News18 India World Cup 2019

ನೀರಿಗಾಗಿ ಬೀದಿಗಿಳಿಯಲು ಸಜ್ಜಾದ ಶಾಲಾ ಆಡಳಿತ ಮಂಡಳಿ

news18
Updated:June 7, 2018, 2:41 PM IST
ನೀರಿಗಾಗಿ ಬೀದಿಗಿಳಿಯಲು ಸಜ್ಜಾದ ಶಾಲಾ ಆಡಳಿತ ಮಂಡಳಿ
news18
Updated: June 7, 2018, 2:41 PM IST
- ಲೋಹಿತ್ ಶಿರೋಳ,  ನ್ಯೂಸ್18 ಕನ್ನಡ

ಚಿಕ್ಕೋಡಿ ( ಜೂನ್ 07)  :  ಚುನಾವಣೆಯಲ್ಲಿ ಕಾಂಗ್ರೆಸ್​​ ಗೆ ಸಪೋರ್ಟ್ ಮಾಡೋದು ಬಿಟ್ಟು ಬಿಜೆಪಿಗೆ ಸಪೋರ್ಟ್ ಮಾಡಿದ್ದಕ್ಕೆ ಇಲ್ಲೋಬ್ಬ ಬಿಜೆಪಿ ಮುಖಂಡ ದಿನ ಸಫರ್ ಆಗ್ತಿದ್ದಾರೆ. ಅವರು ಸಫರ್ ಆಗೋದು ಒಂದು ಕಡೆ ಇರಲಿ ಅವರ ಒಡೆತನದ ಶಾಲೆಯಲ್ಲಿ ಕಲಿಯುತ್ತಿರುವ 2000ಮಕ್ಕಳು ದಿನವೂ ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಕಳೆದ 8 ದಿನಗಳಿಂದ ಈ ಶಾಲೆಯಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಅನಧಿಕೃತವಾಗಿ ಪೈಪ್​ಲೈನ್ ಅಳವಡಿಸಿದ್ದಾರೆ ಎನ್ನುವ ಕಾರಣಕ್ಕೆ ಈ ವಿದ್ಯಾರ್ಥಿಗಳ ಕುಡಿಯುವ ನೀರಿಗೆ ಇಲ್ಲಿನ ಅಧಿಕಾರಿಗಳು ಕತ್ತರಿ ಹಾಕಿದ್ದಾರಂತೆ. ಶಾಲೆಯ ಆಡಳಿತ ಮಂಡಳಿ ಟ್ಯಾಂಕರ್ ಮೂಲಕ ನೀರನ್ನ ತಂದು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಮಾಡಿಕೊಂಡಿದೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡಕ ಪ್ರಭಾಕರ್ ಭಟ್ ಅವರ ಶಾಲೆಯಲ್ಲಿನ ಮಕ್ಕಳ ತುತ್ತು ಅಣ್ಣವನ್ನ ಕಸಿದಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ದರ್ಪದ ರಾಜಕೀಯ ಮತ್ತೆ ಯಮಕನಮರಡಿಯಲ್ಲಿ ಮರಿತಿದ್ಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದೆ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿಗರು ಅಧಿಕಾರಿಗಳ ಮೇಲೆ ಒತ್ತಡ ತಂದು  ಈ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಮಾಡಿಸಿದ್ದಾರೆ ಅಂತ ಶಾಲೆಯ ಮುಖ್ಯಸ್ಥರು ಆರೋಪಿಸಿದ್ರೆ. ಶಾಲೆಯಲ್ಲಿ ಶೌಚಲಯಕ್ಕೂ ಹೋಗದ ರೀತಿಯಲ್ಲಿ ನಮಗೆ ನೀರಿನ ತೊಂದರೆ ಆಗುತ್ತಿದೆ ಅಂತ ಶಾಲೆಯ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಯಮಕನಮರಡಿ ಕ್ಷೇತ್ರದ ಪಕ್ಕದಲ್ ಇರುವ ಹಿಡಕಲ್ ಜಲಾಶಯದಿಂದ ಪ್ರತಿನಿತ್ಯ 5 ಲಕ್ಷ ಲೀಟರ್ ನೀರು ಗ್ರಾಮಕ್ಕೆ ಪ್ರತಿನಿತ್ಯ ಸಪ್ಲೈ ಆಗುತ್ತೆ. ಚುನಾವಣೆಗೂ ಮುನ್ನವಿದ್ದ ಬಟ್ಟ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದೇ ಚುಣಾವಣೆ ಮುಗಿದ ಮೇಲೆ ಯಾಕೆ ಈ ರೀತಿ ಸಮಸ್ಯೆ ಆಗಿದೆ ಅನ್ನೋದು ಶಾಲೆಯ ಆಡಳಿತ ಮಂಡಳಿಯ ಪ್ರಶ್ನೆ.

ಈ ಹಿಂದೆ 2005ರಲ್ಲಿ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಸೇರಿ ಶಾಲೆಗಳಿಗೆ ಉಚಿತ ನೀರು ಪೂರೈಕೆ ಮಾಡಬೇಕು ಅನ್ನೋ ಮಾತು ಮಾಡಿಕೊಂಡು ಅದರಂತೆ ಇಲ್ಲಿಯವರೆಗೂ ಎಲ್ಲಾ ಶಾಲೆಗಳಿಗೂ ನೀರು ಪೂರೈಕೆ ಆಗುತ್ತಿದೆ ಅನ್ನೋದು ಶಾಲೆಯ ಮುಖ್ಯಸ್ಥ ರವಿ ಹೇಳುವ ಮಾತು. ಇಲ್ಲಿಯವರೆಗೆ ಉಂಟಾಗದ ನೀರಿನ ಸಮಸ್ಯೆ ಇಗ್ಯಾಕ ಬಂತು ಅನ್ನೋದು ಅವರ ಪ್ರಶ್ನೆ.ತಾವು ಕಾಂಗ್ರೇಸ್ ಬಿಟ್ಟು ಬಿಜೆಪಿಗೆ ಈ ಬಾರಿ ಸಪೋರ್ಟ ಮಾಡಿದ್ದೆ ಇದಕ್ಕೆಲ್ಲ ಕಾರಣ ಅಂತ ಆಡಳಿತ ಅವರು ಆರೋಪಿಸಿದ್ದಾರೆ. ಅಲ್ಲದೆ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿಗ ಕುಮ್ಮಕ್ಕೆ ಇದಕ್ಕೆಲ್ಲ ಕಾರಣ ಅಂತ ಅವರು ಆರೋಪಿಸಿದ್ದಾರೆ. 
Loading...

ಈ ಬಗ್ಗೆ ಗ್ರಾಮದ ಪಿಡಿಒ ಜಯಮಾಲಿನಿ ಅವರನ್ನ ಕೇಳಿದ್ರೆ ನನಗೆ ಜನ ಮುಖ್ಯ ಬಿಜನೆಸ್ ಮನ್ ಅಲ್ಲ ಅವರ ಆಸ್ಪತ್ರೆ ಮತ್ತು ಕಲ್ಯಾಣ ಮಂಟಪ ಮತ್ತು ಶಾಲೆಗೆ 2ಇಂಚಿನ ಪೈಪ್ ಪೈಪ್ ಅಳವಡಿಕೆ ಮಾಡಿ ಅನಧಿಕೃತವಾಗಿ ನೀರು ಕೊಳ್ಳೆ ಹೊಡಿತಿದ್ರು ಅದಕ್ಕೆ ಪೈಪ್ ಲೈನ್ ತಗೆದಿದ್ದೆವೆ. ಆದರೆ ಶಾಲೆಯ ಪೈಪ ಲೈನ್ ನಾವು ತೆಗೆದಿಲ್ಲ ಎನ್ನುತ್ತಿದ್ದಾರೆ.

ಅನಧಿಕೃತ ಪೈಪಲೈನ್ ಅಳವಡಿಕೆ ಮಾಡಿಸಿದ್ದಕ್ಕೆ ನೀರು ಸರಬರಾಜು ಕಟ್ ಮಾಡಿದಿವಿ ಅಂತ ಅಧಿಕಾರಿಗಳು ಹೇಳ್ತಿದ್ರೆ ಇತ್ತ ಶಾಲಾ ಮುಖ್ಯಸ್ಥರು ಈ ಹಿಂದಿನ ವ್ಯವಸ್ಥೆಯಲ್ಲೆ ನಾವು ನೀರು ಪಡಿತಿದಿವಿ ಅಂತಿದ್ದಾರೆ. ಬೇಸಿಗೆ ಕಾಲದಲ್ಲಿ ಉಲ್ಬಣಗೊಳ್ಳದ ನೀರಿನ ಸಮಸ್ಯೆ ಮಳೆಗಾಲ ಪ್ರಾರಂಭವಾದ ಬಳಿಕ ಅದು ಚುನಾವಣೆ ಮುಗಿದ ಬಳಿಕವೇ ಯಾಕೆ ಪ್ರಾರಂಭವಾಯಿತು ಅನ್ನೋದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳೇ ಉತ್ತರ ನೀಡಬೇಕು.

ಒಟ್ಟಾರೆಯಾಗಿ ಯಾರದ್ದೊ ರಾಜಕೀಯ ಹಿತಾಸಕ್ತಿ ಯಾರನ್ನೊ ಓಲೈಕೆ ಮಾಡೋಕೆ ಹೋಗಿ ಎನು ಅರಿಯದ ಮಕ್ಕಳ ಕುಡಿಯುವ ನೀರಿಗೆ ಕತ್ತರಿ ಹಾಕೋದು ಎಷ್ಟು ಸರಿ ಅನ್ನೋದು ಜನರ ಪ್ರಶ್ನೆ. ಹೀಗೆ ತಮ್ಮ ತಮ್ಮ ವಯಕ್ತಿಕ ಜಿದ್ದಾ ಜಿದ್ದಿಗೆ ಬಿದ್ದು ಮಕ್ಕಳ ಕುಡಿಯುವ ನೀರಲ್ಲೂ ರಾಜಕೀಯ ಬೆರೆಸಿ ಬೆಳೆಯುವ ಮಕ್ಕಳ ಮನಸ್ಸನ್ನು ಘಾಸಿ ಮಾಡುವುದು ಎಷ್ಟು ಸರಿ ಅನ್ನೋದು ನಮ್ಮ ಪ್ರಶ್ನೆ.
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...