• Home
 • »
 • News
 • »
 • state
 • »
 • Murugha Case: ಬೇಲ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ಮುರುಘಾ ಸ್ವಾಮಿಗೆ ಶಾಕ್ ಕೊಟ್ಟ ಪೊಲೀಸರು!

Murugha Case: ಬೇಲ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ಮುರುಘಾ ಸ್ವಾಮಿಗೆ ಶಾಕ್ ಕೊಟ್ಟ ಪೊಲೀಸರು!

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

ಜೈಲಲ್ಲಿರುವ ಸ್ವಾಮಿ ಬೇಲ್ ಪಡೆದು ಹೊರ ಬರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ‌. ಆದರೀಗ ಬೇಲ್ ನಿರೀಕ್ಷೆಯಲ್ಲಿದ್ದ ಮುರುಘಾ ಸ್ವಾಮಿಗೆ ಪೋಲೀಸರು ಎರಡನೇ ಫೋಕ್ಸೋ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿ ಮತ್ತೆ ಶಾಕ್ ನೀಡಿದ್ದಾರೆ.

 • News18 Kannada
 • 3-MIN READ
 • Last Updated :
 • Chitradurga, India
 • Share this:

ಚಿತ್ರದುರ್ಗ(ಜ.24): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault Case) ಆರೋಪದ ಹಿನ್ನಲೆ, ಚಿತ್ರದುರ್ಗದ ಮುರುಘಾ ಸ್ವಾಮಿ (Murugha Swamiji) ವಿರುದ್ದ ಎರಡು ಫೋಕ್ಸೋ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಮುರುಘಾ ಸ್ವಾಮಿ ಬಂಧನವಾಗಿ ಜೈಲು ಸೇರಿ ಬರೋಬ್ಬರಿ ಐದು ತಿಂಗಳು ತುಂಬುತ್ತಿದೆ. ಜೈಲಲ್ಲಿರುವ ಸ್ವಾಮಿ ಬೇಲ್ (Bail) ಪಡೆದು ಹೊರ ಬರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ‌. ಆದರೀಗ ಬೇಲ್ ನಿರೀಕ್ಷೆಯಲ್ಲಿದ್ದ ಮುರುಘಾ ಸ್ವಾಮಿಗೆ ಪೋಲೀಸರು ಎರಡನೇ ಫೋಕ್ಸೋ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿ ಮತ್ತೆ ಶಾಕ್ ನೀಡಿದ್ದಾರೆ.


ಎರಡನೇ ಫೋಕ್ಸೋ ಪ್ರಕರಣದ ಚಾರ್ಜ್ ಶೀಟ್


ಎರಡನೇ ಫೋಕ್ಸೋ ಪ್ರಕರಣದಲ್ಲಿ ಎ1 ಮುರುಘಾ ಸ್ವಾಮಿ ಸೇರಿದಂತೆ ಲೇಡಿ ವಾರ್ಡನ್, ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರ, ಮಹಲಿಂಗ, ಹಾಗೂ ಕರಿಬಸಯ್ಯ ವಿರುದ್ದ ಸಂತ್ರಸ್ಥೆಯರ ತಾಯಿ ದೂರು ನೀಡಿ FIR ದಾಖಲಾಗಿ ಮೂರು ತಿಂಗಳು ಕಳೆದಿವೆ. ಇದೀಗ ಈ ಪ್ರಕರಣದಲ್ಲಿ ತನಿಖೆ ನಡೆಸಿರುವ ಪೋಲೀಸರು ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ, ಜನವರಿ 10ರಂದೇ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.‌


ಇದನ್ನೂ ಓದಿ: Murugha Mutt: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ


ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು


ಇನ್ನು ಲೈಂಗಿಕ ದೌರ್ಜನ್ಯ ಕುರಿತು ಮುರುಘಾ ಮಠದ ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೈಸೂರಿನ ನಜರಾಬಾದ್ ಠಾಣೆ ಗೆ ದೂರು ನೀಡಿ FIR ದಾಖಲಾಗಿತ್ತು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅ.13, 2022ರಂದು ದಾಖಲಾಗಿದ್ದ 2ನೇ ಫೋಕ್ಸೋ ಪ್ರಕರಣ ಕುರಿತು ಜನವರಿ 10ರಂದು ಗ್ರಾಮಾಂತರ ಠಾಣೆ ಪೊಲೀಸರು ಗೌಪ್ಯವಾಗಿಯೇ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.


ಇದನ್ನೂ ಓದಿ: Murugha Case: ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯ ಕೊಡಿಸಿ ಇಲ್ಲ, ದಯಾ ಮರಣ ನೀಡಿ!


ಗೌಪ್ಯತೆ ಕಾಪಾಡಿದ ಪೊಲೀಸರು


ಕೋರ್ಟ್ ನಲ್ಲಿ ಚಾರ್ಜ್ ಶೀಟ್, ಅಧಿಕೃತ ನಂಬರ್ ಆಗುವುದು ಬಾಕಿಯಿದ್ದು, ಚಾರ್ಜ್ ಶೀಟ್ ನಂಬರ್ ಅಧಿಕೃತವಾದ ಬಳಿಕ‌ ಪೊಲೀಸರಿಂದ ಮಾಹಿತಿ ಹೊರ ಬರುವ ಸಾಧ್ಯತೆ ಇದೆ. ಯಾಕೆಂದರೆ, 1ನೇ ಕೇಸ್‌‌ಲ್ಲಿ ಚಾರ್ಜ್‌ಶೀಟ್ ಲೀಕ್‌ ಆಗಿದೆ ಎಂದು ಚಿತ್ರದುರ್ಗ ಕೋರ್ಟ್ ತನಿಖಾಧಿಕಾರಿ ಡಿವೈಎಸ್ಪಿ ಅನಿಲ್‌ಗೆ ನೋಟಿಸ್ ನೀಡಿತ್ತು ಆದ್ದರಿಂದಲೇ ಪೊಲೀಸರು ಗೌಪ್ಯತೆ ಕಾಪಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮೊದಲನೇ ಪ್ರಕರಣದಲ್ಲಿ ಬೇಲ್ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾ ಮಾಡಿತ್ತು. ಬಳಿಕ, ಹೈಕೋರ್ಟ್ ಮೆಟ್ಟಿಲೇರಿದ್ದ ಸ್ವಾಮಿ ಬೇಲ್ ಗೆ ಅರ್ಜಿ ಸಲ್ಲಿಸಿದ್ರು ಆದರೆ ಅಷ್ಟೊತ್ತಿಗಾಗಲೇ ಮೊದಲನೇ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದರಿಂದ ಮತ್ತೆ ಜಿಲ್ಲಾ ಕೋರ್ಟಲ್ಲಿ ಚಾರ್ಜ್ ಶೀಟ್ ಮೇಲೆ ಬೇಲ್ ಪಡೆಯುವಂತೆ ಹೈಕೋರ್ಟ್ ಸೂಚಿಸಿತ್ತು‌‌. ಇದೀಗ ಕೋರ್ಟ್​ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯುತ್ತಿರುವ ವೇಳೆಗೆ ಮತ್ತೊಂದು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಬೇಲ್ ಅರ್ಜಿಗೆ ಸಂಕಷ್ಟ ತಂದಿದೆ.

Published by:Precilla Olivia Dias
First published: