• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Praveen Nettar: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ SDPI ಟಿಕೆಟ್; ಮಗನನ್ನ ಕೊಂದ ಪಾಪಿಗೆ ಟಿಕೆಟ್ ಬೇಡ ಎಂದ ಪೋಷಕರು

Praveen Nettar: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ SDPI ಟಿಕೆಟ್; ಮಗನನ್ನ ಕೊಂದ ಪಾಪಿಗೆ ಟಿಕೆಟ್ ಬೇಡ ಎಂದ ಪೋಷಕರು

ಪ್ರವೀಣ್ ನೆಟ್ಟಾರು ಮತ್ತು ಶಫಿ ಬೆಳ್ಳಾರೆ

ಪ್ರವೀಣ್ ನೆಟ್ಟಾರು ಮತ್ತು ಶಫಿ ಬೆಳ್ಳಾರೆ

ಜುಲೈ 26 ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ಕೋಳಿ ಅಂಗಡಿಯನ್ನು ನಡೆಸುತ್ತಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮೂರು ಜನ ಆರೋಪಿಗಳು ಮಾರಕಾಯುಧಗಳಿಂದ ಕಡಿದು ಕೊಲೆಗೈದಿದ್ದರು.

  • Share this:

ಉಡುಪಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (BJP Leader Praveen Nettar) ಹತ್ಯೆ ಪ್ರಕರಣದ ಆರೋಪಿಗಳಲ್ಲಿ (Accused) ಓರ್ವನಿಗೆ ಎಸ್​​ಡಿಪಿಐ (SDPI- Social Democratic Party of India) ಪಕ್ಷ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಸ್​​​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಫಿ ಬೆಳ್ಳಾರೆಯನ್ನು (Shafi Bellare) ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ (Puttur Constituency) ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಫೆಬ್ರವರಿ 10 ರಂದು ಪುತ್ತೂರಿನಲ್ಲಿ ನಡೆದ ಎಸ್​​​ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಪ್ರವೀಣ್ ನೆಟ್ಟಾರು ಕುಟುಂಬ (Praveen Nettar Family) ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಈ ನಿರ್ಧಾರಕ್ಕೆ ಭಾರೀ ವಿರೋಧ ಕೇಳಿ ಬರಲಾರಂಭಿಸಿದೆ.


ಜುಲೈ 26 ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ಕೋಳಿ ಅಂಗಡಿಯನ್ನು ನಡೆಸುತ್ತಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮೂರು ಜನ ಆರೋಪಿಗಳು ಮಾರಕಾಯುಧಗಳಿಂದ ಕಡಿದು ಕೊಲೆಗೈದಿದ್ದರು.


13ಕ್ಕೂ ಅಧಿಕ ಜನರ ಬಂಧನ


ಬೆಳ್ಳಾರೆ ಪೊಲೀಸರು ಪ್ರಕರಣ‌ ದಾಖಲಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯ ನಡುವೆಯೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA- National Investigation Agency) ವಹಿಸಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಎಸ್​​​ಐಎ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಹದಿಮೂರಕ್ಕೂ ಮಿಕ್ಕಿದ ಆರೋಪಿಗಳನ್ನು ಬಂಧಿಸಿದ್ದರು.


nia officials submitted 1500 pages Chargesheet in praveen nettaru case
ಪ್ರವೀಣ್ ನೆಟ್ಟಾರು


ಈ ಆರೋಪಿಗಳ ಪೈಕಿ ಎಸ್​​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಫಿ ಬೆಳ್ಳಾರೆಯೂ ಓರ್ವನಾಗಿದ್ದು, ಈತ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪಕ್ಷ ಘೋಷಣೆಯನ್ನು ಮಾಡಿಕೊಂಡಿದೆ.




ಟಿಕೆಟ್ ಘೋಷಿಸಿದ ಮಜೀನ್ ಖಾನ್


ಫೆಬ್ರವರಿ 10 ರಂದು ಪುತ್ತೂರಿನ ಟ್ರನಿಟಿ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಮಜೀದ್ ಖಾನ್ ಈ ಘೋಷಣೆಯನ್ನು ಮಾಡಿದ್ದಾರೆ. ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಆರೋಪಿಯನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿರುವುದು ಕರಾವಳಿ ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಪ್ರವೀಣ್ ನೆಟ್ಟಾರು ಪೋಷಕರ ಆಕ್ರೋಶ


ಪ್ರವೀಣ್ ನೆಟ್ಟಾರು ಪೋಷಕರು ಎಸ್​​​ಡಿಪಿಐ ಪಕ್ಷದ ಈ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗನನ್ನು ಕೊಂದ ಆರೋಪಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದಿದ್ದಾರೆ.


ಕೊಲೆ ನಡೆದ ಸ್ಥಳ


ಅಮಾಯಕನನ್ನು ಅನ್ಯಾಯವಾಗಿ ಕೊಂದ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೇ ನೀಡಬಾರದು. ಯಾವುದೇ ಅಧಿಕಾರವಿಲ್ಲದೆಯೇ ಆತ ನಮ್ಮ ಮಗನನ್ನು ಕೊಂದು ಹಾಕಿದ್ದು, ಒಂದು ವೇಳೆ ಚುನಾವಣೆಯಲ್ಲಿ ಗೆದ್ದು, ಅಧಿಕಾರ ಪಡೆದುಕೊಂಡಲ್ಲಿ ಎಲ್ಲರನ್ನೂ ಕೊಂದು ಹಾಕಲು ಹಿಂದೇಟು ಹಾಕಲ್ಲ. ಇಂಥ ಆರೋಪಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಲ್ಲಿ,ಮನೆಗೆ ನುಗ್ಗಿ ಕೊಲ್ಲುವ ಕೆಲಸ ಮಾಡಲೂ ಹೇಸಲ್ಲ ಎಂದು ಪ್ರವೀಣ್ ನೆಟ್ಟಾರು ತಾಯಿ ರತ್ನಾವತಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Praveen Nettaru Case: ಪ್ರವೀಣ್​ ನೆಟ್ಟಾರು ಹತ್ಯೆ ಕೇಸ್​ನಲ್ಲಿ 1500 ಪುಟಗಳ ಚಾರ್ಜ್​ಶೀಟ್, 20 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ​


ಪಿಎಫ್​ಐ ಸಂಘಟನೆ ಬ್ಯಾನ್


ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನೂ ನಿಷೇಧ ಮಾಡಿದೆ. ಪ್ರವೀಣ್ ಪ್ರಕರಣ ತಣ್ಣಗಾಗುವ ಹಂತದಲ್ಲಿರುವಾಗ ಎಸ್​​ಡಿಪಿಐ ಪಕ್ಷ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

Published by:Mahmadrafik K
First published: