Report: ನಿಮ್ ಮಕ್ಕಳು ಫೆ.14ರಂದೂ 'ಸ್ಪೆಷಲ್' ಕ್ಲಾಸ್ ಅಂತ ಹೋಗಿದ್ರಾ? ಹಾಗಿದ್ರೆ ಈ ಸುದ್ದಿ ಓದಲೇ ಬೇಕು!

“ನಿನ್ ವಯಸ್ಸಲ್ಲಿ ನಾನು ದುಡಿದು ಮನೆ ಕಟ್ಟಿಸಿದ್ದೆ” ಅಂತ ಅಪ್ಪ ಅಂತಾರೆ. “ನಿನ್ ವಯಸ್ಸಲ್ಲಿ ನಾನು ಮನೆ ಕೆಲ್ಸ ಎಲ್ಲಾ ಕಲಿತಿದ್ದೆ ಗೊತ್ತಾ” ಅಂತ ಅಮ್ಮ ಹೇಳ್ತಾಳೆ. ಆದ್ರೆ ಈ ನಮ್ 5ಜಿ ಜನರೇಶನ್ ಹುಡುಗ, ಹುಡುಗಿಯರು ನಿಮಗಿಂತ ಒಂದ್ ಹೆಜ್ಜೆ ಮುಂದೆನೇ ಹೋಗಿರುತ್ತಾರೆ. ಶಾಲೆಗೆ ಅಂತ ಹೋಗೋ ಈ ಹದಿಹರೆಯದ ಹುಡುಗರು, ಅಸಲಿಗೆ ಶಾಲೆಗೆ ಹೋಗಿರೋದೇ ಇಲ್ಲ. ಹಾಗಿದ್ರೆ ಸ್ಕೂಲ್‌ಗೆ ಅಂತ ರೆಡಿಯಾಗಿ ಹೊರಟವರು ಎಲ್ಲಿ ಹೋದರು? ಸಂಜೆ ಕ್ಲಾಸ್ ಮುಗಿಯೋ ಟೈಮಲ್ಲಿ ಮನೆಗೆ ಬರೋ ಇವರು ಇಷ್ಟ್ ಹೊತ್ತು ಇದ್ದಿದ್ದಾದ್ರೂ ಎಲ್ಲಿ? ಇಲ್ಲಿದೆ ಓದಿ ಒಂದು ಶಾಕಿಂಗ್ ರಿಪೋರ್ಟ್…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: “ಹೆಣ್ಣು ಮಗು (Girl) ಇದ್ರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂಗೆ” ಅಂತ ಹಿಂದೆಲ್ಲ ಹಿರಿಯರು ಹೇಳ್ತಿದ್ದರು. ಆದ್ರೀಗ ಹೆಣ್ಣಿರಲಿ, ಗಂಡಿರಲಿ ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ “ಕೆಂಡ ಸೆರಗಲ್ಲಿ ಇಟ್ಟುಕೊಂಡಂತೆ”! ಯಾಕೆಂದರೆ ಮಕ್ಕಳನ್ನು ಬೆಳೆಸುವುದು (Children) ಅದೂ ಹದಿಹರೆಯದ ಮಕ್ಕಳನ್ನು ನೋಡಿ ಕೊಳ್ಳುವುದು ಈಗಿನ ಕಾಲದಲ್ಲಿ ತುಂಬಾ ರಿಸ್ಕಿ (Risky). ಮೊಬೈಲ್ (Mobile), ಸೋಶಿಯಲ್ ಮೀಡಿಯಾ (Social Media), ಸಿನಿಮಾ (Cinema) ಇತ್ಯಾದಿಗಳ ಸೆಳೆತಕ್ಕೆ ಸಿಕ್ಕ ಮಕ್ಕಳು ಬಾಲ್ಯದಲ್ಲೇ (Childhood) ಯೌವ್ವನ ಪಡೆದು ಬಿಡುತ್ತಾರೆ. “ನಿನ್ ವಯಸ್ಸಲ್ಲಿ ನಾನು ದುಡಿದು ಮನೆ ಕಟ್ಟಿಸಿದ್ದೆ” ಅಂತ ಅಪ್ಪ ಅಂತಾರೆ. “ನಿನ್ ವಯಸ್ಸಲ್ಲಿ ನಾನು ಮನೆ ಕೆಲ್ಸ ಎಲ್ಲಾ ಕಲಿತಿದ್ದೆ ಗೊತ್ತಾ” ಅಂತ ಅಮ್ಮ ಹೇಳ್ತಾಳೆ. ಆದ್ರೆ ಈ ನಮ್ 5ಜಿ (5G) ಜನರೇಶನ್ (Generation) ಹುಡುಗ, ಹುಡುಗಿಯರು ನಿಮಗಿಂತ ಒಂದ್ ಹೆಜ್ಜೆ ಮುಂದೆನೇ ಹೋಗಿರುತ್ತಾರೆ. ಶಾಲೆಗೆ ಅಂತ ಹೋಗೋ ಈ ಹದಿಹರೆಯದ ಹುಡುಗರು, ಅಸಲಿಗೆ ಶಾಲೆಗೆ ಹೋಗಿರೋದೇ ಇಲ್ಲ. ಹಾಗಿದ್ರೆ ಸ್ಕೂಲ್‌ಗೆ ಅಂತ ರೆಡಿಯಾಗಿ ಹೊರಟವರು ಎಲ್ಲಿ ಹೋದರು? ಸಂಜೆ ಕ್ಲಾಸ್ ಮುಗಿಯೋ ಟೈಮಲ್ಲಿ ಮನೆಗೆ ಬರೋ ಇವರು ಇಷ್ಟ್‌ ಹೊತ್ತು ಇದ್ದಿದ್ದಾದ್ರೂ ಎಲ್ಲಿ? ಇಲ್ಲಿದೆ ಓದಿ ಒಂದು ಶಾಕಿಂಗ್ ರಿಪೋರ್ಟ್…

 ಶಾಲೆಗೆ ಹೋಗ್ತಾರೆ, ಕ್ಲಾಸ್‌ನಲ್ಲಿ ಕೂರೋದಿಲ್ಲ ನಿಮ್ಮ ಮಕ್ಕಳು!

ಇದು ಎಲ್ಲಾ ಮಕ್ಕಳು ಹೀಗೆ ಅಂತ ಹೇಳುತ್ತಿಲ್ಲ, ಆದರೆ ಹೆಚ್ಚಿನ ಶಾಲಾ ಮಕ್ಕಳು ಈಗ ಹಿಗೆಯೇ ಮಾಡ್ತಿದ್ದಾರಂತೆ. ಕೊರೋನ ಅಂತ ಕ್ಲಾಸ್ ಎಲ್ಲಾ ಕ್ಲೋಸ್ ಮಾಡಿ, ಆನ್‌ಲೈನ್ ಕ್ಲಾಸ್ ಮಾಡಿದ್ದು ಆಯ್ತು. ಬಳಿಕ ಕೋವಿಡ್ ಕೇಸ್ ಕಡಿಮೆ ಆಗಿ ಕ್ಲಾಸ್ ಶುರು ಮಾಡಿದ್ದು ಆಯ್ತು. ನಿಮ್ಮ ಮಕ್ಕಳೇನೋ ಬೆಳ್ ಬೆಳಗ್ಗೆಯೇ ಎದ್ದು, ರೆಡಿಯಾಗಿ ಶಾಲೆಗೆ ಹೋಗಿದ್ದೂ ಆಯ್ತು. ಗೇಟ್‌ವರೆಗೆ ಹೋಗಿ ಅಮ್ಮ ಟಾಟಾ ಮಾಡಿ ಬಂದಿದ್ರೆ, ಅಪ್ಪ ಬೈಕ್‌ನಲ್ಲಿ ಕೂರಿಸಿಕೊಂಡು ಶಾಲೆ ಗೇಟ್‌ವರೆಗೆ ಬಿಟ್ಟು ಬಂದಿದ್ದರು. ಎಲ್ಲಾ ಫೈನ್.. ಆದ್ರೆ ಗೇಟ್‌ವರೆಗೆ ಹೋದ ನಿಮ್ಮ ಮಕ್ಕಳು ಕ್ಲಾಸ್‌ ಒಳಗೆ ಬಂದೇ ಇಲ್ವಂತೆ ಕಣ್ರೀ…

ಫೆಬ್ರವರಿ 14ಕ್ಕೂ ಸ್ಪೆಷಲ್ ಕ್ಲಾಸ್ ಅಂತ ಹೋಗಿದ್ರಾ?

ಅಂದ್ಹಾಗೆ ಮೊನ್ನೆ ಮೊನ್ನೆ ಫೆಬ್ರವರಿ 14 ಕಳೆದು ಹೋಯ್ತಲ್ಲ. ಆ ದಿನ ಹಿಜಾಬ್ ಗಲಾಟೆ ಅದು ಇದು ಅಂತ ಶಾಲೆಗಳಿಗೆಲ್ಲ ರಜೆ ಇತ್ತು. ಆದ್ರೆ ಆ ದಿನ ಕೂಡ ನಿಮ್ಮ ಮಕ್ಕಳು ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ ಅಂತ ರೆಡಿಯಾಗಿ ಹೋಗಿರಬೇಕಲ್ವಾ? ಒಮ್ಮೆ ಯೋಚಿಸಿ ನೋಡಿ, ಆ ದಿನ ವ್ಯಾಲೆಂಟೈನ್ಸ್‌ ಡೇ ಕಣ್ರೀ.

ಇದನ್ನೂ ಓದಿ: Mud game: ಮಣ್ಣಿನಲ್ಲಿ ಮಕ್ಕಳನ್ನು ಆಡಲು ಬಿಟ್ಟು ನೋಡಿ, ಧೂಳೆಂದು ದೂರ ಸರಿಯಬೇಡಿ ಸಂಶೋಧನೆಯೇ ಹೇಳಿದೆ ಇದರ ಮಹತ್ವ

ಲವ್‌ನಲ್ಲಿ ಬಿದ್ದಿದ್ದಾರಂತೆ ನಿಮ್ಮ ಮಕ್ಕಳು!

ಹೌದು ಸ್ವಾಮಿ, ಇದು ನಿಮಗೆ ಆಘಾತ, ಆಶ್ಚರ್ಯ ಆದರೂ ನೀವು ಇದನ್ನು ನಂಬಲೇ ಬೇಕು. ಹೀಗಂತೆ ನಾವು ಹೇಳ್ತಿಲ್ಲ ಈ ಒಂದು ರಿಪೋರ್ಟ್ ಹೇಳ್ತಿದೆ. ಮಕ್ಕಳು ಓದು, ಬರಹ, ಕಲಿಕೆಯ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರಂತೆ. ಹೀಗಂತ ಎಲ್ಲಾ ಮಕ್ಕಳೂ ಹೀಗೆ ಅಲ್ಲ, ನಿಮ್ಮ ಮಕ್ಕಳು ಚೆನ್ನಾಗೇ ಓದುತ್ತಿರಬಹುದು. ಆದರೂ ಅವರ ಮೇಲೆ ನಿಮ್ಮ ಗಮನ ಇರಲಿ.

ಮಹಿಳಾ ಆಯೋಗಕ್ಕೆ ಅಮ್ಮಂದಿರ ದೂರು

ಹೌದು, ರಾಜ್ಯ ಮಹಿಳಾ ಆಯೋಗಕ್ಕೆ ಇತ್ತೀಚಿನ ದಿನಗಳಲ್ಲಿ ಅಮ್ಮಂದಿರು ಹಾಗೂ ಶಾಲಾ ಹುಡುಗಿಯರು ಕಾಲ್ ಮಾಡ್ತಿದ್ದಾರಂತೆ. ನಮ್ಮ ಮಗ ಓದಿನಲ್ಲಿ ಆಸಕ್ತಿ ತೋರುತ್ತಿಲ್ಲ, ಪಾರ್ಕು, ಸಿನಿಮಾ ಅಂತ ಅಲೆಯುತ್ತಿರ್ತಾನೆ ಅನ್ನೋದು ಅಮ್ಮಂದಿರ ಕಂಪ್ಲೇಂಟ್. ಇತ್ತ ಹದಿಹರೆಯದ ಹುಡುಗಿಯರು ಕಾಲ್ ಮಾಡಿ, ಈಗಾಗಲೇ ನಾವು ಪ್ರೀತಿಯಲ್ಲಿ ಮೋಸಹೋದ್ವಿ ಅಂತ ಕಣ್ಣೀರಿಡ್ತಿದ್ದಾರಂತೆ.

ದೂರುಗಳ ಪಟ್ಟಿಗೆ ಹೊಸ ಸೇರ್ಪಡೆ

ಪ್ರತಿ ದಿನ ಮಹಿಳಾ ಆಯೋಗಕ್ಕೆ ನೂರಾರು ದೂರುಗಳು ಬರುತ್ತವೆ. ರಕ್ಷಣೆ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕಂಪ್ಲೇಂಟ್ ಆಗ್ತವೆ. ಇದೀಗ ಈ ಪಟ್ಟಿಗೆ ಹದಿಹರೆಯದವರ ಪ್ರೇಮ ಪ್ರಕರಣ ಕೇಸ್‌ಗಳು ಸೇರ್ಪಡೆಯಾಗಿವೆಯಂತೆ.

ಇದನ್ನೂ ಓದಿ: Parents Tips: ಮಕ್ಕಳಿಗೆ ಶಿಸ್ತು ಕಲಿಸುವ ಪೋಷಕರೇ.. ತಪ್ಪು ಮಾಡದಂತೆ ಮೊದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ!

ಇದುವರೆಗೂ 67 ಶಾಲಾ ಲವ್ ಕೇಸ್ ದಾಖಲು

ಶಾಲಾ ಲವ್ ಕೇಸ್ ಸಂಬಂಧ 67 ಪ್ರಕರಣಗಳು ದಾಖಲಾಗಿದ್ಯಂತೆ. ಇನ್ನು ಮಹಿಳಾ ಆಯೋಗದಿಂದ 100ಕ್ಕೂ ಹೆಚ್ಚು ಸುಮೋಟೋ ಕೇಸ್ ದಾಖಲು ಮಾಡಿಕೊಂಡಿದೆ.

ಇವೆಲ್ಲ ನೋಡಿದ್ರೆ ಪೋಷಕರು ಹಾಗೂ ಶಾಲಾ ಮಕ್ಕಳು ಇಬ್ಬರೂ ಎಚ್ಚರಿಕೆಯಿಂದ ಇರಬೇಕು. ವಯಸ್ಸಲ್ಲದ ವಯಸ್ಸಲ್ಲಿ ಓದು ಬಿಟ್ಟು, ಪ್ರೀತಿ-ಪ್ರೇಮ ಅಂತ ಓಡಾಡಿದ್ರೆ ಭವಿಷ್ಯಕ್ಕೆ ಪೆಟ್ಟು ಬೀಳೋದು ಗ್ಯಾರೆಂಟಿ. ಹಾಗಾಗದಿರಲಿ…
Published by:Annappa Achari
First published: