ಗದ್ದಲ ಗಲಾಟೆಗಳ ಮಧ್ಯೆ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಅಂತ್ಯ

ಎರಡನೇ ಹಂತದ ಗ್ರಾಮ ಪಂಚಾಯಿತಿ ಮತದಾನದ ವೇಳೆ ಎತ್ತಿನ ಬಂಡಿಯಲ್ಲಿ ಬಂದು ಮತ ಚಾಲಾಯಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದಲ್ಲಿ ನಡೆದಿದೆ.

ಮತದಾನದಲ್ಲಿ ಭಾಗಿಯಾದ ಮಹಿಳೆಯರು

ಮತದಾನದಲ್ಲಿ ಭಾಗಿಯಾದ ಮಹಿಳೆಯರು

  • Share this:
ಚಿಕ್ಕೋಡಿ(ಡಿಸೆಂಬರ್.27):​ ಬೆಳಗಾವಿ ಜಿಲ್ಲೆಯಾದ್ಯಂತ ನಡೆದ ನಡೆದ ಗ್ರಾಮ ಪಂಚಾಯಿತಿಯ ಎರಡನೇ ಹಂತದ ಚುನಾವಣೆ ಹಲವು ಗದ್ದಲು ಗಲಾಟೆಗಳ ಮಧ್ಯೆ ಅಂತ್ಯವಾಗಿದೆ. ಜಿಲ್ಲೆಯ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ಹಾಗೂ ರಾಯಬಾಗ ತಾಲೂಕಿನ ಒಟ್ಟು 218 ಗ್ರಾಮ ಪಂಚಾಯಿಗಳಿಗೆ ಚುನಾವಣೆ ನಡೆದಿದ್ದು ಬೆಳಿಗ್ಗೆಯಿಂದಲೇ ಮತದಾದರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಚುನಾವಣಾ ವೇಳೆ ಕೆಲವೆಡೆ ಶತಾಯುಸಿ ಮತದಾರರು ಬಂದು ಮತ ಚಲಾವಣೆ ಮಾಡುವ ಮೂಲಕ ಇನ್ನುಳಿದವರಿಗೆ ಮಾದರಿಯಾದರೆ ಇನ್ನು ಕೆಲವಡೆ ಎತ್ತಿನ ಬಂಡಿಯಲ್ಲಿ ಬಂದು ಮತ ಚಲಾಯಿಸುವ ಗಮನ ಸೆಳೆದಿದ್ದಾರೆ. ಇನ್ನು ಮತದಾನದ ವೇಳೆ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ನಡುವೆ  ಗಲಾಟೆ ನಡೆದಿರುವ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಹಾಗೂ ಕರಗಾಂವ ಗ್ರಾಮದಲ್ಲಿ ನಡೆದಿದೆ. ಮತಗಟ್ಟೆಯೊಳಗೆ ಬಂದು ಅಭ್ಯರ್ಥಿಗಳು ಪ್ರಚಾರ ಮಾಡಿದ ಹಿನ್ನಲೆ ವಿರೋದ ಪಕ್ಷದ ಅಭ್ಯರ್ಥಿಗಳು ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ.

ಕರೋಶಿ ಗ್ರಾಮದ ವಾರ್ಡ ನಂಬರ ಮೂರು ಹಾಗೂ ಕರಗಾಂವ ಗ್ರಾಮದ ವಾರ್ಡ ಎರಡರಲ್ಲಿ ಘಟನೆ ನಡೆದಿದ್ದು, ಪೋಲಿಸರ ಮದ್ಯ ಪ್ರವೇಶದಿಂದಾಗಿ ಗಲಾಟೆ ಶಾಂತವಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಿಂದಾಗಿ ಮತದಾನ ಶಾತಿಯುತವಾಗಿ ನಡೆದಿದೆ.ಆದ್ರೆ ಗ್ರಾಮದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿ ಬಳಿಕ ಶಾತಿಯುತವಾಗಿ ಮತದಾನ ಪ್ರಕ್ರೀಯೆ ಮುಗಿದಿದೆ.

ದುಡ್ಡಿನ ವಿಚಾರವಾಗಿ ಅಭ್ಯರ್ಥಿ ತಮ್ಮನಿಂದ ಮಾರಣಾಂತಿಕ ಹಲ್ಲೆ;

ದುಡ್ಡು ಹಂಚಲು ವಿರೋದಿಸಿದಕ್ಕೆ ಅಬ್ಯರ್ಥಿ ತಮ್ಮನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ  ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನ್ಯಾಳ ಗ್ರಾಮ‌ ಪಂಚಾಯಿತಿಯ ವಾರ್ಡ್​​ ನಂಬರ್ 1 ರಲ್ಲಿ ನಿನ್ನೆ ದಿನ‌ ರಾತ್ರಿ ಅಭ್ಯರ್ಥಿಯ ತಮ್ಮ ಮತದಾರರಿಗೆ ಹಣ ಹಂಚುತ್ತಿರುವಾಗ ಸ್ಥಳಿಯರು ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಅಭ್ಯರ್ಥಿ ತಮ್ಮ ಚಂದ್ರು ತಳವಾರ ಹಾಗೂ ಸಂಗಡಿಗರು ವಿರೋಧ ವ್ಯಕ್ತಪಡಿಸಿದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯಶ್ವಂತ ಮ್ಯಾಗಡೆ ಎಂಬವವರು ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ,

ಗಣ್ಯರ ಮತದಾನ;

ಇನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರಾಜ್ಯದ ರಾಜಕೀಯ ಮುಖಂಡರು ಹಿಂದೆ ಉಳಿಯದೆ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಮ್ಮ ಹುಟ್ಟುರು ಪಿ.ಕೆ.ನಾಗನೂರ ಗ್ರಾಮದಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ : ಚನ್ನಪಟ್ಟಣದಲ್ಲಿ 25ಕ್ಕೂ ಹೆಚ್ಚು ಪಂಚಾಯಿತಿಗಳು ಬಿಜೆಪಿ ತೆಕ್ಕೆಗೆ, ಕುಮಾರಸ್ವಾಮಿ ಕಾರ್ಯವೈಖರಿ ಈಗ ಗೊತ್ತಾಗುತ್ತೆ: ಯೋಗೇಶ್ವರ್

ಅಲ್ಲದೆ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಕೆಂಪವಾಡ ಗ್ರಾಮದಲ್ಲಿ ತಮ್ಮ ಕುಟುಂಬ ಸಮೇತವಾಗಿ ಮತ ಚಲಾಯಿದ್ದರೆ ಇತ್ತ ಕೆ.ಎಲ್.ಈ ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕುಟುಂಬ ಸಮೇತ ಹಕ್ಕು ಚಲಾವಣೆ ಮಾಡಿದ್ದಾರೆ.

ಒಟ್ಟಿನಲ್ಲಿ ಹಲವು ಗದ್ದಲ ಗಲಾಟೆಗಳ ಮಧ್ಯೆ ಚುನಾವಣಾ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
Published by:G Hareeshkumar
First published: