ಎಸ್​​ಡಿಎಂ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಬೆರಳ ತುದಿಯಲ್ಲೇ ಅಂಕ ಪತ್ರ - ವಿಡಿಯೋ ಕ್ಲಾಸ್

ಒಟ್ಟಿನ್ನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಆ್ಯಪ್ ಮೂಲಕ ದಾಖಲೀಕರಣಕ್ಕೆ SDM ಶಿಕ್ಷಣ ಸಂಸ್ಥೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳೆದುಕೊಳ್ಳುವ ಭೀತಿ ತಪ್ಪಿದಂತಾಗಿದೆ.

ಎಸ್​​ಡಿಎಂ ಕಾಲೇಜು

ಎಸ್​​ಡಿಎಂ ಕಾಲೇಜು

  • Share this:
ದಕ್ಷಿಣ ಕನ್ನಡ(ಜು.28): ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ವಿದ್ಯಾಕ್ಷೇತ್ರ ಎಸ್​​ಡಿಎಂ ಶಿಕ್ಷಣ ಸಂಸ್ಥೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸ್​ಡಿಎಂ ಶಿಕ್ಷಣ ಸಂಸ್ಥೆ ಈಗ  ನೂತನ ತಂತ್ರಜ್ಞಾನ ಅವಿಷ್ಕಾರ ಮಾಡಿದೆ. ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನದ ವಿವಿಧ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಈ ದಿಸೆಯಲ್ಲಿ ಇದೀಗ ಇಟ್ಟಿರುವ ಮಹತ್ವದ ಹೆಜ್ಜೆಯನ್ನಿಟ್ಟಿದೆ. ನೂತನ ಪ್ರಯೋಗಗಳಾದ ಡಿಜಿ ಲಾಕರ್, ಇ-ಲೆಕ್ಚರ್ ಹಾಗೂ ಡಿಜಿಟಲ್ ಪ್ರಸರಣ ಕಾರ್ಯವಿಧಾನಗಳನ್ನು ವಿದ್ಯಾರ್ಥಿಗಳಿಗೋಸ್ಕರ ಪರಿಚಯಿಸಿದೆ.

ಡಿಜಿ ಲಾಕರ್ ಕಾಲೇಜಿನ ನೂತನ ವಿಶಿಷ್ಟ ಪ್ರಯೋಗಗಳಲ್ಲಿ ಒಂದಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪರೀಕ್ಷಾಂಕ ಪಟ್ಟಿ, ನಾನಾ ಪ್ರಮಾಣ ಪತ್ರ ಹಾಗೂ ಇತರೆ ದೃಢೀಕೃತ ದಾಖಲೆಗಳನ್ನು ಅಳವಡಿಸಲಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲಿ ಈ ಡಿಜಿ ಲಾಕರ್ ಮೂಲಕ ದಾಖಲೆಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಈ ದಾಖಲೆಗಳ ಮುದ್ರಿತ ಪ್ರತಿಗಳನ್ನೂ ಪಡೆದುಕೊಳ್ಳಬಹುದಾಗಿದೆ.

ಇ-ಲೆಕ್ಚರ್ ಕೂಡಾ ಕಾಲೇಜಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಇಲ್ಲಿ ಪಠ್ಯಾಧರಿತ ವಿಷಯಗಳನ್ನು ಅಧ್ಯಾಪಕರು ವಿಡಿಯೋ ಕ್ಲಾಸ್ ಮಾದರಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಹತ್ತು ನಿಮಿಷಗಳ ಈ ವಿಡಿಯೋಗಳನ್ನು ಯೂಟ್ಯೂಬ್ ಮೂಲಕ ಅಪ್‌ಲೋಡ್ ಮಾಡಲಾಗುತ್ತಿದ್ದು, ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಬಳಸಬಹುದಾದ ಅವಕಾಶವಿದೆ. ಲಾಕ್‌ಡೌನ್ ನಂತರದ ಅವಧಿಯಲ್ಲಿ ಈಗಾಗಲೇ 1,100 ಅಧಿಕ ವಿಡಿಯೋಗಳು ಚಿತ್ರೀಕರಿಸಲಾಗಿದೆ.

ಈಗಾಗಲೇ ಯುಟ್ಯೂಬ್‌ನಲ್ಲಿ 800ಕ್ಕೂ ಅಧಿಕ ವಿವಿಧ ವಿಷಯಗಳ ವಿಡಿಯೋಗಳು ಲಭ್ಯವಿವೆ. ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ಕಾಲೇಜಿನ ಭಿತ್ತಿ ಪತ್ರಿಕೆಗಳು ಹಾಗೂ ವಾರ್ಷಿಕ ಸಂಚಿಕೆಗಳನ್ನು ರೂಪಿಸುವ ದಿಸೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 27 ಭಿತ್ತಿ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಲು ವಿದ್ಯಾರ್ಥಿಗಳು ಕಾರ್ಯನಿರತರಾಗಿದ್ದಾರೆ.

ಇದರೊಂದಿಗೆ ಅವರಿಗೆ ಡಿಜಿಟಲ್ ಟೈಪಿಂಗ್, ಫೋಟೋ ಶಾಪ್, ಪುಟವಿನ್ಯಾಸ ಕೌಶಲ್ಯ ಸೇರಿದಂತೆ ಆನ್‌ಲೈನ್ ಪ್ರಸರಣದ ಸಮಗ್ರ ಆಯಾಮಗಳಿಗೆ ಸಂಬಂದಿಸಿದಂತೆ ತರಬೇತಿ ನೀಡುವ ಪ್ರಯತ್ನಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19​: ಒಂದೇ ದಿನ 5536 ಕೇಸ್​​, 1.07 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಒಟ್ಟಿನ್ನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಆ್ಯಪ್ ಮೂಲಕ ದಾಖಲೀಕರಣಕ್ಕೆ SDM ಶಿಕ್ಷಣ ಸಂಸ್ಥೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳೆದುಕೊಳ್ಳುವ ಭೀತಿ ತಪ್ಪಿದಂತಾಗಿದೆ.
Published by:Ganesh Nachikethu
First published: