• Home
  • »
  • News
  • »
  • state
  • »
  • Mangaluru Blast: ಮಂಗಳೂರಿನಲ್ಲಿ NIA ತಂಡದಿಂದ ಪರಿಶೀಲನೆ, ಮೈಸೂರಿನಲ್ಲಿ ಶಂಕಿತನ ರೂಮ್‌ನಲ್ಲೂ ಶೋಧ

Mangaluru Blast: ಮಂಗಳೂರಿನಲ್ಲಿ NIA ತಂಡದಿಂದ ಪರಿಶೀಲನೆ, ಮೈಸೂರಿನಲ್ಲಿ ಶಂಕಿತನ ರೂಮ್‌ನಲ್ಲೂ ಶೋಧ

ಮಂಗಳೂರು ಬ್ಲಾಸ್ಟ್​ ಕೇಸ್

ಮಂಗಳೂರು ಬ್ಲಾಸ್ಟ್​ ಕೇಸ್

ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತಂಡ ಮೈಸೂರಿಗೆ ಆಗಮಿಸಿ ಶಂಕಿತ ವ್ಯಕ್ತಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

  • Share this:

ಮಂಗಳೂರಿನ ಬಾಂಬ್ ಸ್ಫೋಟದ (Bomb Blast) ತನಿಖೆ ಮುಂದುವರೆದಿದ್ದು, ಘಟನಾ ಸ್ಥಳಕ್ಕೆ ಎನ್​ಐಎ (NIA) ತಂಡ ಭೇಟಿ ನೀಡಿದೆ.  ಎನ್​ಐಎ ಅಧಿಕಾರಿಗಳು (Officers) ಘಟನಾ ಸ್ಥಳದಲ್ಲಿ ಮತ್ತೆ ಪರಿಶೀಲನೆ ನಡೆಸಿದ್ರು. ನಾಗುರಿಯಲ್ಲಿ ಸ್ಫೋಟವಾದ ಆಟೋವನ್ನು ಪರಿಶೀಲನೆ ನಡೆಸಿದ ಎನ್ ಐ ಎ ಅಧಿಕಾರಿಗಳಿಗೆ ಆಟೋ ಬ್ಲಾಸ್ಟ್ ಆದ ಬಳಿಕ ತೆಗೆದ ವಿಡಿಯೋ ಲಭ್ಯವಾಗಿದೆ. ಬೆಂಕಿ (Fire) ನಂದಿಸಿದ ಬಳಿಕ ತೆಗೆದ ಮೊಬೈಲ್ ವಿಡಿಯೋ ಸಿಕ್ಕಿದೆ. ಕುಕ್ಕರ್ ಬಾಂಬ್ (Cooker Bomb) ತಂದ ಶಂಕಿತನ ವಿಡಿಯೋ ಲಭ್ಯವಾಗಿದೆ. 


ಮೈಸೂರಿನಲ್ಲೂ NIA ತಂಡ ಪರಿಶೀಲನೆ 


ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತಂಡ ಮೈಸೂರಿಗೆ ಆಗಮಿಸಿ ಶಂಕಿತ ವ್ಯಕ್ತಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಲೋಕನಾಯಕ ನಗರದಲ್ಲಿ ಶಂಕಿತ ವ್ಯಕ್ತಿಯ ಮನೆ ಇದೆ. ಶಂಕಿತ ವ್ಯಕ್ತಿಯ ಮನೆಯಲ್ಲಿ ಸ್ಪೋಟಕ ಪತ್ತೆ ಹಿನ್ನೆಲೆ ಪರಿಶೀಲನೆ ನಡೆಸಿ NIA ತಂಡ ಪರಿಶೀಲನೆ ನಡೆಸುತ್ತಿದೆ.


ಸ್ಫೋಟಗೊಂಡ ಆಟೋ


ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆ


ಮೈಸೂರಿನಲ್ಲಿ ಶಂಕಿತ ವ್ಯಕ್ತಿಯ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸಿಕ್ಕಿವೆ. ಮೈಸೂರಿನ ಲೋಕನಾಯಕ ನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ ಶಂಕಿತ ವ್ಯಕ್ತಿ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿದೆ.  ಕುಕ್ಕರ್ ಬಾಂಬ್, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್ ಗಳು, ಸರ್ಕ್ಯೂಟ್ ಬೋರ್ಡ್, ಸಲ್ಫೂರಿಕ್ ಆ್ಯಸಿಡ್, ಸಣ್ಣ ಬೋಲ್ಟ್ ಗಳು, ಬ್ಯಾಟರಿಗಳು, ಮೊಬೈಲ್ ಡಿಸ್‌ಪ್ಲೇಗಳು ಪತ್ತೆಯಾಗಿದೆ.


ಏಕಾಂಗಿಯಾಗಿ ಬಂದು ಈ ಕೃತ್ಯ


ರಿಕ್ಷಾದಲ್ಲಿ ನಡೆದ ಸ್ಫೋಟಕ ಪ್ರಕರಣ ವಿಚಾರದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿಲ್ಲ. ಏಕಾಂಗಿಯಾಗಿ ಬಂದು ಈ ಕೃತ್ಯವೆಸಗಲಾಗಿದೆ. ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ‌ ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.


ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಎನ್​ಐಎ ಘಟಕ ಸ್ಥಾಪಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಆಗ್ರಹಿಸಿದ್ದೇನೆ. ಮಂಗಳೂರು ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶ. ಇಂತಹ ಅಹಿತಕರ ಘಟನೆ ನಡೆದಾಗ ಅವರು ಕೇರಳ ರಾಜ್ಯಕ್ಕೆ ಹೋಗುವುದು. ಕೇರಳ ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆ ನಡೆಸಿ ಇಲ್ಲಿಗೆ ಬರುವುದು ನಡೆಯುತ್ತಿರುತ್ತದೆ. ಇದೀಗ ನಡೆದಿರುವ ಘಟನೆಯಿಂದ ಎನ್​ಐಎ ಘಟಕ ಮಾಡುವಂತೆ ಮತ್ತಷ್ಟು ಒತ್ತಡ ತರುತ್ತೇವೆ ಎಂದರು.


ಮೈಸೂರಿನಲ್ಲೂ ಹೈ-ಅಲರ್ಟ್​ 


ಮಂಗಳೂರಲ್ಲಿ ಆಟೋ ಸ್ಫೋಟದ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಮತ್ತು ನಿಗಾವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಅವರಿಗೂ ನಾನು ಸೂಚನೆ ಕೊಟ್ಟಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.


ಇದನ್ನೂ ಓದಿ: Robbery: ಚಿನ್ನದ ವರ್ತಕನನ್ನು ಬೆದರಿಸಿ ಪೊಲೀಸರಿಂದಲೇ ದರೋಡೆ! ಠಾಣಾಧಿಕಾರಿ ಸೇರಿ ನಾಲ್ವರು ಎಸ್ಕೇಪ್​


ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ


ಮಂಗಳೂರು ಪ್ರಕರಣ ಹಿನ್ನೆಲೆ ಮೈಸೂರಿನಲ್ಲಿ ಭದ್ರತೆ ಹೇಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಈಗಾಗಲೇ ಕಟ್ಟುನಿಟ್ಟಿನ ಪೊಲೀಸ್​ ಬಂದೋಬಸ್ತ್ ಒದಗಿಸಲಾಗಿದ್ದು, ಮೈಸೂರಿನಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಭೇಟಿ ಕೊಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.

Published by:ಪಾವನ ಎಚ್ ಎಸ್
First published: