• Home
  • »
  • News
  • »
  • state
  • »
  • Corona Virus: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ? ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ

Corona Virus: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ? ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾ ಮತ್ತು ಜಪಾನ್​ನಲ್ಲಿ ಕೊರೊನಾ ಪ್ರಕರನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ನೀಡುವುದರ ಬಗ್ಗೆ ಕ್ರಮವಹಿಸಬೇಕಿದೆ ಎಂದು ಹೇಳಿದರು.

  • News18 Kannada
  • Last Updated :
  • Karnataka, India
  • Share this:

ಚೀನಾ ಮಹಾಮಾರಿ ಕೊರೊನಾ ವೈರಸ್ (Corona Virus) ಆತಂಕ ಮತ್ತೆ ಶುರುವಾಗಿದೆ. ಈ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Government) ಅಲರ್ಟ್​ ಆಗಿದ್ದು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಭಾರತದಲ್ಲಿ ಮೂವರಿಗೆ ಓಮಿಕ್ರಾನ್ ಸೋಂಕು (Omicron) ತಗುಲಿರೋದು ದೃಢಪಟ್ಟಿದೆ. ಗುಜರಾತ್​​ನ ಇಬ್ಬರು ಹಾಗೂ ಒಡಿಶಾದ ಓರ್ವರಿಗೆ ಓಮಿಕ್ರಾನ ಸೋಂಕು ತಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇವರ ಜೊತೆ ಸಂಪರ್ಕದಲ್ಲಿದ್ದವರನ್ನ ವೈದ್ಯರ ನಿಗಾದಲ್ಲಿ ಇಡಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಬೆಂಗಳೂರು ನಗರಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ International Passengers) ಕೋವಿಡ್ ಟೆಸ್ಟ್​ (COVID Test) ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister K Sudhakar) ಮಾಹಿತಿ ನೀಡಿದ್ದಾರೆ.


ಜಾಗತಿಕ ಮಟ್ಟದಲ್ಲಿ ಕೊರೊನಾ ತನ್ನ ಪಸರಿಸುವಿಕೆ ವೇಗವನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಕೆಲವು ಮುಂಜಾಗ್ರತ ಕ್ರಮ ತೆಗೆದುಕೊಳ್ಳುತ್ತಿದೆ. ಈ ನಿಯಮಗಳು ಜಾರಿಗೆ ಯಾವಾಗ ತರಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.


ಚೀನಾ ಮತ್ತು ಜಪಾನ್​ನಲ್ಲಿ ಕೊರೊನಾ ಪ್ರಕರನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ನೀಡುವುದರ ಬಗ್ಗೆ ಕ್ರಮವಹಿಸಬೇಕಿದೆ ಎಂದು ಹೇಳಿದರು.


covid 19, health minister sudhakar, covid- 19 situation, use masks in crowded places, corona cases in india, bbmp bengaluru, bangalore bbmp, covid 19 in india, ಮಾಸ್ಕ್ ಕಡ್ಡಾಯ, ಬಿಬಿಎಂಪಿ ಕೊರೋನಾ ಮಾರ್ಗಸೂಚಿ, kannada news,ಕೊರೊನಾ ಮಾರ್ಗಸೂಚಿಗಳು,
ಸಚಿವ ಸುಧಾಕರ್


ನ್ಯೂ ಇಯರ್ ಸೆಲೆಬ್ರೇಷನ್​ಗೆ ಬೀಳುತ್ತಾ ಬ್ರೇಕ್?


2022ರ ಆರಂಭದಲ್ಲಿ ಆತಂಕದಲ್ಲಿಯೇ ಹೊಸ ವರ್ಷದ ಆಚರಣೆ ಮಾಡಲಾಗಿತ್ತು. ಇದೀಗ ಮತ್ತೆ ಕೋವಿಡ್ ಹಾವಳಿ ಶುರುವಾಗಿದೆ. ಕೊರೊನಾ ಹಿನ್ನೆಲೆ ಬೆಂಗಳೂರಿನಲ್ಲಿ ಅದ್ಧೂರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುತ್ತಾ ಅನ್ನೋ ಪ್ರಶ್ನೆರ ಮೂಡಿದೆ. ಹೊಸ ವರ್ಷದ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆಗಳಿವೆ.


ಇಂದು ಸಿಎಂ ಮಹತ್ವದ ಸಭೆ


ಬುಧವಾರ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ದೇಶದಲ್ಲಿ ಕೋವಿಡ್‌ ವ್ಯಾಪಿಸದಂತೆ  ಚೀನಾದಿಂದ ಬರುವ ಪ್ರಯಾಣಿಕರನ್ನ ಕಟ್ಟುನಿಟ್ಟಿನ ತಪಾಸಣೆಗೊಳಪಡಿಸಲಾಗುತ್ತಿದೆ. ಸದ್ಯ ದೇಶದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೋವಿಡ್ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಕಟ್ಟೆಚ್ಚರದ ಬಗ್ಗೆ ಆರೋಗ್ಯ ಇಲಾಖೆ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.


ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ನಿನ್ನೆ ಸಭೆ ಮಾಡಿ ಮಹತ್ವ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಿದೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಕಟ್ಟೆಚ್ಚರದ ಶಿಫಾರಸ್ಸುಗಳನ್ನು ತಾಂತ್ರಿಕ ಸಲಹಾ ಸಮಿತಿ ಮಾಡಿದೆ ಎಂದು ತಿಳಿದು ಬಂದಿದೆ. ರಾಜ್ಯದ ಕೋವಿಡ್ ಸ್ಥಿತಿಗತಿ  ಮತ್ತು ನೆರೆ ದೇಶದಲ್ಲಿ ಆಗ್ತಿರೋ ಕೊವಿಡ್ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ವರದಿ ಸಿದ್ಧಪಡಿಸಲಾಗಿದೆ.


ಸಿಎಂ ಸಭೆಯಲ್ಲಿ ಏನೆಲ್ಲಾ ಚರ್ಚೆ?


1.ಬೂಸ್ಟರ್ ಡೋಸ್ ಶೇಖರಣೆ ಬಗ್ಗೆ ಚರ್ಚೆ


2.ಬೂಸ್ಟರ್ ಡೋಸ್ ಎಷ್ಟು ಪರ್ಸೆಂಟ್ ವಿತರಣೆ ಬಾಕಿ ಇದೆ ಅಂತಾ  ಚರ್ಚೆ


3.ಕೋವಿಡ್ ಪಾಸಿಟಿವಿಟಿ ರೇಟ್, ಸಕ್ರಿಯ ಪ್ರಕರಣ ಮತ್ತು ವ್ಯಾಕ್ಸಿನೇಷನ್‌ ರೀಚ್ ಬಗ್ಗೆ ಮಾಹಿತಿ ನೀಡಲಿರೋ ಆರೋಗ್ಯ ಇಲಾಖೆ


4.ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೊನಾ ಆರ್ಭಟದ ಮಾಹಿತಿ ನೀಡಲಿರೋ ಆರೋಗ್ಯ ಇಲಾಖೆ


5.ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ಮಾರ್ಗಸೂಚಿ ಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಸ್ತಾಪ


6.ತಾಂತ್ರಿಕ ಸಲಹಾ ಸಮಿತಿ ನೀಡಿರೋ ವರದಿಯನ್ನ ಸಿಎಂ ಮುಂದೆ ಪ್ರಸ್ತಾಪಿಸಲಿರೋ ಆರೋಗ್ಯ ಇಲಾಖೆ


ಆರೋಗ್ಯ ಇಲಾಖೆಗೆ ತಾಂತ್ರಿಕ ಸಲಹಾ ಸಮಿತಿ ನೀಡರುವ ವರದಿಯಲ್ಲಿ ಏನಿದೆ?


1.ಒಳಾಂಗಣ, ಹೊರಾಂಗಣ ಪ್ರದೇಶಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಮಾಸ್ಕ್ ಬಳಕೆಗೆ ಶಿಫಾರಸ್ಸು


2.ಹೈ ರಿಸ್ಕ್ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ ಮಾಸ್ಕ್ ಬಳಕೆ ಕಡ್ಡಾಯಕ್ಕೆ ಶಿಫಾರಸ್ಸು


3.ಮಾಲ್, ಪಬ್, ಸಿನಿಮಾ ಥಿಯೇಟರ್, ರೆಸ್ಟೋರೆಂಟ್​​ಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯಕ್ಕೆ ಶಿಫಾರಸ್ಸು


4.ಬಸ್, ಮೆಟ್ರೋ, ಟ್ರೈನ್​​ಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯ ಮಾಡಲು ಶಿಫಾರಸ್ಸು


5.ಬೂಸ್ಟರ್ ಡೋಸ್ ಬರೀ 21% ಆಗಿದೆ ಬೂಸ್ಟರ್ ಡೋಸ್ ಬಗ್ಗೆ ಜಾಗೃತಿ


6.ಟೆಸ್ಟಿಂಗ್ ಹೆಚ್ಚಿಳಕ್ಕೆ ಶಿಫಾರಸ್ಸು


7.ರೋಗಲಕ್ಷಣ ಇರುವವರಿಗೆ ಬೆಡ್ ವ್ಯವಸ್ಥೆ ಮತ್ತು ಚಿಕಿತ್ಸೆಯ ಪ್ರೋಟೋ ಕಾಲ್ ಪಾಲಿಸುವಂತೆ ಸೂಚಿಸಿ


ಇದನ್ನೂ ಓದಿ:  Covid-19: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸ್ಕ್​ ಕಡ್ಡಾಯಕ್ಕೆ ಬಿಬಿಎಂಪಿ ಸಿದ್ಧತೆ; ಕೋವಿಡ್ ಸಲಹಾ ಸಮಿತಿಗೆ ಮನವಿ ಸಲ್ಲಿಕೆ


8.ಬೆಡ್ ವ್ಯವಸ್ಥೆ, ಮ್ಯಾನ್ ಪವರ್, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಮ್ಯಾನ್ ಪವರ್ ಹೆಚ್ಚಿಸಿ


9.ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಕೊರೊನಾ ರೂಲ್ಸ್ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಬೇಕು.


10.ಬೆಂಗಳೂರಿನಲ್ಲಿ ಸಿವೇಜ್ ವಾಟರ್ ಟೆಸ್ಟಿಂಗ್ ಮೂಲಕ ಕೊರೊನಾ ತಳಿಯ ಬಗ್ಗೆ ನಿಗಾ ವಹಿಸಬೇಕು.


11.ಅಂತರಾಷ್ಟ್ರೀಯ ‌ಪ್ರಯಾಣಿಕರ ಬಗ್ಗೆ ತೀವೃ ನಿಗಾ

Published by:Mahmadrafik K
First published: