ತುಮಕೂರಿನಲ್ಲಿ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಚಿರತೆ; ಇಂದಿನಿಂದಲೇ ಕೂಬಿಂಗ್ ಕಾರ್ಯಾಚರಣೆ ಶುರು

ಕುಣಿಗಲ್​​ ತಾಲೂಕಿನಾದ್ಯಂತ  ಜನ ಚಿರತೆ ಭಯದಿಂದ ಆತಂಕದಲ್ಲಿದ್ದಾರೆ.  ತಾಲೂಕಿನ ಹುಲಿಯೂರು ದುರ್ಗ, ಹೆಬ್ಬೂರು ಬಳಿಯ ಚಿಕ್ಕಮಳವಾಡಿ, ದೊಡ್ಡಮಳವಾಡಿ ಹಾಗೂ ಮಣಿಕುಪ್ಪೆ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ತೋಟದ ಕೆಲಸ, ತಮ್ಮ ಹೊಲ ಗದ್ದೆಗಳ ಕೆಲಸ ಮಾಡಲು ಜನರು ಮನೆಯಿಂದ ಹೊರಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ.

news18-kannada
Updated:January 12, 2020, 8:29 AM IST
ತುಮಕೂರಿನಲ್ಲಿ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಚಿರತೆ; ಇಂದಿನಿಂದಲೇ ಕೂಬಿಂಗ್ ಕಾರ್ಯಾಚರಣೆ ಶುರು
ತುಮಕೂರು ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿರುವ ಚಿರತೆ.
  • Share this:
ತುಮಕೂರು(ಜ.12): ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕು ಮಂದಿಯನ್ನು ಬಲಿ ಪಡೆದಿರುವ ನರಭಕ್ಷಕ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಇಂದಿನಿಂದ ಕೂಬಿಂಗ್​ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

2 ದಿನಗಳ ಹಿಂದೆ ಮಣ್ಣಕುಪ್ಪೆ ಗ್ರಾಮದ ಓರ್ವ ಬಾಲಕನನ್ನು ಚಿರತೆ ಬಲಿ ಪಡೆದಿತ್ತು. ಇದು ಚಿರತೆಯ ನಾಲ್ಕನೇ ಬಲಿಯಾಗಿತ್ತು. ಇದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದರು.  ಕಳೆದ ಮೂರು ತಿಂಗಳಲ್ಲಿ ನರಭಕ್ಷಕ ಚಿರತೆ ಮೂವರನ್ನು ಬಲಿ ತೆಗೆದುಕೊಂಡಿದೆ. ಆದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ. ನರಭಕ್ಷಕ ಚಿರತೆಯನ್ನು ಹಿಡಿಯಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು. ಈ‌ ಕೂಡಲೇ ಕಾರ್ಯಾಚರಣೆ ನಡೆಸಿ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ಭಾಗದಲ್ಲಿ ಓಡಾಡುತ್ತಿರುವ‌ ಚಿರತೆಯನ್ನು ಸೆರೆ ಹಿಡಿಯಲು ಒತ್ತಾಯಿಸಿದ್ದರು. 15 ದಿನಗಳೊಳಗೆ ಚಿರತೆಯನ್ನು ಸೆರೆ ಹಿಡಿಯದಿದ್ದರೆ ಇನ್ನೂ ಉಗ್ರ ಹೋರಾಟದ ಎಚ್ಚರಿಕೆಯನ್ನು ಶಾಸಕ ಗೌರಿಶಂಕರ್ ಕೊಟ್ಟಿದ್ದರು.

3 ತಿಂಗಳಲ್ಲಿ ನರಭಕ್ಷಕ ಚಿರತೆಗೆ ಬಾಲಕ ಸೇರಿ ನಾಲ್ವರು ಬಲಿ; ಭಯದಲ್ಲಿ ಬದುಕುತ್ತಿರುವ ಗುಬ್ಬಿ ತಾಲೂಕಿನ ಜನತೆ

ಇದೀಗ ಅರಣ್ಯಾಧಿಕಾರಿಗಳು ನರಭಕ್ಷಕ ಚಿರತೆ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಶುರುಮಾಡಿದ್ದಾರೆ. ಈವರಗೆ ಚಿರತೆ ದಾಳಿ ನಡೆಸಿದ ಜಿಲ್ಲೆಯ ಮಣಿಕುಪ್ಪೆ, ಚಿಕ್ಕಮಳವಾಡಿ ಹಾಗೂ ಕುಣಿಗಲ್  ಸುತ್ತಮುತ್ತಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯು 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 40 ಬೋನುಗಳನ್ನು ಇಟ್ಟಿದೆ. ಹಗಲು ರಾತ್ರಿ ಚಿರತೆ ಸೆರೆಗೆ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲಲ್ಲಿ ಕ್ಯಾಮೆರಾ ಇಟ್ಟು ಚಿರತೆಗಳ ಚಲನವಲನಗಳನ್ನು ಪತ್ತೆ ಹಚ್ಚಲಾಗುತ್ತಿದೆ.  ಮಣಿಕುಪ್ಪೆ ಗ್ರಾಮದ ಸುತ್ತಮುತ್ತ ನಾಲ್ಕು ಚಿರತೆಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ. ಸಿಬ್ಬಂದಿಗಳು ಎರಡು ತಂಡಗಳಾಗಿ ಹಗಲಿರುಳು ಚಿರತೆ ಸೆರೆಗೆ ಶ್ರಮಿಸುತ್ತಿದ್ದಾರೆ.

ಈ ಮಧ್ಯೆ ಜನರಿಗೆ ಮತ್ತೆ ಆತಂಕ ಎದುರಾಗಿದೆ. ನಿನ್ನೆ ಸಂಜೆ ಮತ್ತೆ ಆ ಚಿರತೆ ಗ್ರಾಮಸ್ಥರ ಕಣ್ಣಿಗೆ ಕಾಣಿಸಿದೆ. ಬಾಲಕನನ್ನು ಬಲಿ ಪಡೆದಿದ್ದ ಜಾಗದಲ್ಲೇ  ಆ ಚಿರತೆ ಓಡಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಳೆದ 2 ದಿನಗಳ ಹಿಂದೆ ಚಿರತೆ ಮಣ್ಣಿಕುಪ್ಪೆ ಸಮೀಪದ ತೋಟವೊಂದರಲ್ಲಿ ಬಾಲಕನನ್ನು ಬಲಿ ಪಡೆದಿತ್ತು. ಮತ್ತೆ ನಿನ್ನೆ ಸಂಜೆ ಕೂಡ ಕಾಣಿಸಿದೆ. ಕೂಡಲೇ ಮಣಿಕುಪ್ಪೆ ಗ್ರಾಮಸ್ಥರು ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮಣಿಕುಪ್ಪೆ ಗ್ರಾಮದ ಸುತ್ತ ಸುಮಾರು 15ಕ್ಕೂ ಹೆಚ್ಚು ಬೋನ್​​ಗಳನ್ನು ಇಟ್ಟಿದೆ. ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಮೈಸೂರಿನ Free Kashmir ಪೋಸ್ಟರ್​ ಪ್ರಕರಣ; ನಳಿನಿ ಎದುರು 80 ಪ್ರಶ್ನೆ ಮುಂದಿಟ್ಟ ಪೊಲೀಸರು 7.45 ಗಂಟೆ ವಿಚಾರಣೆ!

ಇನ್ನು, ಕುಣಿಗಲ್​​ ತಾಲೂಕಿನಾದ್ಯಂತ  ಜನ ಚಿರತೆ ಭಯದಿಂದ ಆತಂಕದಲ್ಲಿದ್ದಾರೆ.  ತಾಲೂಕಿನ ಹುಲಿಯೂರು ದುರ್ಗ, ಹೆಬ್ಬೂರು ಬಳಿಯ ಚಿಕ್ಕಮಳವಾಡಿ, ದೊಡ್ಡಮಳವಾಡಿ ಹಾಗೂ ಮಣಿಕುಪ್ಪೆ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ತೋಟದ ಕೆಲಸ, ತಮ್ಮ ಹೊಲ ಗದ್ದೆಗಳ ಕೆಲಸ ಮಾಡಲು ಜನರು ಮನೆಯಿಂದ ಹೊರಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೂ ಆಚೆ ಹೋಗಲು ಭಯಪಡುತ್ತಿದ್ದಾರೆ. ನರಭಕ್ಷಕ ಚಿರತೆ ಸುತ್ತಲೂ ಹತ್ತಾರು ಹಳ್ಳಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ