Karnataka Weather Today: ಕರುನಾಡಿನಲ್ಲಿ ಮತ್ತೆ ಮಳೆಯ ಸಿಂಚನ: ಚಳಿಗಾಲದಲ್ಲಿಯೂ ವರುಣನ ಅಬ್ಬರ

ಚಳಿಗಾಲ (Winter) ಆರಂಭವಾಗಿದ್ರೂ ವಾತಾವರಣದಲ್ಲಿ ಏರುಪೇರುನಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ( Unseasonla Rain)ಯಾಗುತ್ತಿದೆ. ಮಳೆಯ ಪ್ರಮಾಣ ತಗ್ಗಿದ್ರೂ, ಇಬ್ಬನಿಯಂತೆ ದಿನನಿತ್ಯ ವರುಣನ ಸಿಂಚನ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಮಳೆಯ ಸಿಂಚನ (Karnataka Rainfall) ಮುಂದುವರಿಯಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಚಳಿಗಾಲ (Winter) ಆರಂಭವಾಗಿದ್ರೂ ವಾತಾವರಣದಲ್ಲಿ ಏರುಪೇರುನಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ( Unseasonla Rain)ಯಾಗುತ್ತಿದೆ. ಮಳೆಯ ಪ್ರಮಾಣ ತಗ್ಗಿದ್ರೂ, ಇಬ್ಬನಿಯಂತೆ ದಿನನಿತ್ಯ ವರುಣನ ಸಿಂಚನ ಇದೆ. ನಿನ್ನೆಯೂ ಸಹ ಬೆಂಗಳೂರು (Bengaluru) ಭಾಗಶಃ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣ ಆಗಿತ್ತು. ಸಂಜೆ ವೇಳೆಗೆ ಚಾಮರಾಜಪೇಟೆ, ದೊಡ್ಡಬಸವನಗುಡಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇತ್ತ ಕಡಲೆಕಾಯಿ ಪರಿಷೆ (Kadlekai Parishe) ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಮಳೆಯಿಂದಾಗಿ ತೊಂದರೆಗೆ ಸಿಲುಕಿಕೊಳ್ಳುವಂತಾಗಿತ್ತು.

ಇಂದು ಸಹ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ತುಮಕೂರಿನ ಕೆಲವು ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆ ಬೀಳುವ ಸಾಧ್ಯತೆಗಳಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ರೆ  ಮತ್ತೊಂದು ಕಡೆ ಚಳಿ ಹೆಚ್ಚಾಗುತ್ತಿದೆ. ಬೆಳಗಿನ ಜಾವ ಬೀಳುವ ಇಬ್ಬನಿಗೆ ಬಯಲು ಸೀಮೆ ಪ್ರದೇಶ ಮಲೆನಾಡು ಕಂಡಂತೆ ಬಾಸವಾಗುತ್ತಿದೆ. ಇದರ ಜೊತೆಗೆ ಮಳೆಯ ಸಿಂಚನ ಸಹ ಇರಲಿದೆ.

ರಾಜ್ಯದ ಜಿಲ್ಲೆಗಳ ಹವಾಮಾನ ವರದಿ

ಬೆಂಗಳೂರು 26-18, ಮೈಸೂರು 26-19, ಚಾಮರಾಜನಗರ 28-20, ರಾಮನಗರ 26-19, ಮಂಡ್ಯ 28-20, ಬೆಂಗಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 24-17, ಕೋಲಾರ 25-18, ಹಾಸನ 26-19, ಚಿಕ್ಕಮಗಳೂರು 26-18‘, ದಾವಣಗೆರೆ 26-21, ಶಿವಮೊಗ್ಗ 29-21, ಕೊಡಗು 24-17,

ಇದನ್ನೂ ಓದಿ: Astrology: ತುಲಾರಾಶಿಯವರು ಈ ದಿನ ಗಣೇಶನ ಪೂಜಿಸಿದರೆ ಸಂಕಷ್ಟ ದೂರ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ತುಮಕೂರು 27-19, ಉಡುಪಿ 32-24, ಮಂಗಳೂರು 31-24, ಉತ್ತರ ಕನ್ನಡ 29-21, ಧಾರವಾಡ 28-18, ಹಾವೇರಿ 29-21, ಹುಬ್ಬಳ್ಳಿ 28-20, ಬೆಳಗಾವಿ 27-20, ಗದಗ 28-21, ಕೊಪ್ಪಳ 28-21, ವಿಜಯಪುರ 27-21, ಬಾಗಲಕೋಟ 29-21, ಕಲಬುರಗಿ 29-21, ಬೀದರ್ 27-18, ಯಾದಗಿರಿ 30-21, ರಾಯಚೂರ 29-21, ಬಳ್ಳಾರಿ 28-21

ಮತ್ತೆ ಭಾರೀ ಮಳೆಯ ಅಲರ್ಟ್

ಉತ್ತರ-ಈಶಾನ್ಯಕ್ಕೆ ಚಲಿಸುವಾಗ ಲಕ್ಷದ್ವೀಪದ ಪಶ್ಚಿಮದಲ್ಲಿ ಚಂಡಮಾರುತದ ಪರಿಚಲನೆ ವೇಗ ಪಡೆದುಕೊಳ್ಳವ ಸಾಧ್ಯತೆಗಳಿವೆ. ಒಂದು ವೇಳೆ ವೇಗ ಪಡೆದುಕೊಂಡದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಸುಮಾರು 100 ರಿಂದ 120 ಮಿ.ಮೀ.ವರೆಗೆ ಮಳೆಯಾಗುವ  ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದು ರಾತ್ರಿಯಿಂದಲೇ ಮಹಾರಾಷ್ಟ್ರದ ಪಶ್ಚಿಮದಿಂದ 60 ಕಿಮೀ/ಗಂಟೆಗೆ ಗರಿಷ್ಠ ಗಾಳಿಯ ವೇಗವನ್ನು ತಲುಪುವ ನಿರೀಕ್ಷೆಯಿದೆ, ಇದು ಚಂಡಮಾರುತದ ಮಾನದಂಡಗಳಾದ 63 ಕಿಮೀ/ಗಂಗಿಂತ ಕಡಿಮೆಯಾಗಿದೆ.

ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಚಲನೆಯು ಆರಂಭಗೊಂಡಿದೆ. ಮಂಗಳವಾರದಿಂದ ಗುರುವಾರದವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಾದ್ಯಂತ ಒಟ್ಟು 150-200 ಮಿಮೀ ನಷ್ಟು ಮಳೆಯಾಗಲಿದೆ. ಈ ಮೋಡಗಳು ಬಂಗಾಳಕೊಲ್ಲಿಯ ಮೂಲಕ ವಾಯುವ್ಯ ಭಾಗಕ್ಕೆ ತಲುಪಲಿದೆ.

ಇದನ್ನೂ ಓದಿ:  Auto Fare Hike: ಬೆಂಗಳೂರಲ್ಲಿ ಡಿ.1ರಿಂದ ಆಟೋ ಪ್ರಯಾಣ ದುಬಾರಿ; Minimum Meter Rate ಎಷ್ಟಾಗಿದೆ ನೋಡಿ!

ಶನಿವಾರ ಮತ್ತೆ ಮಳೆ ಸಾಧ್ಯತೆ

ಶನಿವಾರ ಬೆಳಗ್ಗೆ ಅಥವಾ ಮಧ್ಯಾಹ್ಮ ಈ ಮಾರುತಗಳು ಆಂಧ್ರ ಪ್ರದೇಶದ ಕರಾವಳಿ ತಲುಪಲಿವೆ. ಈ ಸಮಯ ಕಡಲ ತೀರದ ವ್ಯಾಪ್ತಿಯಲ್ಲಿ 60 ಕಿಮೀ/ಗಂಟೆಗೆ ವೇಗವಾಗಿ ಗಾಳಿ ಬೀಸಲಿದೆ, ಸಮುದ್ರಕ್ಕೆ ಭಾರೀ ಅಲೆಗಳು ಅಪ್ಪಳಿಸಲಿವೆ. ಇದರ ಪರಿಣಾಮ ಶನಿವಾರ ಮತ್ತು ಭಾನುವಾರ ಮತ್ತೆ ಬೆಂಗಳೂರಿನಲ್ಲಿ ಮತ್ತೊಂದು ಹಂತದ ಮಳೆಯಾಗುವ  ಸಾಧ್ಯತೆಗಳು ಹೆಚ್ಚಿವೆ.

ಶುಕ್ರವಾರದಿಂದ ವಾರಾಂತ್ಯದವರೆಗೆ ಆಂಧ್ರಪ್ರದೇಶ, ಒಡಿಶಾದಿಂದ ಗಂಗಾನದಿ ಪಶ್ಚಿಮ ಬಂಗಾಳದವರೆಗೆ ಕರಾವಳಿಯಾದ್ಯಂತ ಒಟ್ಟು 150-200 ಮಿಮೀ ಮಳೆಯ ಪ್ರಮಾಣದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ತಪಾಮಾನ ಮತ್ತಷ್ಟು ಇಳಿಕೆಯಾಗಲಿದೆ.
Published by:Mahmadrafik K
First published: