School Fees: ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಸ್ಕೂಲ್ ಫೀಸ್‌ ಫೈಟ್? ಲಕ್ಷಾಂತರ ಪೋಷಕರ ಜೇಬಿಗೆ ಬೀಳುತ್ತಾ ಕತ್ತರಿ?

ಕೊರೋನಾ ಬಳಿಕ ಲಕ್ಷಾಂತರ ಪೋಷಕರಿಗೆ ಖಾಸಗಿ ಶಾಲೆಗಳು ಶಾಕ್ ಕೊಟ್ಟಿವೆ. ದಿಢೀರನೇ ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲೆಗಳ ನಿರ್ಧಾರ ಮಾಡಿವೆ. ಇದೀಗ ಕೋವಿಡ್ ಕಡಿಮೆಯಾದ ಹಿನ್ನೆಲೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ (Diesel), ಅಡುಗೆ ಎಣ್ಣೆ (Cooking oil), ಗ್ಯಾಸ್ ದರ ಏರಿಕೆ (Gas Price Hike) ಇವೆಲ್ಲವೂ ಆಯ್ತು. ಮೊನ್ನೆ ಮೊನ್ನೆ ಅಂದರೆ ಯುಗಾದಿ ಹಬ್ಬದಂದೇ (Ugadi Festival) ಬೆಸ್ಕಾಂ (BESCOM) ಸೇರಿದಂತೆ ಇನ್ನಿತರ ವಿದ್ಯುತ್‌ಚ್ಛಕ್ತಿ ಕಂಪನಿಗಳು ವಿದ್ಯುತ್ ದರ ಏರಿಸಿದ್ದೂ ಆಯ್ತು. ಇನ್ನು ನಂದಿನಿ ಹಾಲಿನ (Nandini Milk) ದರ ಏರಿಸಬೇಕು ಎಂಬ ಪ್ರಸ್ತಾವನೆಯೂ ಇದ್ದು, ಶೀಘ್ರವೇ ಹಾಲಿನ ದರವೂ ಏರಿಕೆ ಆಗುವುದು ಪಕ್ಕಾ ಆಗಿದೆ. ಇದರೊಂದಿಗೆ ಇದೀಗ ಶಾಲಾ ಮಕ್ಕಳ ಫೀಸ್ (School Students Fees) ಸರದಿ. ಹೌದು, ಸದ್ಯದಲ್ಲೇ ಶಾಲಾ ಮಕ್ಕಳ ಶುಲ್ಕ ಹೆಚ್ಚಳವಾಗಲಿದ್ದು, ಪೋಷಕರಿಗೆ (Parents) ಖಾಸಗಿ ಶಾಲೆಗಳು (Privet Schools) ಶಾಕ್ ಕೊಡಲು ರೆಡಿಯಾಗಿವೆ.

ಶಾಲಾ ಫೀಸ್ ಹೆಚ್ಚಳಕ್ಕೆ ಮುಂದಾದ ಖಾಸಗಿ ಶಾಲೆಗಳು

ಎಲ್ಲದರ ದರ ಏರಿಕೆಯಾಗ್ತಿದೆ, ನಾವೇನ್ ಕಡಿಮೆ ಅನ್ನೋ ರೇಂಜಿನಲ್ಲಿ ಖಾಸಗಿ ಶಾಲೆಗಳು ಇದೀಗ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಕಳೆದ ಎರಡು ವರ್ಷದಿಂದ ಶುಲ್ಕದ ಸಮರ ತಾರಕ್ಕೇರುತ್ತಿದೆ. ಆದ್ರೀಗ ಮತ್ತೆ ಹೊಸ ತಿರುವನ್ನ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೌದು.. ಮುಂದಿನ‌ ಶೈಕ್ಷಣಿಕ ವರ್ಷದಿಂದಲೇ ಖಾಸಗಿ ಶಾಲೆಗಳಿಂದ ಫೀಸ್ ಹೈಕ್ ಬಹುತೇಕ ಫಿಕ್ಸ್ ಅಂತ ಹೇಳಲಾಗ್ತಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲಾ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿವೆ.

ಲಕ್ಷಾಂತರ ಪೋಷಕರಿಗೆ ಫೀಸ್ ಶಾಕ್

ಕೊರೊನಾ ಬಳಿಕ ಲಕ್ಷಾಂತರ ಪೋಷಕರಿಗೆ ಖಾಸಗಿ ಶಾಲೆಗಳು ಶಾಕ್ ಕೊಟ್ಟಿವೆ. ದಿಢೀರನೇ ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲೆಗಳ ನಿರ್ಧಾರ ಮಾಡಿವೆ. ಕಳೆದ 2 ವರ್ಷದಿಂದ ಕೋವಿಡ್ ಮಹಾಮಾರಿ ಹಿನ್ನೆಲೆ, ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾದ ಹಿನ್ನೆಲೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಮಕ್ಕಳ ಶುಲ್ಕದ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡಲು ತೀರ್ಮಾನಿಸಿವೆ.

ಇದನ್ನೂ ಓದಿ: Transfer: ಈ ತಿಂಗಳಾಂತ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗಳ ವರ್ಗಾವಣೆ

ಶುಲ್ಕ ಹೆಚ್ಚಿಸುವುದು ಅನಿವಾರ್ಯ

ಬಜೆಟ್ ಶಾಲೆಗಳು & ಕಾರ್ಪೊರೇಟ್ ಶಾಲೆಗಳು ಶುಲ್ಕ ಹೆಚ್ಚಳದ ನಿರ್ಧಾರ ಮಾಡಿವೆ. ಖಾಸಗಿ ಶಾಲೆಗಳು ಈಗಾಗ್ಲೇ ದಾಖಲಾತಿ ಪ್ರಕ್ರಿಯೆ ಶುರು ಮಾಡಿಕೊಂಡು, ಈ ವರ್ಷ ಶುಲ್ಕ ಹೆಚ್ಚಳದಿಂದ ರಿಯಾಯಿತಿ ಇಲ್ಲ. ಕೋರ್ಟ್ ಆದೇಶದಂತೆ ಪ್ರತಿ ವರ್ಷ ಶೇ.15 ರಷ್ಟು ಶುಲ್ಕ ಹೆಚ್ಚಿಸಬಹುದು. ಪೆಂಡಾಮಿಕ್ ನಿಂದ 2 ವರ್ಷದಿಂದ ಯಾವುದೇ ಶುಲ್ಕ ಏರಿಕೆ ಮಾಡಿರಲಿಲ್ಲ‌. ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ.

ಶುಲ್ಕ ಏರಿಕೆ ಪ್ರಸ್ತಾಪಕ್ಕೆ ಪೋಷಕರ ವಿರೋಧ

ಇನ್ನು ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ವಿಚಾರಕ್ಕೆ ಪೋಷಕರು ತಗಾದೆ ತೆಗೆಯುತ್ತಿದ್ದಾರೆ. ಕೋವಿಡ್ ವೇಳೆ ಎಷ್ಟೋ ಶಾಲೆಗಳು ಸರ್ಕಾರದ ಆದೇಶವಿದ್ದರೂ ಕಡಿಮೆ ಮಾಡಿಲ್ಲ. ಈಗ್ಲೇ ಕೆಲಸ ಕಳೆದುಕೊಂಡು ಸಾಕಷ್ಟು ಪೋಷಕರು ಸಂಕಷ್ಟದಲ್ಲಿದ್ದಾರೆ. ಸದ್ಯ ಅಗತ್ಯ ಸಾಮಾಗ್ರಿಗಳ ದರ ದುಬಾರಿಯಾಗಿದ್ದು, ಮಕ್ಕಳ ಶುಲ್ಕವೂ ಹೆಚ್ಚಾದ್ರೆ, ಜೀವನ ಮಾಡೋದು ಹೇಗೆ..? ಸರ್ಕಾರ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಬೇಕು ಅಂತ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: Viral News: ಕಣ್ಣಿಲ್ಲದವರಿಗೆ ದಾರಿದೀಪವಾಗುತ್ತೆ ಈ Special Shoe! ಬಾಲಕನ ಕಾರ್ಯಕ್ಕೆ ಸಾರ್ವಜನಿಕರ ಶಹಬ್ಬಾಸ್

ಒಟ್ನಲ್ಲಿ ಪೆಟ್ರೊಲ್, ಡೀಸೆಲ್, ಗ್ಯಾಸ್,ಹೋಟೆಲ್ ತಿಂಡಿ ದರ ಹೆಚ್ಚಾಯ್ತು. ಒಂದೊಂದಾಗೇ ಏರಿಕೆಯಾಗ್ತಿರೊ ದರ ಏರಿಕೆ ಮಧ್ಯೆ, ಇದೀಗ ಮಕ್ಕಳ‌ ಶಾಲಾ ಶುಲ್ಕ ಹೆಚ್ಚಳ ಪೋಷಕರಿಗೆ ಬರಸಿಡಿಲೊಡೆದಂತಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಶುಲ್ಕ ಸಮರ ನಡೆಯುತ್ತಾ..? ರಸ್ತೆಗಿಳಿದು ಪೋಷಕರು ಪ್ರತಿಭಟನೆ ಮುಂದಾಗ್ತಾರಾ ಅನ್ನೋದು ಕಾದು ನೋಡ್ಬೇಕಿದೆ.
Published by:Annappa Achari
First published: