Yadagiri: ಬಿಸಿಯೂಟದ ತರಕಾರಿ ಕದ್ದೊಯ್ಯುವ ಮಹಿಳೆ, ಕೇಳಿದರೆ ರಂಪಾಟ!

ಅಡುಗೆ ಸಹಾಯಕಿ ತರಕಾರಿ ಮನೆಗೆ ತೆಗೆದುಕೊಂಡು ಹೋಗುವ ಆರೋಪ ಕೇಳಿ ಬಂದಿದ್ದು ತರಕಾರಿ ತೆಗೆದುಕೊಂಡು ಹೋಗಬೇಡವೆಂದರೆ ರಂಪಾಟ ಮಾಡಿದ್ದಾರೆ.

ಅಡುಗೆ ಸಹಾಯಕಿ

ಅಡುಗೆ ಸಹಾಯಕಿ

  • Share this:
ಯಾದಗಿರಿ(ಜು.17): ಸರಕಾರ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮಧ್ಯಾಹ್ನದ ಬಿಸಿಯೂಟದ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟ ಯೋಜ‌ನೆಯಿಂದ (Midday Meal Scheme) ಅದೆಷ್ಟು ಮಕ್ಕಳು ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಮಧ್ಯಾಹ್ನ ಬಡ ಮಕ್ಕಳ ಹಸಿವು ನಿಗಿಸುವ ಬಿಸಿಯೂಟ ಯೋಜನೆಯು ಸಾಕಷ್ಟು ಅನುಕೂಲವಾಗಿದೆ. ಆದರೆ,
ಬಿಸಿಯೂಟ ಯೋಜನೆಯು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ .ಅದೆ ರೀತಿ ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳಿಗೆ ಬಿಸಿ ಊಟಕ್ಕೆ ಹಾಕುವ ತರಕಾರಿ (Vegetables) ಅಡುಗೆ ಸಹಾಯಕಿ ಕದ್ದು ಮನೆಯೆ ಒಯ್ದಿದ್ದಾರೆ ಎನ್ನುವ ಆರೋಪದ ವಿಡಿಯೋ  (Video) ಸಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದೆ.

ಮಕ್ಕಳಿಗೆ ಕೊಡಬೇಕಾದ ತರಕಾರಿ ಮನೆಗೆ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಲಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ಸಹಾಯಕಿ ದೇವೆಂದ್ರಮ್ಮ ಮಕ್ಕಳಿಗೆ ಅಡುಗೆಯಲ್ಲಿ ತರಕಾರಿ ಹಾಕಿ ಅಡುಗೆ ಮಾಡದೆ  ಹಾಗೆ ಅಡುಗೆ ಮಾಡಿ ಬಡಿಸುತ್ತಿದ್ದು, ಮಕ್ಕಳಿಗೆ ಹಾಕಬೇಕಿದ್ದ ತರಕಾರಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಳೆ ಎನ್ನುವ ಆರೋಪದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅವಾಜ್ ಹಾಕಿ ರಂಪಾಟ

ಅಡುಗೆ ಸಹಾಯಕಿ ನಿತ್ಯವೂ ಮನೆಗೆ ತೆಗೆದುಕೊಂಡು ಹೋಗುವದನ್ನು ಗಮನಿಸಿದ ವಿದ್ಯಾರ್ಥಿಗಳ ಪೋಷಕರು ಅನುಮಾನ ಗೊಂಡು  ದೇವಿಂದ್ರಮ್ಮಳನ್ನು ತಡೆದು ವಿಚಾರಿಸಿದ್ದರು. ಇದಕ್ಕೆ ಸುಮ್ಮನಿರದೇ ಪ್ರಶ್ನೆ ಮಾಡಿದವರಿಗೆ ಅವಾಜ್ ಹಾಕಿ ರಂಪಾಟ ಮಾಡಿದ್ದಾಳೆ.

ಮುಖ್ಯ ಶಿಕ್ಷಕರಿಗೇ ಅವಾಜ್

ದೇವೇಂದ್ರಮ್ಮ ನಾನು ತೆಗೆದುಕೊಂಡು ಹೋಗುತ್ತೆನೆ ಎನು ಮಾಡ್ತಿರಾ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾಳೆ. ಎಲ್ಲರ ಎದುರಲ್ಲಿ ಮುಖ್ಯ ಶಿಕ್ಷಕ ಹಣಮಂತ ಅವರಿಗೆ ಅಡುಗೆ ಸಹಾಯಕಿ ಅವಾಜ್ ಹಾಕಿದ್ದಾಳೆ‌.

ಶಿಕ್ಷಕ ಅಸಹಾಯಕ!

ಅಡುಗೆ ಸಹಾಯಕಿ ಮಕ್ಕಳಿಗೆ ಊಟದಲ್ಲಿ ತರಕಾರಿ ಹಾಕಿ ಮಾಡದೆ ಬರಿ ಅನ್ನ ಸಾಂಬರ್ ಮಾಡಿ‌ಹಾಕುತ್ತಿದ್ದಾಳೆ. ಮಕ್ಕಳಿಗೆ ನೀಡಬೇಕಿದ್ದ ತರಕಾರಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಳೆ ಎನ್ನುವ ಆರೋಪ ಕೇಳಿ ಬರುತ್ತಿದ್ದಂತೆ ಪೋಷಕರು ದೇವೆಂದ್ರಮ್ಮಳನ್ನ ಅಡ್ಡಗಟ್ಟಿ ವಿಚಾರಿಸಿದ್ದಾರೆ.ಆದರೆ ದೇವೆಂದ್ರಮ್ಮ ನಾನು ತೆಗದುಕೊಂಡು ಹೋಗುತ್ತೆನೆ ಎನು ಮಾಡ್ತಿರಾ ನೀವು ಯಾರು ನನ್ನನ್ನು ಕೇಳೊಕೆ ಎಂದು ಅವಾಜ್ ಹಾಕಿದ್ದಾಳೆ. ಶಾಲೆ ಮುಖ್ಯ ಶಿಕ್ಷಕನ ಮುಂದೆ ಪೋಷಕರು ಅಡುಗೆಯಲ್ಲಿ ತರಕಾರಿ ಇಲ್ಲ,ತರಕಾರಿ ತೆಗೆದುಕೊಂಡು ಹೋಗಬೇಡಿ ಎಂದು ಪೋಷಕರ ಅಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Ramanagara: ಆರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ರಾಜ್ಯ ಹೆದ್ದಾರಿ ಗುಂಡಿಮಯ; ಸ್ಥಳೀಯರಿಂದ ಪ್ರತಿಭಟನೆ

ನಾನು ತೆಗೆದುಕೊಂಡು ಹೋಗುತ್ತೆವೆ ನೀವು ಕೇಳಬೇಡಿ ಎಂದು ಪೋಷಕರಿಗೆ ಸಹಾಯಕಿ ಅವಾಜ್ ಹಾಕಿದ್ದಾಳೆ. ಅಡುಗೆ ಸಹಾಯಕಿ ಮುಂದೆ ಶಿಕ್ಷಕ ಅಸಹಾಯಕನಾದ ಪ್ರಸಂಗ ನಡೆಯಿತು.

ಮಿಕ್ಕಿದ ಅಡುಗೆ ಒಯ್ಯುತ್ತಿದ್ದರಾ?

ಅಡುಗೆ ಸಹಾಯಕಿ ಮಕ್ಕಳ ಊಟದಲ್ಲಿ ತರಕಾರಿ ಹಾಕುವ ಬದಲಾಗಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಳೆ ಎನ್ನುವ ವಿಡಿಯೋ ವೈರಲ್ ಆದ ವಿಚಾರವನ್ನು ಶಾಲಾ ಮುಖ್ಯ ಶಿಕ್ಷಕ ಹನುಮಂತ ಅವರನ್ನ ವಿಚಾರಿಸಿದರೆ, ಅಡುಗೆ ಸಹಾಯಕಿ ತರಕಾರಿ ತೆಗೆದುಕೊಂಡು ಹೋಗುತ್ತಿಲ್ಲ, ಮಕ್ಕಳು ಊಟಮಾಡಿದ ಮೇಲೆ ಹೆಚ್ಚಾಗಿ ಉಳಿದ ಅನ್ನವನ್ನು ಬಿಸಾಡಿ ಹಾಳು ಮಾಡುವ ಬದಲಾಗಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನು ತಪ್ಪಾಗಿ ಕೆಲವರು ಅರ್ಥೈಸಿಕೊಂಡು ಗಲಾಟೆ‌ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Re-Postmortem: ಪೇಂಟರ್ ರಮೇಶ್ ಕೊಲೆ ಕೇಸ್! ಮರು ಪೋಸ್ಟ್​ಮಾರ್ಟಂಗಾಗಿ ಕೆರೆಯಲ್ಲಿರೊ ನೀರು ಹೊರಕ್ಕೆ

ತರಕಾರಿ ಇಲ್ಲದೇ ಮಕ್ಕಳಿಗೆ ಅಡುಗೆ  ಮಾಡಲಾಗುತಿದ್ದು,ಅಡುಗೆಗೆ ಮಾಡಲು ತೆಗೆದುಕೊಂಡು ಬರುವ ತರಕಾರಿ ಯಾರು ತೆಗೆದುಕೊಂಡು ಹೋಗುತ್ತಿದ್ದಾರೆ.ಅಡುಗೆಯಲ್ಲಿ ತರಕಾರಿ ಯಾಕೆ ಬಳಕೆ ಮಾಡಲ್ಲ‌.ಹೀಗೆ ಹಲವಾರು ಅನುಮಾನದ ಪ್ರಶ್ನೆಗಳು ಕಾಡುತ್ತಿದ್ದು,ಬೆಂಕಿ ಇಲ್ಲದೇ ಹೊಗೆ ಕಾಣಿಸಲ್ಲವೆಂಬ ಮಾತಿನಂತೆ .ಪೋಷಕರ ಆರೋಪವನ್ನು ಕಡೆಗಣನೆ ಮಾಡಲು ಬರುವದಿಲ್ಲ.ಕಾರಣ ಶಿಕ್ಷಣ ಇಲಾಖೆ ಈ ಬಗ್ಗೆ ತನೀಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕಿದೆ.
Published by:Divya D
First published: