ಶಿವಮೊಗ್ಗ ನಗರ (Shivamogga City) ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಕಳೆದೆರೆಡು ದಿನಗಳಿಂದ ವಿಧಿಸಲಾಗಿರುವ 144 ಸೆಕ್ಷನ್ (Section 144) ನಿಷೇಧಾಜ್ಞೆ ಮುಂದುವರಿಸಲಾಗಿದೆ. ಇಂದಿನಿಂದ ಶಾಲಾ-ಕಾಲೇಜುಗಳು (School And Colleges) ಆರಂಭಿಸಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ (DC Dr.Selvamani) ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ (Shivamogga And Bhadravati) ಅವಳಿ ನಗರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ (Police) ಬಂದೋಬಸ್ತ್ ಮಾಡಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಶಿವಮೊಗ್ಗದಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ಇರಿಸಿದ್ದಾರೆ. ಇಂದು ಸಹ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಆರ್ಎಎಫ್ ತುಕಡಿ ರೂಟ್ ಮಾರ್ಚ್ (RAF Route March) ನಡೆಯಲಿದೆ.
ಭದ್ರಾವತಿಯಲ್ಲಿ ಕಾರಿಗೆ ಬೆಂಕಿ
ವೈಯಕ್ತಿಕ ಹಳೆ ದ್ವೇಷ ಹಿನ್ನೆಲೆ ಮನೆಯ ಮುಂದೆ ನಿಲ್ಲಿಸಿದ್ದ ಕಾರ್ಗೆ ಬೆಂಕಿ ಹಾಕಿರುವ ಘಟನೆ ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ನಲ್ಲಿ ನಡೆದಿದೆ. ಅಬ್ದುಲ್ ಬಷೀರ್ ಎಂಬವರಿಗೆ ಸೇರಿದ ಕಾರ್ ಬೆಂಕಿಗಾಹುತಿಯಾಗಿದೆ. ಅಲಿಂ ಪಾಷಾ ಎಂಬಾತ ಕಾರಿಗೆ ಬೆಂಕಿ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜಬೀವುಲ್ಲಾ ಪತ್ನಿ ಹೇಳಿಕೆ
ನಿನ್ನೆ ಪೊಲೀಸರಿಂದ ಕಾಲಿಗೆ ಗುಂಡೇಟು ತಿಂದಿರುವ ಜಬೀವುಲ್ಲ ಪತ್ನಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅವತ್ತು ರಾತ್ರಿ ಪೊಲೀಸರು ಮನೆಗೆ ಬಂದು 9:45ಕ್ಕೆ ಪತಿಯನ್ನು ಕೆರೆದುಕೊಂಡು ಹೋಗಿದ್ದರು. ಊಟ ಮಾಡಿಕೊಂಡು ಕೈ ತೊಳೆಯಲು ನಿಂತುಕೊಂಡಿದ್ದರು. ಕೈ ತೊಳೆದುಕೊಂಡು ಬರುತ್ತೇನೆ ಎಂದು ಹೇಳಿದರು. ಪೊಲೀಸರಿಗೆ ಕೈ ತೊಳೆದುಕೊಂಡು ಹೋಗಲಿ ಬಿಡಿ ಎಂದು ನಾನೂ ಹೇಳಿದ್ದೆ. ಪೊಲೀಸರೇ ಬಂದು ಕೈ ತೊಳೆಸಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಐವರು ಪೊಲೀಸರು ಬಂದಿದ್ದರು ಎಂದು ಹೇಳಿದರು.
ಅವರ ಜೀವಕ್ಕೆ ಅಪಾಯವಾದ್ರೆ ಯಾರು ಹೊಣೆ?
ನಮ್ಮ ಮನೆಯವರು ಚಾಕು ತೋರಿಸಿ ಓಡಿ ಹೋಗಲು ಮುಂದಾಗಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ರಾತ್ರಿ 9:30 ಕರೆದುಕೊಂಡು ಹೋಗಿ ಬೆಳಗ್ಗೆ 4 ಗಂಟೆಗೆ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರ ಜೀವಕ್ಕೆ ಅಪಾಯ ಆದರೆ ಯಾರು ಹೊಣೆ? ಪೊಲೀಸರು ಈ ರೀತಿ ಮಾಡಿರುವುದು ಸರಿಯಲ್ಲ. ಅವರು ಯಾವುದೇ ಸಂಘಟನೆಯಲ್ಲೂ ಇಲ್ಲ. ಪತಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಫ್ಲೆಕ್ಸ್‌ಗಳ ತೆರವು
ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ನಡೀತಿತ್ತಂತೆ ಪಾಲಿಕೆ ಫುಲ್ ಅಲರ್ಟ್ ಆಗಿದೆ. ಗಲಾಟೆಯಿಂದ ಕೊನೆಗೂ ಎಚ್ಚೆತ್ತ ಶಿವಮೊಗ್ಗ ಮಹಾನಗರ ಪಾಲಿಕೆ, ಹಲವೆಡೆಗಳಲ್ಲಿ ಹಾಕಿದ್ದ ಫ್ಲೆಕ್ಸ್‌ಗಳ ತೆರವುಗೊಳಿಸಿದ್ರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ಮೇರೆಗೆ ಪಾಲಿಕೆಯ ಸುಮಾರು 80 ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೀತು. ಇನ್ನು ಸ್ಥಳದಲ್ಲೇ ನಿಂತು ಪಾಲಿಕೆ ಆಯುಕ್ತ ಮಾಯಣ್ಣಗೌಡ ಫ್ಲೆಕ್ಸ್ ತೆರವುಗೊಳಿಸಿದ್ರು.
ಸಾವರ್ಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ
ಶಿವಮೊಗ್ಗದಲ್ಲಿ ಓರ್ವನಿಗೆ ಚಾಕು ಇರಿತವಾಗಿದೆ. ಪ್ರಕರಣ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆ ಮಾಡಲಾಗ್ತಿದೆ ಅಂತ ಗೃಹ ಸಚಿವ ಆಗರ ಜ್ಞಾನೇಂದ್ರ ಹೇಳಿದ್ರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಸಾರ್ವಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ, ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಅಂತ ಹೇಳಿದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ