ಶಾಲೆಯ ಮಕ್ಕಳಿಂದ ಕಾರು ತೊಳೆಸಿಕೊಂಡ ಮೇಷ್ಟ್ರು

news18
Updated:August 28, 2018, 1:30 PM IST
ಶಾಲೆಯ ಮಕ್ಕಳಿಂದ ಕಾರು ತೊಳೆಸಿಕೊಂಡ ಮೇಷ್ಟ್ರು
news18
Updated: August 28, 2018, 1:30 PM IST
-ರಘುರಾಜ್ , ನ್ಯೂಸ್ 18 ಕನ್ನಡ

ಕೋಲಾರ ( ಆಗಸ್ಟ್ 28) :  ಶಾಲಾ ಮಕ್ಕಳನ್ನ ಯಾವುದೇ ಇತರ ಚಟುವಟಿಕೆಗೆ ಬಳಸಿಕೊಳ್ಳದಂತೆ ಕಟ್ಟು ನಿಟ್ಟಿನ ಆದೇಶ ಇದೆ, ಆದರೆ ಯಾಕೋ ನಮ್ಮ ಸರ್ಕಾರಿ ಟೀಚರ್ಸ್ ಯಾವುದು ಲೆಕ್ಕಕ್ಕೆ ತೆಗೆದುಕೊಳ್ತಿಲ್ಲ, ಇಲ್ಲೊಬ್ಬ ಶಿಕ್ಷಕ ತನ್ನ ಕಾರನ್ನ ತೊಳಿಸಿಕೊಳ್ಳುವುದಕ್ಕೆ ಮಕ್ಕಳನ್ನ ಬಳಸಿಕೊಂಡ್ರು, ಮತ್ತೊಬ್ರು ಕಟ್ಟಡ ಕಾಮಗಾರಿ ಕೆಲಸಗಳಿಗೆ ಮಕ್ಕಳನ್ನ ಬಳಸಿಕೊಂಡದ್ದು, ಕಂಡು ಬಂದಿದೆ, ಎಲ್ಲಿ ಏನು ಅಂತೀರಾ ಈ ಸುದ್ದಿ ಓದಿ..

ಈ ದೃಶ್ಯಗಳು ಕಂಡು ಬಂದಿದ್ದು, ಕೋಲಾರ ತಾಲೂಕಿನ ತಿರುಮಲ ಕೊಪ್ಪ ಸರ್ಕಾರಿ ಶಾಲೆ, ಹಾಗು ಕೋಲಾರ ನಗರದ ಗಾಂಧೀನಗರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಚೆನ್ನಾಗಿ ಓದಿ ಶಿಕ್ಷಣ ಜ್ಞಾನದಿಂದ ಕೌಶಲ್ಯ ಹೆಚ್ಚಿಸಿಕೊಳ್ಳೋಕೆ ಶಾಲೆಗೆ ಬರೋ ಬಡ ಮಕ್ಕಳನ್ನ, ನಮ್ಮ ಗೌರವಾನ್ವಿತ ಸರ್ಕಾರಿ ಶಾಲೆ ಶಿಕ್ಷಕರು ಬಳಸಿಕೊಳ್ಳೊ ಪರಿಯಿದು, ಒಬ್ರು ಕಾರು ಗಲೀಜಾಗಿದೆ ಎಂದು ಕಾರು ತೊಳೆಸಿಕೊಂಡ್ರೆ, ಮತ್ತೊಬ್ಬರು ಮುಂದೆ ನಿಂತು ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಕಾಮಗಾರಿ ತ್ಯಾಜ್ಯವನ್ನ ಶುಚಿ ಮಾಡಿಸ್ತಾ ಇದ್ದಾರೆ.

ಕೋಲಾರ ನಗರದ ಗಾಂಧೀನಗರ ಬಡಾವಣೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಆವರಣದಲ್ಲಿನ ಇಟ್ಟಿಗೆ ಚೂರು ಆರಿಸುತ್ತಿರುವುದು ಶಿಕ್ಷಕ ನಾರಾಯಣಸ್ವಾಮಿ ಎನ್ನುವರು ಮುಂದೆ ಸಮ್ಮುಖದಲ್ಲಿ ಗುದ್ದಲಿ, ಚೆನಕೆ, ಬಾಂಡ್ಲಿಯನ್ನ ಬಳಸಿ ಕೂಲಿ ಕಾರ್ಮಿಕರಂತೆ ಕೆಲಸ ಮಾಡ್ತಿರುವ ದೃಶ್ಯಗಳು ಸ್ತಳೀಯರೇ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ.

ಇನ್ನು ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ತಿರುಮಲಕೊಪ್ಪ ಗ್ರಾಮದ ಶಾಲೆ ಶಿಕ್ಷಕ ಬಸವರಾಜ್ ಸ್ವಲ್ಪ ಡಿಫರೆಂಟಾದ ತಮ್ಮ ಮಾರುತಿ ಕಾರನ್ನ ಶಾಲೆ ಎದುರೇ ನಿಲ್ಲಿಸಿ ಮಕ್ಕಳನ್ನ ಬಳಸಿಕೊಂಡು ಕಾರ್ ಕ್ಲೀನ್ ಮಾಡಿಸಿಕೊಂಡಿದ್ದಾನೆ, ಇದು ಸ್ಥಳೀಯರು ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರಶ್ನಿಸಿದ್ದಾರೆ.

ಶಾಲಾ ಶಿಕ್ಷಕರ ವರ್ತನೆ ಖಂಡಿಸಿ ಇಂದು ಕೋಲಾರ ಬಿಇಒ ಕಛೇರಿ ಎದುರು ರೈತ ಸಂಘದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೂಡಲೇ ಇಬ್ಬರು ಶಿಕ್ಷಕರ ಅಮಾನತಿಗೆ ಆಗ್ರಹಿಸಿ, ಮನವಿ ನೀಡಿದರು.

ಮಕ್ಕಳನ್ನ ಕೂಲಿ ಹಾಳಾಗಿ ಬಳಿಸಿದ ಕುರಿತು ನ್ಯೂಸ್ 18 ಕನ್ನಡ ವಾಹಿನಿ ಬೆಳಗ್ಗಿನಿಂದ ವಿಸ್ತತ ವರದಿ ಪ್ರಸಾರ ಮಾಡಿದ ಹಿನ್ನಲೆ, ಎಚ್ಚೆತ್ತುಕೊಂಡಿರುವ ಕೋಲಾರ ತಾಲೂಕು ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಒಂದೇ ದಿನದಲ್ಲಿ ತನಿಖೆ ನಡೆಸಿ ಇಬ್ಬರು ಶಿಕ್ಷಕರ ವಿರುದ್ದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ
Loading...

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಇಳಿಕೆಯಾಗ್ತಿರೋದು ಗೊತ್ತಿರುವ ವಿಚಾರ, ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳ ಪೋಷಕರು ಖಾಸಗಿ ಶಾಲೆಗಳತ್ತ ಒಲವು ತೊರಿಸ್ತಿದ್ದಾರೆ, ಸರ್ಕಾರಿ ಶಾಲೆಗಳಿಗೆ ಬಡಬಗ್ಗರ ಮಕ್ಕಳೇ ಹೆಚ್ಚಿಗೆ ಹೋಗೋದ್ರಿಂದ ಶಿಕ್ಷಕರು ಮಕ್ಕಳನ್ನ ಇಂತಹ ಚಟುವಟಿಕೆಗೆ ಬಳಸೋದು ಶಿಕ್ಷಕ ವೃತ್ತಿಗೆ ಅವಮಾನ ಎಂದರು ತಪ್ಪಾಗಲಾರದು.

 
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...