HOME » NEWS » State » SCHOOL REOPEN KARNATAKA SCHOOLS TO REOPEN FOR CLASSES 6 TO 8 TODAY KERALA EXCEPT BORDER AND BANGALORE SCT

Schools Reopen: ಇಂದಿನಿಂದ 6ರಿಂದ 8ನೇ ತರಗತಿ ಶಾಲೆ ಆರಂಭ; ಬೆಂಗಳೂರು, ಕೇರಳ ಗಡಿಯಲ್ಲಿ ವಿದ್ಯಾಗಮ ಮುಂದುವರಿಕೆ

Karnataka School Reopen | ಕರ್ನಾಟಕದಲ್ಲಿ 6ರಿಂದ 8ನೇ ತರಗತಿಯವರೆಗೆ ಇಂದಿನಿಂದ ಪೂರ್ಣ ಪ್ರಮಾಣದ ಶಾಲಾ ತರಗತಿಗಳು ನಡೆಯಲಿವೆ. ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಕೇರಳ ಗಡಿ ಭಾಗದ 6 ಮತ್ತು 7ನೇ ತರಗತಿಗೆ ವಿದ್ಯಾಗಮ ನಡೆಸಲಾಗುವುದು.

news18-kannada
Updated:February 22, 2021, 7:58 AM IST
Schools Reopen: ಇಂದಿನಿಂದ 6ರಿಂದ 8ನೇ ತರಗತಿ ಶಾಲೆ ಆರಂಭ; ಬೆಂಗಳೂರು, ಕೇರಳ ಗಡಿಯಲ್ಲಿ ವಿದ್ಯಾಗಮ ಮುಂದುವರಿಕೆ
ಪ್ರಾತಿನಿಧಿಕ ಚಿತ್ರ
 • Share this:
ಬೆಂಗಳೂರು (ಫೆ. 22): ಲಾಕ್​ಡೌನ್​ನಿಂದ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಪಾಠ ಮಾಡಲಾಗುತ್ತಿತ್ತು. ಪಬ್ಲಿಕ್ ಪರೀಕ್ಷೆ ಇರುವುದರಿಂದ ಈಗಾಗಲೇ 9ರಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲಾಗಿದೆ. ಇಂದಿನಿಂದ 6ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೂ ಶಾಲೆಯನ್ನು ಆರಂಭಿಸಲಾಗುವುದು. ಬಿಬಿಎಂಪಿ ಮತ್ತು ಕೇರಳದ ಗಡಿ ಭಾಗದ ಶಾಲೆಗಳ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾಗಮ ಮುಂದುವರೆಯಲಿದೆ. ಈ 2 ಭಾಗಗಳಲ್ಲಿ 8ನೇ ತರಗತಿ ಮಾತ್ರ ತೆರೆಯಲಾಗುವುದು. ಉಳಿದ ಎಲ್ಲ ಶಾಲೆಗಳಲ್ಲೂ 6ರಿಂದ 8ನೇ ತರಗತಿಯವರೆಗೆ ಇಂದಿನಿಂದ ಪೂರ್ಣ ಪ್ರಮಾಣದ ಶಾಲಾ ತರಗತಿಗಳು ನಡೆಯಲಿವೆ.

ಜುಲೈ 15ರಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯಲಾಗುವುದು. ಬೆಂಗಳೂರು ಮತ್ತು ಕೇರಳ ಗಡಿ ಭಾಗದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿರುವುದರಿಂದ ಆ ಭಾಗದಲ್ಲಿ 8ನೇ ತರಗತಿ ಶಾಲೆಗಳನ್ನು ಮಾತ್ರ ತೆರೆಯಲು ನಿರ್ಧರಿಸಲಾಗಿದೆ. 1ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಸರ್ಕಾರ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.

ಬಿಬಿಎಂಪಿ ಮತ್ತು ಕೇರಳ ಗಡಿ ಭಾಗದ 6 ಮತ್ತು 7ನೇ ತರಗತಿಗೆ ವಿದ್ಯಾಗಮ ನಡೆಸಲಾಗುವುದು. ಬೆಂಗಳೂರಿನಲ್ಲಿ 8ನೇ ತರಗತಿ ಮಾತ್ರ ಆರಂಭವಾಗಲಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲಿ 6,7, 8ನೇ ತರಗತಿಗೆ ಭೌತಿಕ ಕ್ಲಾಸ್ ಇಂದಿನಿಂದ ಶುರುವಾಗಲಿದೆ. 6ರಿಂದ 10ನೇ ತರಗತಿಗೆ ವಾರದಲ್ಲಿ 5 ದಿನ ಬೆಳಗ್ಗೆ 10 ರಿಂದ 4.30ರವರೆಗೆ ತರಗತಿಗಳು ನಡೆಯಲಿವೆ. ಶನಿವಾರದಂದು ಬೆಳಗ್ಗೆ 10.30ರಿಂದ 12.30ರವರೆಗೆ ತರಗತಿ ನಡೆಯಲಿದೆ. ಬಿಬಿಎಂಪಿ ಮತ್ತು ಕೇರಳ ಗಡಿ ಭಾಗದಲ್ಲಿ ಪ್ರತ್ಯೇಕ 3 ದಿನ ವಿದ್ಯಾಗಮ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ವಾಪಾಸ್ ಬರಬಹುದು; ಡಿಕೆ ಶಿವಕುಮಾರ್ ಆಹ್ವಾನ

ಶಾಲೆಗಳನ್ನು ಆರಂಭಿಸಿದ ನಂತರ ಆರೋಗ್ಯ ಇಲಾಖೆಯ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲೆ ಆರಂಭಕ್ಕೆ ಸರ್ಕಾರ ನಿಯಮಾವಳಿಗಳನ್ನು ಕೂಡ ಬಿಡುಗಡೆ ಮಾಡಿದೆ. ಆ ನಿಯಮಾವಳಿಗಳು ಹೀಗಿವೆ...

 • 6ರಿಂದ ಮೇಲಿನ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರಬೇಕು.
 • ದೈಹಿಕ ಅಂತರ, ಶುಚಿತ್ವ ಮತ್ತು ಮಾಸ್ಕ್ ಹಾಕುವುದು ಕಡ್ಡಾಯ.

 • ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ರ್ಯಾಂಡಮ್ ಟೆಸ್ಟ್ ಮಾಡಬೇಕು.

 • ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪತ್ರ ಕಡ್ಡಾಯ.

 • ಕೇರಳದಿಂದ ಬರುವ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿ ಕೋವಿಡ್ ಟೆಸ್ಟ್ ಕಡ್ಡಾಯ.

 • ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.

 • ಸಾರಿಗೆ ಇಲಾಖೆಯು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಟ್ರಿಪ್ ಒದಗಿಸುವುದು.

 • ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಅಗತ್ಯ.

 • ವಸತಿ ನಿಲಯಗಳು ಆರೋಗ್ಯ ಇಲಾಖೆ SOP ಪಾಲಿಸಬೇಕು.

 • ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಬೇಕು.


ಇಂದಿನಿಂದ 6ರಿಂದ 8ನೇ ತರಗತಿ ಶಾಲೆಗಳು ಆರಂಭವಾದರೂ ಶಾಲೆಗೆ ವಿದ್ಯಾರ್ಥಿಗಳು ಬರುವುದು ಕಡ್ಡಾಯವಲ್ಲ. ಆನ್ ಲೈನ್ ಮೂಲಕವೂ ಶಿಕ್ಷಣ ಮುಂದುವರಿಸಬಹುದು. ಕೇರಳದಲ್ಲಿ ಮತ್ತೊಮ್ಮೆ ಸೋಂಕು ಹರಡುತ್ತಿದೆ. ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಸೋಂಕು ಕಂಡು ಬಂದಿದೆ. ಬೆಂಗಳೂರಿನ ಎರಡು ಅಪಾರ್ಟ್ ಮೆಂಟ್ ನಲ್ಲೂ ಸೋಂಕು ವ್ಯಾಪಿಸಿದೆ. ಬೆಂಗಳೂರು ನಗರ, ಕೇರಳದ ಗಡಿ ಭಾಗದಲ್ಲಿ ಸ್ವಲ್ಪ ನಿಧಾನವಾಗಿ ಶಾಲೆ ಆರಂಭಿಸುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.

ಮಕ್ಕಳು ಹಾಗೂ ಶಿಕ್ಷಕರು ಒಟ್ಟಾಗಿ ಪರೀಕ್ಷೆ ಮಾಡಿಸಬೇಕು. ಶಾಲೆಗಳಲ್ಲೂ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳ ಕೊಠಡಿ ಲಭ್ಯತೆ, ವಿದ್ಯಾರ್ಥಿ ಸಂಖ್ಯೆ ಆಧರಿಸಿ ಕ್ರಮ ಕೈಗೊಂಡು ಶಾಲೆ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ.
Published by: Sushma Chakre
First published: February 22, 2021, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories