ಭಾರತದ ಕೀರ್ತಿ ಪತಾಕೆ ಹಾರಿಸಿದ ಹುಬ್ಬಳ್ಳಿ ಬಾಲ ಪ್ರತಿಭೆ ಸಾನ್ವಿ ಅಂಗಡಿ

news18
Updated:August 31, 2018, 4:46 PM IST
ಭಾರತದ ಕೀರ್ತಿ ಪತಾಕೆ ಹಾರಿಸಿದ  ಹುಬ್ಬಳ್ಳಿ ಬಾಲ ಪ್ರತಿಭೆ ಸಾನ್ವಿ ಅಂಗಡಿ
news18
Updated: August 31, 2018, 4:46 PM IST
ಪರಶುರಾಮ್ ತಹಶೀಲ್ದಾರ್, ನ್ಯೂಸ್ 18 ಕನ್ನಡ

ಹುಬ್ಬಳ್ಳಿ (ಆಗಸ್ಟ್ . 31) :  ಹುಬ್ಬಳ್ಳಿಯ ಬಾಲ ಪ್ರತಿಭೆಯೊಬ್ಬಳು ಗಣಿತ ಮತ್ತು ಸಂಖ್ಯಾಶಾಸ್ತ್ರದ ಸ್ಪರ್ಧೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜಯಗಳಿಸುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಅಬ್ಯಾಕಸ್ ನಲ್ಲಿ ಮಿಂಚುತ್ತಿರುವ ಕನ್ನಡತಿಯ ಕುರಿತ ವರದಿ ಓದಿ....

ವಾಣಿಜ್ಯ ನಗರ ಹುಬ್ಬಳ್ಳಿಯ ಬಾಲಕಿ ಸಾನ್ವಿ ಅಂಗಡಿ ಅಂತರಾಷ್ಟ್ರೀಯ ಗಣಿತ ಮತ್ತು ಸಂಖ್ಯಾಶಾಸ್ತ್ರ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದಿದ್ದಾಳೆ. ವಿಶಿಷ್ಟ ಸಾಧನೆಯ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಥೈಲ್ಯಾಂಡಿನ ಕೋರಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಎರಡು ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. ಚೀನಾ, ಹಾಂಕಾಂಗ್, ಕೋರಿಯಾ, ಮಲೇಷಿಯಾ, ಸಿಂಗಾಪೂರ್, ಥೈವಾನ್ ಮತ್ತು ಥೈಲ್ಯಾಂಡಿನ ಸ್ಪರ್ಧಿಗಳನ್ನು ಹಿಂದಿಕ್ಕಿರುವ ಸಾನ್ವಿ ಪ್ರಶಸ್ತಿ ಗಳಿಸಿ ಮಿಂಚಿದ್ದಾಳೆ.

ಸಾನ್ವಿ ಹುಬ್ಬಳ್ಳಿಯ ಪರಿವರ್ತನ ಗುರುಕುಲ ಶಾಲೆಯಲ್ಲಿ ಐದನೆಯ ತರಗತಿ ಓದುತ್ತಿದ್ದಾಳೆ. ಎಜ್ಯುಸ್ಮಾರ್ಟ್‌ಇಂಕ್‌ ಸಂಸ್ಥೆಯಲ್ಲಿ ಅಬಾಕಸ್‌ ತರಬೇತಿ ಪಡೆದಿದ್ದಾಳೆ. ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾನ್ವಿ ಭಾರತವನ್ನು ಪ್ರತಿನಿಧಿಸಿದ್ದಳು.

ಈಗ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾಳೆ. ಗಣಿತ ಮತ್ತು ಸಂಖ್ಯಾಶಾಸ್ತ್ರದ ಅಧ್ಯಯನ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೆ. ಭಾರತೀಯ ವಿದ್ಯಾರ್ಥಿಗಳು ಯಾರಿಗೂ ಕಡಿಮೆಯಿಲ್ಲ ಎನ್ನುತ್ತಾಳೆ ಸಾನ್ವಿ.

ಅಬ್ಯಾಕಸ್‌ನಿಂದ ಮಕ್ಕಳ ಏಕಾಗ್ರತೆ ಮತ್ತು ಕ್ರಿಯಾಶೀಲತೆ ಹೆಚ್ಚುತ್ತದೆ. ಎಲ್‌ಕೆಜಿಯಿಂದಲೇ ವಿದ್ಯಾರ್ಥಿಗಳು ಅಬ್ಯಾಕಸ್‌ ತರಬೇತಿ ಪಡೆಯಬಹುದು. ಮಕ್ಕಳ ಗಣೀತ ಸಾಮರ್ಥ್ಯ ಹೆಚ್ಚಿಸಲು ದೇಶದಲ್ಲಿ ಈ ಮಾದರಿಯ ತರಬೇತಿ ಹೆಚ್ಚಿಸಬೇಕಾಗಿದೆ ಎನ್ನುವುದು ಸಾನ್ವಿ ಅಂಗಡಿ ಮತ್ತವಳ ಪೋಷಕರ ಅಭಿಪ್ರಾಯ.

ಒಟ್ಟಾರೆ ಭಾರತೀಯ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...