School: ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು; ಗ್ರಾಮಸ್ಥರಿಂದ ಛೀಮಾರಿ

ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋವನ್ನು ಮಾಡಿದ್ದೆ. ಆದ್ರೆ ಇದಕ್ಕೆ ಶಿಕ್ಷಣ ಅಧಿಕಾರಿಗಳು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆ. ಕೆಲಸದಿಂದ ನನ್ನನ್ನು ಅಮಾನತುಗೊಳಿಸಿದರೆ ಕಾನೂನು ಹೋರಾಟ ನಡೆಸಲು ಸಿದ್ಧ ಎಂದು  ವಿಜಯಲಕ್ಷ್ಮಿ ಚಲವಾದಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗದಗ ಜಿಲ್ಲೆಯ ನಾಗಾವಿ (Nagavi Village,Gadag) ಗ್ರಾಮದ ಸರ್ಕಾರಿ ಶಾಲೆಯಲ್ಲಿ (Government School) ವಿದ್ಯಾರ್ಥಿಗಳ ಶೌಚಾಲಯ (Toilet) ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.  ಈ ವಿಡಿಯೋವನ್ನು (Video) ಶಾಲೆಯಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಚಲವಾದಿ ಎಂಬವರು ಚಿತ್ರೀಕರಿಸಿ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ವೈರಲ್ ಆಗಿದೆ. ಇದೀಗ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಅವರು ಶಾಲೆಯ (Teachers) ಶಿಕ್ಷಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಜುಲೈ 21ರಂದು ಈ ಘಟನೆ ನಡೆದಿದ್ದು, ಮಕ್ಕಳನ್ನ ಈ ಕೆಲಸಕ್ಕೆ ಕಳುಹಿಸಿದ ಶಿಕ್ಷಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದೆ.

ಈ ಘಟನೆ ಕುರಿತು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ವಿಜಯಲಕ್ಷ್ಮಿ ಚಲವಾದಿ, ಅಂದು ಮಕ್ಕಳು ನನ್ನ ಬಳಿಗೆ ಬಂದು ಬಕೆಟ್ ಮತ್ತು ಪೊರಕೆಯನ್ನು ಕೇಳಿದರು ನಾನು ಯಾಕೆ ಅಂತ ಕೇಳಿದಾಗ, ಶೌಚಾಲಯ ತೊಳೆಯಲು ಅಂತ ಹೇಳಿದರು.

ಈ ಕೆಲಸ ಮಾಡೋದು ಸರಿಯಲ್ಲ

ಮಕ್ಕಳ ಕಡೆಯಿಂದ ಈ ರೀತಿ ಕೆಲಸ ಮಾಡೋದು ಸರಿಯಲ್ಲ ಎಂದು ನನಗೆ ಅನ್ನಿಸಿತು. ಹಾಗಾಗಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್  ಮಾಡಿ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿಕೊಂಡೆ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

ಇದನ್ನೂ ಓದಿ:  BJP ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ, ಇಬ್ಬರ ಭೇಟಿ ಒಳ್ಳೆಯದು ಅಲ್ಲವೇ? HD Kumaraswamy

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಡುಗೆ ಸಹಾಯಕಿಯರು ಶಾಲೆಯ ಶಿಕ್ಷಕರು ಮತ್ತು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ರೆ ಗ್ರಾಮಸ್ಥರು ಅಡುಗೆ ಸಹಾಯಕಿಯರಿಗೆ ಬೆಂಬಲ ಸೂಚಿಸಿದ್ದಾರೆ.

ಶಿಕ್ಷಕರ  ವಿರುದ್ಧ ಕ್ರಮಕ್ಕೆ ಆಗ್ರಹ

ಮಕ್ಕಳಿಗೆ ಶೌಚಾಲಯ ಸ್ವಚ್ಛಗೊಳಿಸಲು ಹೇಳೋದು ತಪ್ಪು. ಅಡುಗೆ ಸಹಾಯಕಿಯರು ವಿಡಿಯೋ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಘಟನೆ ಸಂಬಂಧ ಅಧಿಕಾರಿಗಳು ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಕಿಡಿಗೇಡಿಗಳು ಆವರಣಕ್ಕೆ ನುಗ್ಗುತ್ತಾರೆ. ಇದರಿಂದಾಗಿ ಶಾಲೆ ಕಟ್ಟಡದಲ್ಲಿ ಸಿಗರೇಟ್ ತುಂಡುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಮದ್ಯದ ಬಾಟಲಿಗಳು ಕಾಣಿಸುತ್ತವೆ. ಕೆಲವು ಬಾರಿ ಶೌಚಾಲಯವನ್ನು  ಬಳಸುತ್ತಾರೆ. ಇದನ್ನೇಕೆ ವಿದ್ಯಾರ್ಥಿಗಳು ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಅಮಾನತುಗೊಳಿಸಿದ್ರೆ ಹೋರಾಟಕ್ಕೆ ಸಿದ್ಧ

ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋವನ್ನು ಮಾಡಿದ್ದೆ. ಆದ್ರೆ ಇದಕ್ಕೆ ಶಿಕ್ಷಣ ಅಧಿಕಾರಿಗಳು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆ. ಕೆಲಸದಿಂದ ನನ್ನನ್ನು ಅಮಾನತುಗೊಳಿಸಿದರೆ ಕಾನೂನು ಹೋರಾಟ ನಡೆಸಲು ಸಿದ್ಧ ಎಂದು  ವಿಜಯಲಕ್ಷ್ಮಿ ಚಲವಾದಿ ಹೇಳಿದ್ದಾರೆ.

ಶಿಕ್ಷಕರು ಮತ್ತು ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಲು ಅಮಾಯಕ ಅಡುಗೆಯವರ ಮೇಲೆ ಆರೋಪ ಮಾಡಲಾಗ್ತಿದೆ. ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಬೇಕಿದೆ ಎಂದು ನಾಗಾವಿಯ ಸಮಾಜ ಸೇವಕ ಶರಣಪ್ಪ ಚಿಂಚಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:  Kantheshwara Temple: ದಿನಕ್ಕೆ 3 ಬಾರಿ ಶಿವಲಿಂಗದ ಬಣ್ಣ ಬದಲಾಗುತ್ತೆ! ದರ್ಶನ ಪಡೆಯಿರಿ

ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್

ಇನ್ನೂ ಈ ಕುರಿತು ಶಾಲೆಯ ಮುಖ್ಯಶಿಕ್ಷಕ ಕೆ.ಸಿ.ನಭಾಪುರ, ಜುಲೈ 21ರಂದು ನಾನು ಶಾಲೆಯಲ್ಲಿ  ಇರಲಿಲ್ಲ. ನಂತರ ಈ ವಿಷಯ ತಿಳಿದಿದೆ. ಅಡುಗೆ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ.

ಜುಲೈ 22ರಂದು ಜಿಪಂ ಸಿಇಒ ಭೇಟಿ ನೀಡಿ, ವೀಡಿಯೋದಲ್ಲಿ ಕಂಡುಬರುವ ವಿದ್ಯಾರ್ಥಿಗಳು ಹಾಗೂ ಶೌಚಾಲಯ ಸ್ವಚ್ಛಗೊಳಿಸಲು ಸೂಚನೆ ನೀಡಿದ ಶಿಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ, ಸಿಇಒ ಅವರ ಸೂಚನೆ ಮೇರೆಗೆ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.
Published by:Mahmadrafik K
First published: