ಕುಡಿದ ಮತ್ತಿನಲ್ಲಿ ಶಾಲಾ ಬಸ್​ ಚಾಲನೆ; ಡಿಕ್ಕಿಯಾಗಿ 13 ವಿದ್ಯಾರ್ಥಿಗಳಿಗೆ ಗಾಯ

ಡೆಲ್ಲಿ ಪಬ್ಲಿಕ್ ಸ್ಕೂಲ್​​ ಬಸ್​ನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18
Updated:February 11, 2019, 12:42 PM IST
ಕುಡಿದ ಮತ್ತಿನಲ್ಲಿ ಶಾಲಾ ಬಸ್​ ಚಾಲನೆ; ಡಿಕ್ಕಿಯಾಗಿ 13 ವಿದ್ಯಾರ್ಥಿಗಳಿಗೆ ಗಾಯ
ನಜ್ಜುಗುಜ್ಜಾಗಿರುವ ಶಾಲಾ ಬಸ್​
Latha CG | news18
Updated: February 11, 2019, 12:42 PM IST
ಬೆಂಗಳೂರು,(ಫೆ.11): ಕುಡಿದ ಮತ್ತಿನಲ್ಲಿ ಶಾಲಾ ಬಸ್​ ಚಾಲನೆ ಮಾಡಿ ಮತ್ತೊಂದು  ಶಾಲಾ ಬಸ್​ಗೆ ಡಿಕ್ಕಿಯಾಗಿ 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ.

ನಾಗಾರ್ಜುನ ಕಾಲೇಜು ಬಸ್​ಗೆ ಡೆಲ್ಲಿ ಪಬ್ಲಿಕ್​​ ಸ್ಕೂಲ್​ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ನಾಗಾರ್ಜುನ ಕಾಲೇಜ್​ನ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಡೆಲ್ಲಿ ಪಬ್ಲಿಕ್ ಸ್ಕೂಲ್​​ ಬಸ್​ನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಶದಲ್ಲಿ ಹಾರಾಡುವಾಗಲೇ ವಿಮಾನದ ಬಾಗಿಲು ತೆರೆದುಕೊಂಡಿತು!

ಮೊದಲಿಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಗಾರ್ಜುನ ಕಾಲೇಜ್​ ಬಸ್​ಗೆ ಡೆಲ್ಲಿ ಪಬ್ಲಿಕ್​ ಸ್ಕೂಲ್​ ಬಸ್​ ಡಿಕ್ಕಿ ಹೊಡೆದಿದೆ. ಬಳಿಕ ಟ್ರಾನ್ಸ್​ಫಾರಂಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಿತೀಶ್​ ಎಂಬ ವಿದ್ಯಾರ್ಥಿಗೆ ಕಾಲು ಮುರಿದಿದೆ. ಪಬ್ಲಿಕ್​ ಸ್ಕೂಲ್​ ಬಸ್​ ಚಾಲಕ ಘಟನೆ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ.  ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...