ಶಾಲಾ-ಕಾಲೇಜುಗಳ ರೀ-ಓಪನ್ ಮತ್ತೆ ವಿಳಂಬ; ಶೀಘ್ರವೇ ಕೇಂದ್ರದಿಂದ ಅಧಿಸೂಚನೆ?

ಕೊರೋನಾ‌ ಹರಡುವಿಕೆ ಹೆಚ್ಚಾದ‌‌ ಹಿನ್ನೆಲೆಯಲ್ಲಿ ಲಾಕ್ ಡೌನ್ ಅಸ್ತ್ರ ಬಳಕೆ ಮಾಡಲಾಗಿತ್ತು. ಇದರಿಂದಾಗಿ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಹೊರತು ಪಡಿಸಿ ಉಳಿದ ತರಗತಿಗಳ ಪರೀಕ್ಷೆಗಳೆಲ್ಲವೂ ರದ್ದಾಗಿದ್ದವು.

news18-kannada
Updated:August 26, 2020, 8:27 AM IST
ಶಾಲಾ-ಕಾಲೇಜುಗಳ ರೀ-ಓಪನ್ ಮತ್ತೆ ವಿಳಂಬ; ಶೀಘ್ರವೇ ಕೇಂದ್ರದಿಂದ ಅಧಿಸೂಚನೆ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಆಗಸ್ಟ್​ 26): ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಆರ್ಥಿಕ ಚಟುವಟಿಕೆಗಳು ಸರಾಗವಾಗಿ ನಡೆಯಲು ಅನುವು ಮಾಡಿ ಕೊಡಲಾಗಿದೆ. ಆದರೆ, ಸಿನಿಮಾ ಥಿಯೇಟರ್​, ಶಾಲಾ-ಕಾಲೇಜುಗಳ ಬಾಗಿಲು ಇನ್ನೂ ತೆರೆದಿಲ್ಲ. ಈಗ ಅವುಗಳ ರೀ ಒಪನ್​ ಆಗೋದು ಯಾವಾಗ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ.

ಕೊರೋನಾ‌ ಹರಡುವಿಕೆ ಹೆಚ್ಚಾದ‌‌ ಹಿನ್ನೆಲೆಯಲ್ಲಿ ಲಾಕ್ ಡೌನ್ ಅಸ್ತ್ರ ಬಳಕೆ ಮಾಡಲಾಗಿತ್ತು. ಇದರಿಂದಾಗಿ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಹೊರತು ಪಡಿಸಿ ಉಳಿದ ತರಗತಿಗಳ ಪರೀಕ್ಷೆಗಳೆಲ್ಲವೂ ರದ್ದಾಗಿದ್ದವು. ಅವರುಗಳ ಹಳೇ ಅಂಕಗಳನ್ನ ಪರಿಗಣಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿದೆ. ಈ ನಡುವೆ ಈಗಾಗಲೇ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳೆಲ್ಲ ಲಾಕ್​ಡೌನ್​ನಿಂದಾಗಿ ನಿಂತಿದೆ.

ಇದನ್ನೂ ಓದಿ: ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಮುಸುಕಿನ ಗುದ್ದಾಟ..?

ಈ ಹಿಂದೆ ಜುಲೈನಲ್ಲಿ ರಾಜ್ಯದ ಶಾಲೆಗಳು ಆರಂಭ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ ಜೂನ್​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ, ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ಕಾರಣ ಶಾಲಾ- ಕಾಲೇಜು ರೀ ಓಪನಿಂಗ್​ ದಿನಾಂಕವನ್ನು ಮತ್ತೆ ಮುಂದೂಡಲಾಗಿತ್ತು. ಇದಲ್ಲದೆ ದೇಶದಲ್ಲಿ ಏಕಾಏಕಿ ಕೊರೋನಾ ಹೆಚ್ಚುತ್ತಿರುವುದರಿಂದ ಸೆಪ್ಟೆಂಬರ್​​ನಲ್ಲಿ ಶಾಲಾ-ಕಾಲೇಜು ಆರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ‌ ಇದೀಗ ಸೆಪ್ಟೆಂಬರ್​ ಅಂತ್ಯದವರೆಗೆ ಆನ್​ಲೈನ್ ಕ್ಲಾಸ್​ಗಳು ನಡೆಯಲಿವೆಯಂತೆ. ಬಳಿಕ ಅಕ್ಟೋಬರ್ ನಿಂದ ಆಫ್​​ಲೈನ್ ಅಂದರೆ ಶಾಲಾ-ಕಾಲೇಜು ಆರಂಭವಾಗಲಿರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಉನ್ನತ ಮೂಲಗಳು ನ್ಯೂಸ್​18 ಕನ್ನಡಕ್ಕೆ ಖಚಿತ ಪಡಿಸಿವೆ.  ಆಗಸ್ಟ್​ ಅಂತ್ಯಕ್ಕೆ ಅನ್ ಲಾಕ್ 3 ಮುಗಿಯಲಿದ್ದು, ಸೆಪ್ಟೆಂಬರ್​ಗೆ ಅನ್ ಲಾಕ್ 4 ಶುರುವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ.
Published by: Rajesh Duggumane
First published: August 26, 2020, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading