ್ಷೆಯ ವಿವರ

ಏಪ್ರಿಲ್​  22ರಿಂದ ಪರೀಕ್ಷೆ ಆರಂಭವಾಗಲಿದ್ದು, ಮೊದಲನೇ ದಿನ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. 2ನೇ ದಿನ ಏಪ್ರಿಲ್​ 23ಕ್ಕೆ, ಹಿಂದಿ ಹಾಗೂ ಏಪ್ರಿಲ್ 25ಕ್ಕೆ ಅರ್ಥಶಾಸ್ತ್ರ ಪರೀಕ್ಷೆ ಇರುತ್ತೆ.  ಏಪ್ರಿಲ್​ 26 ರಂದು ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ ವಿಷಯಕ್ಕೆ ಪರೀಕ್ಷೆ ಇರಲಿದೆ. ಏಪ್ರಿಲ್​ 27ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ವಿಷಯಗಳ ಪರೀಕ್ಷೆ ನಡೆಯಲಿದೆ. ಏಪ್ರಿಲ್​ 28ಕ್ಕೆ ಕನ್ನಡ, ಅರೇಬಿಕ್, ಏಪ್ರಿಲ್​ 30 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಹಾಗೂ ಮೇ 2 ಕ್ಕೆ  ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮೇ 4ರಂದು ಇಂಗ್ಲಿಷ್ ವಿಷಯಕ್ಕೆ ಪರೀಕ್ಷೆ ನಡೆಯಲಿದೆ.

ಮೇ 5 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಮೇ 6ಕ್ಕೆ ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ ವಿಷಯ ಪರೀಕ್ಷೆ ನಡೆಯಲಿದೆ.  ಮೇ 7 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮೇ 9 - ಇತಿಹಾಸ, ಭೌತಶಾಸ್ತ್ರ ಕೊನೆಯ ದಿನವಾದ ಮೇ 11 ರಂದು ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.
Published by:Seema R
First published: