Bengaluru Rain: ಬೆಂಗಳೂರಿನ ಇತಿಹಾಸದಲ್ಲಿ 2ನೇ ಅತಿ ದೊಡ್ಡ ಮಳೆ, ಬಹುತೇಕ ಕೆರೆಗಳು ಭರ್ತಿ!

ಸಿಲಿಕಾನ್‌ ಸಿಟಿ ಬೆಂಗಳೂರು ನಿನ್ನೆ ಸುರಿದ ಮಳೆಗೆ ಅಕ್ಷರಶಃ ಮುಳುಗೇಳುತ್ತಿದೆ. ಅಷ್ಟಕ್ಕೂ ಈ ಪಾಟಿ ಮಳೆ ಐಟಿ ಬಿಟಿ ಸಿಟಿಯಲ್ಲಿ ಹಿಂದೆಂದಾದ್ರೂ ಬಂದಿತ್ತಾ? ಯಾಕಿಷ್ಟು ಅನಾಹುತವಾಗ್ತಿದೆ. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಏನು ಹೇಳ್ತಾರೆ? ಈ ಕುರಿತು ರಿಪೋರ್ಟ್ ಇಲ್ಲಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ

ಬೆಂಗಳೂರಿನಲ್ಲಿ ಭಾರೀ ಮಳೆ

  • Share this:
ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ನಿನ್ನೆ ಸುರಿದ ಮಳೆಗೆ ಅಕ್ಷರಶಃ ಮುಳುಗೇಳುತ್ತಿದೆ. ಇಂದು ಕೂಡ ಭಾರೀ ಮಳೆಯಾಗ್ತಿದೆ (Heavy Rain). ಅಷ್ಟಕ್ಕೂ ಈ ಪಾಟಿ ಮಳೆ ಐಟಿ ಬಿಟಿ ಸಿಟಿಯಲ್ಲಿ (IT BT city) ಹಿಂದೆಂದಾದ್ರೂ ಬಂದಿತ್ತಾ? ಯಾಕಿಷ್ಟು ಅನಾಹುತವಾಗ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ (Record) ಮಳೆ ಈ ಬಾರಿ ಮಳೆಗಾಲದಲ್ಲಿ ಸುರಿದಿದೆ. ಅದರಲ್ಲೂ ಐಟಿಬಿಟಿ ವಲಯ ಮಹದೇವಪುರ (Mahadevapura) ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ ಭಾರೀ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದ್ದೆ. ಒಟ್ಟಾರೆ ಈ ಬಾರಿಯ ಮಳೆಗಾಲದಲ್ಲಿ 709 ಎಂ.ಎಂ ಮಳೆಯಾಗಿದೆ.

ಬೆಂಗಳೂರಿನಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ ಮಳೆ ಈ ಬಾರಿ ಮಳೆಗಾಲದಲ್ಲಿ ಸುರಿದಿದೆ. ಅದರಲ್ಲೂ ಐಟಿಬಿಟಿ ವಲಯ ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ ಭಾರೀ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದೆ.

ಪ್ರತಿ ವರ್ಷಕ್ಕಿಂತ ಈ ಬಾರಿ ಎರಡುವರೆ ಪಟ್ಟು ಹೆಚ್ಚು ಮಳೆ
ಈ ಬಾರಿಯ ಮಳೆಗಾಲದಲ್ಲಿ 709 ಎಂ.ಎಂ ಮಳೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಎರಡುವರೆ ಪಟ್ಟು ಹೆಚ್ಚು ಮಳೆ ಸುರಿದಿದ್ದು, 1998ರ ಮಳೆಗಾಲದಲ್ಲಿ ಅತಿ ಹೆಚ್ಚು ಎಂದರೆ 725 ಎಂ. ಎಂ ಮಳೆಯಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಕ್ಕೆ ನಟಿ ರಮ್ಯಾ ಕಿಡಿ, ಇವರಿಗೆ ನನ್ನ ಮತ ಎಂದ ಮೋಹಕ ತಾರೆ!

ಎಲ್ಲೆಲ್ಲಿ ಮಳೆಯಿಂದ ಅನಾಹುತ?
ಮಹದೇವಪುರ ವಲಯದ 28 ಕಡೆಗಳಲ್ಲಿ ಮಳೆ ನೀರು ನುಗ್ಗಿದೆ. ಬೊಮ್ಮನಹಳ್ಳಿಯಲ್ಲಿ 9 ಕಡೆ ನೀರು ನುಗ್ಗಿದೆ. ಈಸ್ಟ್ ಜೋನ್ ನಲ್ಲಿ 24 ಕಡೆ ಮಳೆ ನೀರು ನುಗ್ಗಿದೆ. ದೊಮ್ಮಲೂರು ಭಾಗದಲ್ಲಿ ಮಳೆ ನೀರಿನ ತೊಂದರೆ ಇದೆ.

ಈಜಿಪುರದಲ್ಲಿ 16 ಮನೆಗಳಿಗೆ ನೀರು ನುಗ್ಗಿದೆ. ಕೋರಮಂಗಲದಲ್ಲಿ 26 ಕಡೆ ಮನೆಯೊಳಗೆ ನೀರು ನುಗ್ಗಿರುವ ದೂರುಗಳು ಬಂದಿವೆ. ಹೆಚ್.ಎ.ಎಲ್ ಬಳಿ ಅಪಾರ್ಟ್ಮೆಂಟ್ ಒಳಗೆ ಜಲಾವೃತವಾಗಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅನಾಹುತ ಆಗಿಲ್ಲ?
ಬೆಂಗಳೂರು ಕೇಂದ್ರ ಭಾಗದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎತ್ತರದಲ್ಲಿ ಇರುವುದರಿಂದ ಮಳೆ ನೀರು ನಿಂತಿಲ್ಲ. ಸೌತ್, ವೆಸ್ಟ್, ಆರ್ ಆರ್ ನಗರ ವಲಯಗಳಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ. ಈ ಬಾರಿ ಬೆಂಗಳೂರಿನ ಬಹುತೇಕ ಕೆರೆಗಳು ತುಂಬಿವೆ.

ಬೆಂಗಳೂರಿನ ಬಹುತೇಕ ಕೆರೆಗಳು ಭರ್ತಿ
ಬೆಳ್ಳಂದೂರು, ವಿಭೂತಿಪುರ, ಬೇಗೂರು ಕೆರೆ ನೀರು ತುಂಬಿ ಹರಿಯುತ್ತಿವೆ. ಸಾವಳಕೆರೆ ನೀರು ಇಕೊಸ್ಪೇಸ್ ಬೆಳ್ಳಂದೂರು ರಸ್ತೆಗೆ ಹರಿದುಬರುತ್ತಿದೆ. ಈಗಲೂ ಎರಡು ಮೂರು ಅಡಿ ಮಳೆ ನೀರು ರಸ್ತೆಯ ಮೇಲೆ ನಿಂತಿದೆ. ಇನ್ನೆರಡು ದಿನ ಮಳೆ ಬಾರದಿದ್ದರೂ ಇದೇ ಪರಿಸ್ಥಿತಿ ಇರಲಿದೆ.

ಮನೆಗೆ ನೀರು ನುಗ್ಗಲು ಒತ್ತುವರಿ ಮಾಡಿದ ರಾಜಕಾಲುವೆ ಕಾರಣ
ಇನ್ನು ಮನೆಗೆ ನೀರು ನುಗ್ಗಲು ಒತ್ತುವರಿ ಮಾಡಿದ ರಾಜಕಾಲುವೆ ಕಾರಣ. ರಾಜಕಾಲುವೆ ಒತ್ತುವರಿಗೆ ಯಾವುದೇ ನೋಟೀಸ್ ನೀಡುವ ಅವಶ್ಯಕತೆ ಇಲ್ಲ. ನೋಟೀಸ್ ನೀಡದೆ ರಾಜಕಾಲುವೆ ಮೇಲಿರುವ ಕಟ್ಟಡ ತೆರವುಗೊಳಿಸುತ್ತೇವೆ ಅಂತಾ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಕಾಫಿನಾಡಿನ ಇತಿಹಾಸದಲ್ಲೇ ಒಂದು ಗಂಟೆಯಲ್ಲಿ 200 ಮಿಮೀ ಮಳೆ! ಚಿಕ್ಕಮಗಳೂರಿನ ಜನ ತತ್ತರ

200 ಕಟ್ಟಡಗಗಳ ತೆರವು
ಒತ್ತುವರಿಯಾದ 700 ಕಟ್ಟಡಗಳಲ್ಲಿ 200 ಕಟ್ಟಡಗಗಳನ್ನು ತೆರವುಗೊಳಿಸಲಾಗಿದೆ. 150 ರಾಜಕಾಲುವೆ ಬಫರ್ ಜೋನ್ ನಲ್ಲಿ ಕಟ್ಟಡಗಳು ಇವೆ. 350 ಒತ್ತುವರಿ ಕಟ್ಟಡಗಳು ಅಕ್ಟೋಬರ್ ಅಂತ್ಯದೊಳಗೆ ಎಲ್ಲ ಒತ್ತುವರಿ ತೆರವು ಮುಗಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಸಿಎಂ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿ ಜಾಗೃತ ವಹಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ. ನಾಳೆ, ನಾಡಿದ್ದು ಮಳೆಯಾದರೆ ಏನ್ ಮಾಡಬೇಕು ಅನ್ನೋ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ‌. ಬೆಂಗಳೂರಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
Published by:Thara Kemmara
First published: