Bengaluru: ಮಕ್ಕಳು ಅಸ್ವಸ್ಥರಾಗಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ಹಿಂಗಾ ಹೇಳೋದು! ಪೋಷಕರ ಆಕ್ರೋಶ

ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಕಳೆದ ವಾರ ತರಗತಿಯ ಸಮಯದಲ್ಲಿ ಅಸ್ವಸ್ಥಗೊಂಡಿದ್ದರು ಎಂಬ ಸುದ್ದಿ ಎಲ್ಲಾ ಪೋಷಕರನ್ನು ಆತಂಕಕ್ಕೆ ಗುರಿ ಮಾಡಿದ್ದಂತೂ ನಿಜ. ಈ ಘಟನೆಯು ಪೋಷಕರಷ್ಟೆ ಅಲ್ಲದೆ ಮಕ್ಕಳಲ್ಲಿಯೂ ತುಂಬಾನೇ ಆತಂಕವನ್ನು ಉಂಟು ಮಾಡಿದೆ, ಆದರೆ ಶಾಲೆ ಮಾತ್ರ ಈ ಘಟನೆಯ ಬಗ್ಗೆ "ಚಿಂತಿಸಲು ಏನೂ ಇಲ್ಲ" ಅಂತ ಹೇಳಿ ಕೈ ತೊಳೆದುಕೊಂಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರಿನ ವೈಟ್‌ಫೀಲ್ಡ್ (Whitefield, Bangalore) ಮತ್ತು ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಯಲ್ಲಿ (International School) ಕಲಿಯುತ್ತಿರುವ ಮಕ್ಕಳು ಕಳೆದ ವಾರ ತರಗತಿಯ ಸಮಯದಲ್ಲಿ ಅಸ್ವಸ್ಥಗೊಂಡಿದ್ದರು ಎಂಬ ಸುದ್ದಿ ಎಲ್ಲಾ ಪೋಷಕರನ್ನು (Parents) ಆತಂಕಕ್ಕೆ ಗುರಿ ಮಾಡಿದ್ದಂತೂ ನಿಜ. ಈ ಘಟನೆಯು ಪೋಷಕರಷ್ಟೆ ಅಲ್ಲದೆ ಮಕ್ಕಳಲ್ಲಿಯೂ ತುಂಬಾನೇ ಆತಂಕವನ್ನು ಉಂಟು ಮಾಡಿದೆ, ಆದರೆ ಶಾಲೆ (School) ಮಾತ್ರ ಈ ಘಟನೆಯ ಬಗ್ಗೆ "ಚಿಂತಿಸಲು ಏನೂ ಇಲ್ಲ" ಅಂತ ಹೇಳಿ ಕೈ ತೊಳೆದುಕೊಂಡಿದೆ. ಕೆಲವು ವಿದ್ಯಾರ್ಥಿಗಳು (Students) ತೀವ್ರ ವಾಂತಿ ಮತ್ತು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಪೋಷಕರು ಹೇಳಿದ ಹೊರತಾಗಿಯೂ ದಿ ಇಂಟರ್ನ್ಯಾಷನಲ್ ಸ್ಕೂಲ್ ಬೆಂಗಳೂರು (ಟಿಐಎಸ್‌ಬಿ) ಆಹಾರದಲ್ಲಿ ವಿಷಕಾರಿ ಅಂಶ ಇತ್ತೆಂಬುದನ್ನು ತಳ್ಳಿ ಹಾಕಿದೆ.

ಶಾಲೆಯ ಕೆಫೆಟೇರಿಯಾದಲ್ಲಿ ಆಹಾರ ಸೇವನೆ ಬಳಿಕ ಅಸ್ವಸ್ಥರಾದ ಮಕ್ಕಳು
ಪೋಷಕರ ಪ್ರಕಾರ, ಕೆಲವು ಮಕ್ಕಳು ಆಗಸ್ಟ್ 3 ರಂದು ಶಾಲೆಯ ಕೆಫೆಟೇರಿಯಾದಲ್ಲಿ ಆಹಾರವನ್ನು ಸೇವಿಸಿದ ಕೆಲವು ಗಂಟೆಗಳ ನಂತರ ಹೀಗಾಗಿದೆ ಎಂದು ಹೇಳಿದ್ದಾರೆ. "ಮೊದಲಿಗೆ, ಶಾಲೆಯ ಬೋರ್ಡಿಂಗ್ ನಲ್ಲಿರುವ ಮಕ್ಕಳಿಗೆ ಈ ಸಮಸ್ಯೆ ಇದೆ ಎಂದು ನಮಗೆ ತಿಳಿಸಲಾಯಿತು. ನಂತರ, ಪ್ರತಿದಿನ ಮನೆಯಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳಲ್ಲಿಯೂ ಈ ತೊಂದರೆ ಕಾಣಿಸಿಕೊಂಡಿತು ಮತ್ತು ಭಾರಿ ಮಳೆಯನ್ನು ಉಲ್ಲೇಖಿಸಿ ಶಾಲೆ ಈಗ ಆನ್‌ಲೈನ್ ತರಗತಿಗಳನ್ನು ನಡೆಸಲು ಮುಂದಾಗಿದೆ" ಎಂದು ಪೋಷಕರೊಬ್ಬರು ಹೇಳಿದರು.

ಇದಕ್ಕೆ ಶಾಲೆಯ ಆಡಳಿತ ಮಂಡಳಿ ಏನು ಹೇಳಿದೆ ನೋಡಿ
ಹೆಚ್ಚಿನ ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ಪೋಷಕರು ಶಾಲೆಯ ಆಡಳಿತ ಮಂಡಳಿಯವರಿಗೆ ಘಟನೆಗೆ ಕಾರಣ ಕೊಡಿ ಅಂತ ಕೇಳಿದಾಗ ಟಿಐಎಸ್‌ಬಿ ಕಳೆದ ಶುಕ್ರವಾರ ಇ-ಮೇಲ್ ವೊಂದನ್ನು ಕಳುಹಿಸಿತು, ಅದರಲ್ಲಿ ಈ ಮಕ್ಕಳ ಅನಾರೋಗ್ಯದ ಮೂಲವು "ಅಸಮರ್ಪಕವಾಗಿ ಕೈ ಗಳನ್ನು ತೊಳೆದಿರುವುದು” ಎಂದು ಹೇಳಿದೆ.

ಇದನ್ನೂ ಓದಿ: Viral Video: ಊಟ ಚೆನ್ನಾಗಿಲ್ಲ ಅಂತ ರಸ್ತೆ ಮೇಲೆ ನಿಂತು ಕಣ್ಣೀರಿಟ್ಟ ಕಾನ್ಸ್‌ಟೇಬಲ್‌! ಪಾಪ ಇವ್ರ ಕಷ್ಟ ಯಾರಿಗೂ ಬೇಡ

ಸುದ್ದಿ ಮಾಧ್ಯಮಕ್ಕೆ ಬಂದ ಇ-ಮೇಲ್ ನಲ್ಲಿ "ಶಾಲೆಯಲ್ಲಿರುವ ವೈದ್ಯರು ಈ ಮಕ್ಕಳ ಅನಾರೋಗ್ಯವು ಆಹಾರ, ಪ್ಲಾಸ್ಟಿಕ್ ಟ್ರೇಗಳು ಅಥವಾ ಕಳಪೆ ಅಡುಗೆಮನೆಯ ನೈರ್ಮಲ್ಯದಿಂದ ಉಂಟಾಗಿಲ್ಲ, ಇದು ವಿದ್ಯಾರ್ಥಿಗಳ ಅಸಮರ್ಪಕ ಕೈ ನೈರ್ಮಲ್ಯದಿಂದ ಹರಡಿದೆ ಎಂದು ತೀರ್ಮಾನಿಸಿದರು. ಅನಾರೋಗ್ಯದ ಆರಂಭಿಕ ಮೂಲವನ್ನು ಕಂಡು ಹಿಡಿಯುವುದು ಸಂಭಾವ್ಯವಾಗಿ ಕಷ್ಟ, ಆದರೆ ನಾವು ಪ್ರಸರಣದ ಪ್ರಮುಖ ಅಂಶಗಳನ್ನು ಗುರುತಿಸಿದ್ದೇವೆ, ಅವುಗಳೆಂದರೆ ಕೆಫೆಟೇರಿಯಾ, ತರಗತಿಯಲ್ಲಿರುವ ಟೇಬಲ್ ಗಳು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ದೈಹಿಕ ಸಂಪರ್ಕ" ಎಂದು ಹೇಳಲಾಗಿತ್ತು.

ಆಶ್ಚರ್ಯದಿಂದ, ಎಷ್ಟು ಮಕ್ಕಳು ಅಸ್ವಸ್ಥರಾಗಿದ್ದಾರೆಂದು ತಿಳಿಯಲು ಪೋಷಕರು ಆಂತರಿಕ ಸಮೀಕ್ಷೆಯನ್ನು ಮಾಡಿದರು. ಅಸ್ವಸ್ಥರಾದ ಮಕ್ಕಳ ಸಂಖ್ಯೆಯು 100 ರ ಗಡಿ ದಾಟಿತು. "ನನ್ನ ಮಗ ಶಾಲೆಯಿಂದ ಬಂದ ತಕ್ಷಣವೇ ಸಹಿಸಲು ಅಸಾಧ್ಯವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ" ಎಂದು ಪೋಷಕರೊಬ್ಬರು ಹೇಳಿದರು. "ಅವನು ಮನೆಯಲ್ಲಿ ಸೇವಿಸಿದ ಆಹಾರದಿಂದ ಚೆನ್ನಾಗಿಯೇ ಇದ್ದನು. ಕೈ ಗಳ ನೈರ್ಮಲ್ಯದ ಕೊರತೆಯು ಏಕಕಾಲದಲ್ಲಿ ಇಷ್ಟೊಂದು ಮಕ್ಕಳಿಗೆ ಇಂತಹ ಕಾಯಿಲೆಯನ್ನು ಹೇಗೆ ಉಂಟು ಮಾಡುತ್ತದೆ" ಪೋಷಕರು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆಯೂ ಇಂತದ್ದೇ ಘಟನೆ ನಡೆದಿತ್ತಂತೆ
ಮೇ 2022 ರಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ಆ ಸಮಯದಲ್ಲಿ, ಬಾಧಿತ ಮಕ್ಕಳ ಸಂಖ್ಯೆ ಇಷ್ಟು ಹೆಚ್ಚಾಗಿರಲಿಲ್ಲ. ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಅಸ್ವಸ್ಥರಾಗಿದ್ದರು ಮತ್ತು ಇದು ವೈರಲ್ ಸೋಂಕಿನಿಂದಾಗಿದೆ ಎಂದು ಟಿಐಎಸ್‌ಬಿ ಅಧ್ಯಕ್ಷ-ಸಂಸ್ಥಾಪಕ ಕೆ.ಪಿ.ಗೋಪಾಲಕೃಷ್ಣ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದರು.

ಈ ಮಧ್ಯೆ, ಶಾಲಾ ಆಡಳಿತವು, "ನಾರಾಯಣ ಹೆಲ್ತ್ ಸಿಟಿಯ ವೈದ್ಯರ ತಂಡವು ಕ್ಯಾಂಪಸ್ ಗೆ ಭೇಟಿ ನೀಡಿತು. ನಾವು ಆಹಾರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಬಂದ ವರದಿಗಳೆಲ್ಲವೂ ನಕಾರಾತ್ಮಕವಾಗಿದೆ ಮತ್ತು ಯಾವುದೇ ಬ್ಯಾಕ್ಟೀರಿಯಾ ಸೋಂಕು ಇರಲಿಲ್ಲ. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆಯಿತು ಮತ್ತು ಚಿಂತಿಸಲು ಏನೂ ಇಲ್ಲ. ನಾವು ಅತ್ಯುನ್ನತ ನೈರ್ಮಲ್ಯ ಮತ್ತು ಸುರಕ್ಷತಾ ಕ್ರಮಗಳನ್ನು ನಿರ್ವಹಿಸಿದ್ದೇವೆ" ಎಂದು ಹೇಳಿದೆ ಎನ್ನಲಾಗಿದೆ.

ಇದನ್ನೂ ಓದಿ:  Viral Protest: ರಸ್ತೆಗುಂಡಿಯಲ್ಲೇ ಯೋಗ, ಸ್ನಾನ! ವೈರಲ್ ಆಯ್ತು ಪ್ರತಿಭಟನೆ

ಆದಾಗ್ಯೂ, ಅನುಮಾನಾಸ್ಪದ ಪೋಷಕರು ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. "ಕೆಫೆಟೇರಿಯಾ ಆಹಾರವನ್ನು ಸ್ವತಂತ್ರ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಪೋಷಕರಿಗೆ ಅವಕಾಶ ನೀಡಲಿ" ಎಂದು ಪೋಷಕರೊಬ್ಬರು ಒತ್ತಾಯಿಸಿದರು.
Published by:Ashwini Prabhu
First published: