• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KSRTC: ಮೇ 16ಕ್ಕೆ ಶಾಲೆ-ಕಾಲೇಜು ಆರಂಭ; ಹಳೇ ಬಸ್ ಪಾಸ್​ನಲ್ಲೇ ಪ್ರಯಾಣಕ್ಕೆ ಅವಕಾಶ

KSRTC: ಮೇ 16ಕ್ಕೆ ಶಾಲೆ-ಕಾಲೇಜು ಆರಂಭ; ಹಳೇ ಬಸ್ ಪಾಸ್​ನಲ್ಲೇ ಪ್ರಯಾಣಕ್ಕೆ ಅವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಸಾಲಿನಲ್ಲಿ ಪಡೆದಿರುವ ಪಾಸ್‌ಗಳು ಮಾನ್ಯತಾ ಅವಧಿ ಜೂನ್ 30ರವರೆಗೆ ಇರುವುದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಹಳೆಯ ಪಾಸುಗಳನ್ನು ಬಳಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

  • Share this:

ಬೆಂಗಳೂರು (ಮೇ 14) : ರಾಜ್ಯದಲ್ಲಿ ಶಾಲಾ ಹಾಗೂ ಕಾಲೇಜುಗಳು (School And College) ಮೇ 16 ರಿಂದ ಪುನಾರಂಭವಾಗಲಿವೆ ಎಂದು ರಾಜ್ಯ ಸರಕಾರ ಘೋಷಿಸಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಇನ್ನು ಬಸ್​ ಪಾಸಿನ (Bus Pass) ಬಗ್ಗೆ ಮಕ್ಕಳು ಹಾಗೂ ಪೋಷಕರಲ್ಲಿ ಗೊಂದಲ ಏರ್ಪಟ್ಟಿತ್ತು. ಹಳೇ ಬಸ್​ ಜೂನ್ ವರೆಗೂ ಇದ್ದು ಜೂನ್​ವರೆಗೂ ಸ್ಕೂಲ್​, ಕಾಲೇಜ್​ ಪಾಸ್​ಗಳನ್ನು ಬಸ್​ಗಳಲ್ಲಿ ಸ್ವೀಕರಿಸುತ್ತಾರಾ ಎಂಬ ಪ್ರಶ್ನೆ ಮೂಡಿತ್ತು ಇದೀಗ KSRTC ತನ್ನ ಪ್ರಕಟಣೆ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರ (Parents) ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ ಪಾಸ್‌ ಮಾನ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ ನೀಡಿದೆ.


ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ


ಶನಿವಾರ ಪ್ರಕಟಣೆ ಹೊರಡಿಸಿರುವ KSRTC 2022-23ರ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಇದೇ ತಿಂಗಳ 16 ರಂದು ಆರಂಭವಾಗುತ್ತಿದೆ. ಹಾಗಾಗಿ ಪ್ರಸ್ತುತ ಸಾಲಿನ ಪಾಸುಗಳನ್ನು ಪಡೆಯಲು ಸಮಯಾವಕಾಶ ಒದಗಿಸಿಕೊಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಆದ್ದರಿಂದ ಕಳೆದ ಸಾಲಿನಲ್ಲಿ ಪಡೆದಿರುವ ಪಾಸ್‌ಗಳು ಮಾನ್ಯತಾ ಅವಧಿ ಜೂನ್ 30ರವರೆಗೆ ಇರುವುದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಹಳೆಯ ಪಾಸುಗಳನ್ನು ಬಳಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ಹಳೇ ಬಸ್​ ಬಳಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದು.


ಯಾವ ಬಸ್ಸುಗಳಲ್ಲಿ ಬಳಸಲು ಅವಕಾಶ


2021-22ರ ಸಾಲಿನಲ್ಲಿ ರಿಯಾಯಿತಿ ಮತ್ತು ಉಚಿತ ಪಾಸ್‌ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಹಳೆಯ ಪಾಸುಗಳನ್ನು ಕರಾರರಸಾ ನಿಗಮದ ನಗರ, ಹೊರ ಹೊಲಯ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಇನ್ನು ಹೊಸ ಬಸ್‌ ಪಾಸ್‌ಗಳ ವಿತರಣಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಆ ನಂತರ ನಿಯಾಮಾನುಸಾರ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ


ಮಾಹಿತಿ ನೀಡಲು ಸಾರಿಗೆ ಸಿಬ್ಬಂದಿಗೆ ಸೂಚನೆ


ಬಸ್‌ ಪಾಸ್‌ ಮಾನ್ಯತೆಯ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ಗೊಂದಲ, ತೊಂದರೆ ಉಂಟಾಗದಂತೆ ಸೂಕ್ತ ಮಾಹಿತಿಯನ್ನು ಒದಗಿಸಿಕೊಡುವಂತೆ ಚಾಲನಾ ಸಿಬ್ಬಂದಿಗೆ ಇಲಾಖೆ ಸೂಚನೆ ನೀಡಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ದೂರುಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಬೇಕೆಂದು ತಿಳಿಸಲಾಗಿದೆ.


ವಿದ್ಯಾರ್ಥಿಗಳ ಬಸ್​ ವಿತರಣೆಗೆ ಸೂಚನೆ


ಸಾರಿಗೆ ಇಲಾಖೆಗೆ ಮಾಹಿತಿ ಮೇ 16 ಶಾಲೆಗಳು ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವರು ಸಾರಿಗೆ ಇಲಾಖೆಗೆ ಈಗಾಗಲೆ ಮಾಹಿತಿ ನೀಡಿದ್ದರು. ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಹಳೆಯ ಐಡಿ ಕಾರ್ಡ್ ಅಥವಾ ಶಾಲೆಯಿಂದ ಕೊಡುವ ಲೆಟರ್ ಅನ್ನು ಗಮನಿಸಿ ಪಾಸ್ ವಿತರಿಸಬೇಕು. ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಸೇರಿದಂತೆ ಯಾವುದೇ ನಿಗಮದ ಸಾರಿಗೆಯಿಂದಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಸೂಚಿಸಿಲಾಗಿದೆ.


ಇದನ್ನೂ ಓದಿ: ಮೂರೇ ದಿನದಲ್ಲಿ ಸಿಗಲಿದೆ SSLC ಉತ್ತರ ಪತ್ರಿಕೆ: ನಕಲು ಪ್ರತಿ ಪಡೆಯೋದು ಹೇಗೆ?


ಶಾಲೆಗಳನ್ನು ಸ್ವಚ್ಛಗೊಳಿಸಲು ಸೂಚನೆ


ಶಾಲೆ ರಿಪೇರಿ ಕೆಲಸಗಳಿದ್ದರೆ ಮುಗಿಸಲು ಸೂಚನೆ ಶಾಲೆಗೆ ಮಕ್ಕಳು ಬರಬೇಕೆಂದರೆ ಶಾಲೆಯ ವಾತಾವರಣ ಪರಿಶುದ್ದವಾಗಿರಬೇಕು. ವಿದ್ಯಾರ್ಥಿಗಳು ಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ಉಲ್ಲಾಸಿತರಾಗಬೇಕು ಎಂಬ ಕಾರಣಕ್ಕೆ ಶಾಲೆಯನ್ನು ಸ್ವಚ್ಛಗೊಳಿಸಿ ಅಣಿಯಾಗಲು ತಿಳಿಸಲಾಗಿದೆ. ಇನ್ನು ಶಾಲೆಯ ಒಳಾಂಗಣದಲ್ಲಿ ಯಾವುದೇ ರೀತಿಯ ರಿಪೇರಿ ಕೆಲಸಗಳಿದ್ದರೇ ಹಾಗೂ ಬಣ್ಣವನ್ನು ಬಳಿಯಬೇಕಿದ್ದರೆ ಆ ಕಾರ್ಯಗಳನ್ನು ಮೇ 16ರ ಒಳಗೆ ಮುಗಿಸಿಕೊಳ್ಳುವಂತೆ  ಶಾಲೆಗಳ  ಮುಖ್ಯೋಪಾಧ್ಯಾಯರಿಗೆ ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Published by:Pavana HS
First published: