• Home
  • »
  • News
  • »
  • state
  • »
  • Student Protest: HDK ಕಾರು ತಡೆದು ಶಾಲಾ ಮಕ್ಕಳ ಪ್ರೊಟೆಸ್ಟ್! ವಿದ್ಯಾರ್ಥಿಗಳ ಕಣ್ಣೀರು ಒರೆಸಿದ ಕುಮಾರಸ್ವಾಮಿ

Student Protest: HDK ಕಾರು ತಡೆದು ಶಾಲಾ ಮಕ್ಕಳ ಪ್ರೊಟೆಸ್ಟ್! ವಿದ್ಯಾರ್ಥಿಗಳ ಕಣ್ಣೀರು ಒರೆಸಿದ ಕುಮಾರಸ್ವಾಮಿ

ಮಕ್ಕಳ ಸಮಸ್ಯೆ ಕೇಳಿದ ಕುಮಾರಸ್ವಾಮಿ

ಮಕ್ಕಳ ಸಮಸ್ಯೆ ಕೇಳಿದ ಕುಮಾರಸ್ವಾಮಿ

ಪ್ರತಿಭಟನಾ ಸ್ಥಳದಿಂದಲೇ ಶಿಕ್ಷಣ ಸಚಿವ ನಾಗೇಶ್ ಅವರಿಗೆ H D ಕುಮಾರಸ್ವಾಮಿ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ನಾಗೇಶ್ ಭರವಸೆ ನೀಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕೋಲಾರ (ನ.22): ಮಾಜಿ ಸಿಎಂ ಕುಮಾರಸ್ವಾಮಿ (Former CM H. D Kumaraswamy) ತೆರಳುವ ಮಾರ್ಗ ತಡೆದು ಶಾಲಾ ಮಕ್ಕಳ (School Teacher) ಪ್ರತಿಭಟನೆ ಮಾಡಿರುವ ಘಟನೆ ಕೋಲಾರದಲ್ಲಿ (Kolara) ನಡೆದಿದೆ. ಶಾಲೆ ಕಟ್ಟಡ ಅವ್ಯವಸ್ಥೆಗೆ ಸಂಬಂಧಿಸಿದಂತೆ ಬಂಗವಾದಿ ಶಾಲಾ ಮಕ್ಕಳು ಪ್ರತಿಭಟನೆ (Protest) ನಡೆಸಿ ಎಚ್​ಡಿಕೆ ಕಾರಿಗೆ ಅಡ್ಡಲಾಗಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನವಿ ಪತ್ರ (Letter) ಸ್ವೀಕರಿಸಿ ಸಮಸ್ಯೆ ಬಗೆಹರಿಸೋದಾಗಿ ಕುಮಾರಸ್ವಾಮಿ ಭರವಸೆ  ನೀಡಿದ್ದಾರೆ. 


ಮಕ್ಕಳ ಸಮಸ್ಯೆ ಕೇಳಿದ ಮಾಜಿ ಸಿಎಂ ಎಚ್​ಡಿಕೆ


ಕಾರಿಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದ ಮಕ್ಕಳ ಸಮಸ್ಯೆ ಕೇಳಿದ ಮಾಜಿ ಸಿಎಂ ಕುಮಾರಸ್ವಾಮಿ ಮಕ್ಕಳ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದ್ರು. ಮಕ್ಕಳ ಪ್ರತಿಭಟನೆ ಕಂಡು ಶಾಲಾ ಕಟ್ಟಡ ವೀಕ್ಷಿಸಿದ ಕುಮಾರಸ್ವಾಮಿ, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದ್ರು.


ಶಿಕ್ಷಣ ಸಚಿವರಿಗೆ ಕರೆ ಮಾಡಿದ ಕುಮಾರಸ್ವಾಮಿ


ಪ್ರತಿಭಟನಾ ಸ್ಥಳದಿಂದಲೇ ಶಿಕ್ಷಣ ಸಚಿವ ನಾಗೇಶ್ ಅವರಿಗೆ H D ಕುಮಾರಸ್ವಾಮಿ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ನಾಗೇಶ್ ಭರವಸೆ ನೀಡಿದ್ದಾರೆ. ಇದೇ ವೇಳೆ ಹೆಚ್ ಡಿ ಕುಮಾರಸ್ವಾಮಿ ಕೋಲಾರದ ಡಿಡಿಪಿಐ ಕರೆ ಮಾಡಿದ್ರು. ಶ್ರೀಘದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡುವುದಾಗಿ  ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಹೇಳಿದ್ದಾರೆ.


ಅಶ್ವತ್ಥ ಕಟ್ಟೆ ಮೇಲೆ ಕಳೆದ 3 ವರ್ಷದಿಂದ ಪಾಠ ನಡೆಯುತ್ತಿದೆ  ಎಂದು ಮಕ್ಕಳ ಕಣ್ಣೀರು ಹಾಕಿದ್ರು. ಈ ವೇಳೆ ಗದ್ಗದಿತರಾದ ಕುಮಾರಸ್ವಾಮಿ, ಮಕ್ಕಳ ಕಣ್ಣೀರು ಒರೆಸುತ್ತಿದ್ದಾರೆ.



ಯುವಕರಿಗೆ ಮದುವೆಗೆ ವಧುಗಳ ಕೊರತೆ


ಕುಮಾರಸ್ವಾಮಿ ಅವರ ಬಳಿ ಜನರು ಕೆಲಸ ಕೊಡಿಸಿ, ಚಿಕಿತ್ಸೆ ಕೊಡಿಸಿ ಇಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಕೇಳಿಕೊಂಡು ಅವರ ಮನೆ ಬಾಗಿಲಿಗೆ ಹೋಗ್ತಾರೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಕೊರತೆ ಬಗ್ಗೆ ಮಾತಾಡಿದ್ದಾನೆ.


ರೈತ ಯುವಕರಿಗೆ ಸಿಗ್ತಿಲ್ಲ ಹುಡುಗಿ


ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕುಮಾರಸ್ವಾಮಿಗೆ ಮನವಿ ಮಾಡಿದ್ದಾನೆ.


ವಧುಗಳು ಬೇರೆ ಜಿಲ್ಲೆ ವರನನ್ನು ಮದುವೆಯಾಗುವುದನ್ನು ನಿಷೇಧಿಸಿ


ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕುಮಾರಸ್ವಾಮಿಗೆ ಧನಂಜಯ ಅವಲತ್ತುಕೊಂಡಿದ್ದಾನೆ.


ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ


ಕೋಲಾರ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೆರೆ ಎಳೆದ್ದಿದ್ದು, ಕ್ಷೇತ್ರದಲ್ಲಿ ಸೋಮವಾರ ನಡೆದ ಪಂಚರತ್ನ ಯೋಜನೆಯ ರಥಯಾತ್ರೆಯಲ್ಲಿ, ಸಿಎಂಆರ್‌ ಶ್ರೀನಾಥ್‌ ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದರು.


ಇದನ್ನೂ ಓದಿ: Assembly Election: ಕಾಂಗ್ರೆಸ್​ ಟಿಕೆಟ್​ಗಾಗಿ ಸಿದ್ದರಾಮಯ್ಯ ಅರ್ಜಿ; ಕ್ಷೇತ್ರದ ಹೆಸರು ಖಾಲಿ ಖಾಲಿ!


ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಬಹುಮತ ಬಂದರೆ ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ ನೀಡಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.




Published by:ಪಾವನ ಎಚ್ ಎಸ್
First published: