lok sabha elections 2019: ನಾಳೆ ಎರಡನೇ ಹಂತದ ಮತದಾನ; ರಾಜ್ಯದ 14 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಜಿದ್ದಾಜಿದ್ದಿ

2ನೇ ಹಂತದ ಮತದಾನದಲ್ಲಿ ಅಸ್ಸಾಂನ 5, ಬಿಹಾರದ 5,  ಛತ್ತೀಸ್​ಘಡದ 3, ಜಮ್ಮು-ಕಾಶ್ಮೀರದ 2, ಕರ್ನಾಟಕದ 14, ಮಹಾರಾಷ್ಟ್ರದ 10, ಮಣಿಪುರ್​ನ 01, ಓದಿಶಾ 05, ತಮಿಳುನಾಡು 39, ತ್ರಿಪುರ 01, ಉತ್ತರಪ್ರದೇಶದ 08, ಪಶ್ಚಿಮ ಬಂಗಾಳದ 03 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

MAshok Kumar | news18
Updated:April 17, 2019, 9:06 AM IST
lok sabha elections 2019: ನಾಳೆ ಎರಡನೇ ಹಂತದ ಮತದಾನ; ರಾಜ್ಯದ 14 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಜಿದ್ದಾಜಿದ್ದಿ
ಸಾಂದರ್ಭಿಕ ಚಿತ್ರ.
MAshok Kumar | news18
Updated: April 17, 2019, 9:06 AM IST
ಬೆಂಗಳೂರು (ಏ.17) : ಗುರುವಾರ ದೇಶದಾದ್ಯಂತ 2ನೇ ಹಂತದ ಮತದಾನ ನಡೆಯಲಿದ್ದು, ಕರ್ನಾಟಕ ಸೇರಿದಂತೆ 13 ರಾಜ್ಯಗಳ 97 ಕ್ಷೇತ್ರಗಳಿಗೆ ಮತದಾನ ನಡೆಯಲಿವೆ. ಈ ಪೈಕಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಮೇಲುಗೈ ಸಾಧಿಸುವವರು ಯಾರು? ಎಂಬುದು ಬಹುತೇಕ ನಾಳೆ ಸಂಜೆಯ ಒಳಗೆ ಸ್ಪಷ್ಟವಾಗಲಿದೆ.

2ನೇ ಹಂತದ ಮತದಾನದಲ್ಲಿ ಅಸ್ಸಾಂನ 5, ಬಿಹಾರದ 5,  ಛತ್ತೀಸ್​ಘಡದ 3, ಜಮ್ಮು-ಕಾಶ್ಮೀರದ 2, ಕರ್ನಾಟಕದ 14, ಮಹಾರಾಷ್ಟ್ರದ 10, ಮಣಿಪುರ್​ನ 01, ಓದಿಶಾ 05, ತಮಿಳುನಾಡು 39, ತ್ರಿಪುರ 01, ಉತ್ತರಪ್ರದೇಶದ 08, ಪಶ್ಚಿಮ ಬಂಗಾಳದ 03 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ :  ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ.

ಇದನ್ನೂ ಓದಿ : ಚುನಾವಣೆ ಸಮೀಕ್ಷೆ; ಬೆಂಗಳೂರು ದಕ್ಷಿಣದಲ್ಲಿ ದಶಕಗಳ ಬಿಜೆಪಿ ಪಾರುಪತ್ಯಕ್ಕೆ ಕಾಂಗ್ರೆಸ್​ ಹಾಕತ್ತಾ ಬ್ರೇಕ್​?

ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಮಂಡ್ಯ, ಮೈಸೂರು-ಕೊಡುಗು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನಾಳೆ ಮತದಾನ ನಡೆಯಲಿದ್ದು ನೂರಾರು ಅಭ್ಯರ್ಥಿಗಳ ಹಣೆ ಬರೆಹ ಇವಿಎಂ ಯಂತ್ರಗಳಲ್ಲಿ ದಾಖಲಾಗಲಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ : ರಾಜ್ಯದಲ್ಲಿ ನಾಳೆ ನಡೆಯಲಿರುವ ಮತದಾನದ ಪೈಕಿ ಮಂಡ್ಯ, ತುಮಕೂರು, ಕೋಲಾರ ಹಾಗೂ ಹಾಸನ ಕ್ಷೇತ್ರಗಳು ಇಡೀ ರಾಜ್ಯದ ಗಮನ ಸೆಳೆದಿವೆ. ಇದೇ ಕಾರಣಕ್ಕೆ ಈ ಕ್ಷೇತ್ರಗಳನ್ನು ಸೂಕ್ಷ್ಮ ವಲಯಗಳು ಎಂದು ಗುರುತಿಸಲಾಗಿದ್ದು ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
Loading...

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಎನ್​. ನೀಲಮಣಿ ರಾಜು “14 ಕ್ಷೇತ್ರದ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳು ಎಂದು ವಿಂಗಡಿಸಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗುವುದು. ಇದಕ್ಕೆಂದು ಸುಮಾರು 90,997 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಚುನಾವಣಾ ಸಮೀಕ್ಷೆ; ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಕನಸಿಗೆ ಕುತ್ತಾಗಲಿರುವ ಮೈತ್ರಿ ಅಭ್ಯರ್ಥಿ

ಸಾಲು ಸಾಲು ರಜೆ ಪ್ರಯಾಣಿಕರ ಪರದಾಟ : ಏಪ್ರಿಲ್ 18 ರಂದು ಮತದಾನದ ಪ್ರಯುಕ್ತ ಸರ್ಕಾರಿ ರಜೆ ನೀಡಲಾಗಿದೆ. ಆದರೆ ಅದರ ಹಿಂದಿನ ದಿನ ಅಂದರೆ ಏ. 17 ರಂದು ಮಹಾವೀರ ಜಯಂತಿ ರಜೆ, ಏ.19 ರಂದು ಗುಡ್​ಫ್ರೈಡೆ ರಜೆ ಹಾಗೂ ಶನಿವಾರ ಮತ್ತು ಭಾನುವಾರ ಮಾಮೂಲಿ ರಜೆ ಇದೆ.

ಹೀಗೆ ಬುಧವಾರದಿಂದ ಭಾನುವಾರದ ವರೆಗೆ ಸಾಲು ಸಾಲು ರಜೆಗಳಿರುವ ಕಾರಣ ಇತರೆ ಜಿಲ್ಲೆಯ ರಾಜಧಾನಿವಾಸಿಗಳು ಬುಧವಾರದ ಸಂಜೆಯಿಂದಲೆ ತಮ್ಮ ಜಿಲ್ಲೆಗಳ ಕಡೆ ತೆರಳುತ್ತಿದ್ದಾರೆ. ಪರಿಣಾಮ ಬುಧವಾರ ಸಂಜೆ ಮೆಜೆಸ್ಟಿಕ್​ನಲ್ಲಿ ಬಸ್​ಗಳಿಗಾಗಿ ಜನ ಕಾಯುವ ದೃಶ್ಯ ಕಂಡುಬಂದಿತ್ತು. ಎಲ್ಲಾ ಜಿಲ್ಲೆಗಳ ಸರ್ಕಾರಿ ಬಸ್​ಗಳು ಬಹುತೇಕ ತುಂಬಿದ್ದವು ಹೀಗಾಗಿ ಜನದಟ್ಟಣೆ ಮಾರ್ಗದಲ್ಲಿ 3,300 ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್​ಆರ್​ಟಿಸಿ ತಿಳಿದಿದೆ. ಅಲ್ಲದೆ ಖಾಸಗಿ ಬಸ್​ಗಳಿಗೂ ಬೇಡಿಕೆ ಹೆಚ್ಚಾಗಿದೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626