ನೇತ್ರಾಣಿಯಲ್ಲಿ ಪುನರ್ಆರಂಭವಾದ ಸ್ಕೂಬಾ ಡೈವ್; ಪ್ರವಾಸಿಗರಲ್ಲಿ ಹರ್ಷ
ಜಿಲ್ಲೆಯ ಕಡಲ ಕಿನಾರೆಗೆ ಆಗಮಿಸುವ ಪ್ರವಾಸಿಗರು ಹೆಚ್ಚು. ಅದರಲ್ಲಿಯೂ ಇಲ್ಲಿನ ಸ್ಕೂಬಾ ಡೈವಿಂಗ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
news18-kannada Updated:November 2, 2020, 6:01 PM IST

ಸ್ಕೂಬಾ ಡೈವಿಂಗ್
- News18 Kannada
- Last Updated: November 2, 2020, 6:01 PM IST
ಕಾರವಾರ (ನ.2): ಸರ್ಕಾರ ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆ ನಡೆಸುತ್ತಿದ್ದಂತೆ ಜಿಲ್ಲೆಯ ಪ್ರವಾಸೋದ್ಯಮ ಕೂಡ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಕೊರೋನಾದಿಂದಾಗಿ ಕಳೆದ ಎಂಟು ತಿಂಗಳಿನಿಂದ ಇಲ್ಲಿನ ನೇತ್ರಾಣಿಯಲ್ಲಿ ಸ್ತಬ್ಧವಾಗಿದ್ದ ಸ್ಕೂಬಾ ಡೈವಿಂಗ್ ಮತ್ತೆ ಆರಂಭವಾಗಿದೆ. ಇದರಿಂದ ಪ್ರವಾಸಿಗರಲ್ಲಿಯೂ ಇಲ್ಲಿನ ಸಿಬ್ಬಂದಿಗಳಲ್ಲಿಯೂ ಹರ್ಷ ಮೂಡಿದೆ. ಜಿಲ್ಲೆಯ ಕಡಲ ಕಿನಾರೆಗೆ ಆಗಮಿಸುವ ಪ್ರವಾಸಿಗರು ಹೆಚ್ಚು. ಅದರಲ್ಲಿಯೂ ಇಲ್ಲಿನ ಸ್ಕೂಬಾ ಡೈವಿಂಗ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಸುರಕ್ಷಿತ ಕ್ರಮ, ನುರಿತ ತಜ್ಞರಿಂದ ನಡೆಸುವ ಈ ಸ್ಕೂಬಾಗಾಗಿ ದೇಶದ ವಿವಿಧ ಭಾಗಗಳಿಂದಲೂ ಜನರು ಆಗಮಿಸುತ್ತಾರೆ. ಅಂಡಮಾನ್ ಬಿಟ್ಟರೆ, ಮೂರ್ಡೇಶ್ವರದ ನೇತ್ರಾಣಿ ಸ್ಕೂಬಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಕೊರೋನಾ ಆತಂಕದ ನಡುವೆ ಸ್ತಬ್ಧಗೊಂಡಿದ್ದ ಈ ಮೋಜಿಗೆ ಮತ್ತೆ ಚಾಲನೆ ಸಿಕ್ಕಿದೆ.
ಜಿಲ್ಲೆಯ ಮೂರ್ಡೆಶ್ವರ, ಗೋಕರ್ಣ, ಕಾರವಾರ, ದಾಂಡೇಲಿಯಲ್ಲಿ ನಿಧಾನವಾಗಿ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಕೂಡ ಅಧಿಕವಾಗಿ ಕಂಡು ಬರುತ್ತಿದೆ. ಇದರ ಜೊತೆಗೆ ವಾಟರ್ ಗೇಮ್ಸ್ಗಳು ಕೂಡ ಪ್ರಾರಂಭವಾಗುತ್ತಿರುವುದು ಅವರ ಖುಷಿ ಹೆಚ್ಚಿಸಿದೆ. ಇನ್ನು ಕೊರೋನಾ ಹಿನ್ನಲೆ ಜಲಕ್ರೀಡೆಗಳಿಗೆ ಸುರಕ್ಷಿತ ಕ್ರಮವಹಿಸಲಾಗಿದೆ. ಕಳೆದ ವಾರದಿಂದ ಜಿಲ್ಲಾಡಳಿತದ ಪರವಾನಿಗೆಯ ಮೇರೆಗೆ ಸ್ಕೂಬಾ ಡೈವಿಂಗ್ ನಡೆಸಲಾಗುತ್ತಿದೆ. ಸುರಕ್ಷಿತ ಕ್ರಮವನ್ನ ಅನುಸರಿಸುವುದರಿಂದ ಪ್ರವಾಸಿಗರಲ್ಲಿಯೂ ಆತಂಕವಿಲ್ಲ. ಲಾಕ್ಡೌನ್ನಿಂದಾಗಿ ಬಂದ ಪ್ರವಾಸ, ಸಾಹಸ ಚಟುವಟಿಕೆಯಿಲ್ಲದೇ ಬೇಸರಗೊಂಡಿದ್ದ ಜನರು ಸಮುದ್ರದೊಳಗಿನ ಜೀವ ರಾಶಿಗಳನ್ನ ಕಣ್ತುಂಬಿಕೊಂಡು ಈಗ ಸಂತಸ ಪಡುತ್ತಿದ್ದಾರೆ. ಸ್ಕೂಬಾಗೆ ಅವಕಾಶ ಇದೆ ಎಂಬು ವಿಷಯ ತಿಳಿದಾಕ್ಷಣಾ ಕಡಲಾಳದ ಅದ್ಭುತ ಜೀವರಾಶಿಗಳನ್ನ ನೋಡಲು ಈಗ ಪ್ರವಾಸಿಗರು ದಿನವನ್ನ ಕಾಯ್ದಿರಿಸುತ್ತಿದ್ದಾರೆ.
ಸ್ಕೂಬಾ ಡೈವಿಂಗ್ ಸೂಪರ್
ಅಂಡಮಾನ ನಿಕೋಬಾರ್ ದ್ವಿಪ ಹೊರತು ಪಡಿಸಿದ್ರೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೆಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಹೇಳಿಮಾಡಿಸದ ತಾಣ. ಶುದ್ಧವಾದ ನೀರು ಅಪರೂಪದ ಜೀವರಾಶಿಗಳು ನೇತ್ರಾಣಿಯದ್ದು ಸ್ಕೂಬಾ ಡೈವಿಂಗ್ ಗೆ ಉತ್ತಮ ತಾಣವಾಗಿದೆ. ಕಳೆದ ಮೂರು ವರ್ಷದಿಂದ ಆರಂಭವಾದ ಸ್ಕೂಬಾ ಡೈವಿಂಗ್ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಇದನ್ನು ಓದಿ: ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕು ಹೆಚ್ಚಾಗುವ ಆತಂಕ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಸಾಕಷ್ಟು ಅಪರೂಪದ ಕಡಲ ಜೀವರಾಶಿಗಳು ನೇತ್ರಾಣಿ ದ್ವೀಪದಲ್ಲಿ ಜೀವಿಸುತ್ತಿದ್ದು, ಅನೇಕ ಪ್ರಬೇಧದ ಮೀನುಗಳು ಕೂಡಾ ಇಲ್ಲಿ ಕಾಣಸಿಗುತ್ತವೆ. ಇಲ್ಲಿನ ಹವಳದ ದಿಬ್ಬಗಳು ನೋಡಿದರೆ ಮತ್ತೊಮ್ಮೆ ನೋಡುವ ಆಸೆ ಬರೊದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಅಪರೂಪದ ಕಡಲ ಜೀವರಾಶಿಗಳನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ ಪ್ರವಾಸಿಗರು.ಕೊರೋನಾ ಸುರಕ್ಷಿತ ಕ್ರಮ
ಕೊರೋನಾ ಹಿನ್ನಲೆ ನೀರಿಗಿಳಿಯುವ ಮೊದಲು ಟೆಸ್ಟಿಂಗ್ ಸೇರಿದಂತೆ ಹಲವು ಮುಂಜಾಗ್ರತೆ ನಡೆಸಲಾಗಿದೆ. ಅಲ್ಲದೇ, ಸೋಂಕಿದ್ದವರಿಗೆ ಈ ಅವಕಾಶವಿಲ್ಲ. ಕೊರೋನಾ ಸುರಕ್ಷಿತ ಕ್ರಮವನ್ನ ಕೈಗೊಂಡು ಬಂದಂತ ಪ್ರವಾಸಿಗರಿಗೆ ಸ್ಕೂಬಾ ಡೈವ್ ಮಾಡಿಸಲಾಗುತ್ತಿದೆ. ದಿನಕ್ಕೆ 50 ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನೆಲಕಚ್ಚಿದ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಚೇತರಿಕೆ ಕಾಣುತ್ತಿರುವ ಉತ್ತಮ ಬೆಳವಣಿಗೆಯಾಗಿದೆ.
ಜಿಲ್ಲೆಯ ಮೂರ್ಡೆಶ್ವರ, ಗೋಕರ್ಣ, ಕಾರವಾರ, ದಾಂಡೇಲಿಯಲ್ಲಿ ನಿಧಾನವಾಗಿ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಕೂಡ ಅಧಿಕವಾಗಿ ಕಂಡು ಬರುತ್ತಿದೆ. ಇದರ ಜೊತೆಗೆ ವಾಟರ್ ಗೇಮ್ಸ್ಗಳು ಕೂಡ ಪ್ರಾರಂಭವಾಗುತ್ತಿರುವುದು ಅವರ ಖುಷಿ ಹೆಚ್ಚಿಸಿದೆ.