HOME » NEWS » State » SCHOOL REOPEN KARNATAKA GOVERNMENT PLANNING TO REOPEN 6 TO 9 STANDARD CLASSES IN SCHOOLS SCT

Schools Reopen: ಕರ್ನಾಟಕದಲ್ಲಿ ಫೆ. 1ರಿಂದ 6-9ನೇ ತರಗತಿ ಆರಂಭಕ್ಕೆ ಸರ್ಕಾರ ಚಿಂತನೆ; ಇಂದಿನ ಸಭೆಯಲ್ಲಿ ನಿರ್ಧಾರ

Karnataka Schools Reopen: ಈಗಾಗಲೇ 10, 12ನೇ ತರಗತಿ ಆರಂಭವಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭವಾಗಿದೆ. ಈ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ತಯಾರಿ ನಡೆಸಿದೆ.

news18-kannada
Updated:January 28, 2021, 10:24 AM IST
Schools Reopen: ಕರ್ನಾಟಕದಲ್ಲಿ ಫೆ. 1ರಿಂದ 6-9ನೇ ತರಗತಿ ಆರಂಭಕ್ಕೆ ಸರ್ಕಾರ ಚಿಂತನೆ; ಇಂದಿನ ಸಭೆಯಲ್ಲಿ ನಿರ್ಧಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ. 28): ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಮತ್ತು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಜ. 1ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ಹಾಗೇ, ಫೆ. 1ರಿಂದ 6ರಿಂದ 9ನೇ ತರಗತಿ ಮಕ್ಕಳಿಗೆ ಶಾಲೆ ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಕೇಸ್​ಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 6ರಿಂದ 9ನೇ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಈ ಬಗ್ಗೆ ಇಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಲಿದ್ದಾರೆ. ನಿನ್ನೆಯೇ ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜರುಗಬೇಕಾಗಿತ್ತು. ಆದರೆ, ನಿನ್ನೆ ಶಿಕ್ಷಣ ಇಲಾಖೆ ಸರಣಿ ಸಭೆ ಹಿನ್ನೆಲೆಯಲ್ಲಿ ಆ ಸಭೆ ರದ್ದಾಗಿತ್ತು. ಇಂದು ಇಬ್ಬರು ಸಚಿವರು 6ರಿಂದ 9ರವರೆಗೆ ಶಾಲೆ ಆರಂಭಿಸಲು ತಯಾರಿ ನಡೆಸುತ್ತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ಪಡೆದು ಆರಂಭಿಸಲು ಉತ್ಸುಕತೆ ತೋರಲಾಗಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ದರೋಡೆಗೆ ಹೋದ ಮನೆಯಲ್ಲಿ ಸೇಬು ತಿಂದು ಸಿಕ್ಕಿಬಿತ್ತು ಕಳ್ಳರ ಗ್ಯಾಂಗ್!

ಈಗಾಗಲೇ 10, 12ನೇ ತರಗತಿ ಆರಂಭವಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭವಾಗಿದೆ. ಈ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ತಯಾರಿ ನಡೆಸಿದೆ. 6ರಿಂದ 9ನೇ ತರಗತಿ ಹಾಗೂ 11ನೇ ತರಗತಿ ಆರಂಭಿಸಲು ತಯಾರಿ ನಡೆಸಲಾಗಿದೆ. ಅದೇ ರೀತಿ 4-5 ತರಗತಿ ಕೂಡ ಆರಂಭಿಸಲು ಚಿಂತನೆ ನಡೆಸಲಾಗಿದೆ. 1ರಿಂದ 3ನೇ ತರಗತಿ ಮಾತ್ರ ಆನ್ ಲೈನ್, ರೇಡಿಯೋ, ಡಿಡಿ ಚಂದನ ಕಾರ್ಯಕ್ರಮ ಮುಂದುವರಿಕೆಯಾಗಲಿದೆ.

ಈ ಬಗ್ಗೆ ಇಂದು ಆರೋಗ್ಯ ಸಚಿವರು ಮತ್ತು ಶಿಕ್ಷಣ ಸಚಿವರ ಜೊತೆಗೆ ಸಭೆ ನಡೆದ ಬಳಿಕ ನಿರ್ಧಾರವಾಗಲಿದೆ. ಕೊರೋನಾದಿಂದಾಗಿ ಲಾಕ್​ಡೌನ್ ಆದ ಬಳಿಕ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಜೂನ್​ನಿಂದ ಆನ್​ಲೈನ್ ತರಗತಿಗಳನ್ನು ಆರಂಭಿಸಲಾಗಿತ್ತು. ಬಳಿಕ ವಿದ್ಯಾಗಮವನ್ನೂ ಶುರು ಮಾಡಲಾಗಿತ್ತು. ಜನವರಿ 1ರಿಂದ ದ್ವಿತೀಯ ಪಿಯುಸಿ ಮತ್ತು ಎಸ್​ಎಸ್​ಎಲ್​ಸಿ ತರಗತಿಗಳನ್ನು ಶುರು ಮಾಡಲಾಗಿದೆ.
Published by: Sushma Chakre
First published: January 28, 2021, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories