ಕಾಲೇಜ್ ಮಾನ್ಯತೆ ಇಲ್ಲದಿದ್ದರೂ ಪದವಿ ಕೊಡ್ತಾರಂತೆ!: ವೊಗ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಿಂದ ಮೋಸ
Updated:August 30, 2018, 6:02 PM IST
Updated: August 30, 2018, 6:02 PM IST
ನ್ಯೂಸ್ 18 ಕನ್ನಡ
ಬೆಂಗಳೂರು(ಆ.30): ಅವರೆಲ್ಲಾ ಎಂಬಿಎ ಮಾಡಬೇಕೆಂಬ ಕನಸು ಹೊತ್ತ ವಿದ್ಯಾರ್ಥಿಗಳು. ಕಷ್ಟಪಟ್ಟು ಲಕ್ಷ ಲಕ್ಷ ಹಣವನ್ನು ಕೂಡಿಟ್ಟು ದಾಖಲಾತಿ ಮಾಡಸಿದ್ದರು. ಕಾಲೇಜಿನ ಹೆರಿಗಿದ್ದ ಪ್ರಸಿದ್ಧಿ ನೋಡಿ ಅಡ್ಮೀ ಷನ್ ಆದ ವಿದ್ಯಾರ್ಥಿಗಳಿಗೆ ಈಗ ಶಾಕ್ ಆಗಿದೆ. ಅತ್ತ ಕಟ್ಟಿದ ಹಣವೂ ಇಲ್ಲದೇ ಇಷ್ಟ ಪಟ್ಟ ಕೋರ್ಸ್ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Vogue Institute of Fashion Technology ಹೆಸರು ಕೇಳಿದರೆ ಕಲಿಯಬೇಕೆಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಆದರೆ ಬ್ರಾಂಡ್ ನೋಡಿ ನಗರದ ರಿಚ್ಮಂಡ್ ಬಳಿ ಇರುವ ಕಾಲೇಜಿಗೆ ಸೇರಿಕೊಂಡರೆ ಮಾತ್ರ ಫಜೀತಿಯಾಗುತ್ತದೆ. ಯಾಕೆಂದರೆ ಎಂಬಿಎ ಕೋರ್ಸ್ ಇದೆ ಎಂದು ಅಡ್ಮೀಷನ್ ಮಾಡಿಕೊಂಡ ಕಾಲೇಜು ಈಗ ನಮ್ಮಲ್ಲಿ ಕೋರ್ಸ್ ಲಭ್ಯವಿಲ್ಲ ಎಂದು ಜಾರಿಗೊಂಡಿದೆ. ಆ ಕಡೆ ಕಟ್ಟಿಡುವ ಹಣ ಕೂಡಾ ಸಿಗದೆ, ಇಷ್ಟ ಪಟ್ಟ ಕೋರ್ಸ್ ಸಿಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಎಂಬಿಎ ಕೋರ್ಸ್ ನಿಡುವುದಾಗಿ ಹೇಳಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಪ್ರಕರಣ ನಗರದಲ್ಲಿ ನಡೆದಿದೆ. Vogue Institute of Fashion Technology ಹೆಸರಿನಲ್ಲಿ ನಡೆಯುತ್ತಿರುವ ಸಂಸ್ಥೆ ಎಂಬಿಎ ಕೋರ್ಸ್ ನೀಡುವುದಾಗಿ ಅಡ್ಮೀಷನ್ ಮಾಡಿಕೊಂಡಿದೆ. ಇನ್ನೂ 2 ವರ್ಷದ ಕೋರ್ಸ್ಗೆ 6 ಲಕ್ಷದ 95 ಸಾವಿರ ಫೀಸ್ ಹೇಳಿದ್ದು ಈಗಾಗಲೇ ವಿದ್ಯಾರ್ಥಿಗಳು 2. 43 ಲಕ್ಷ ಹಣ ಕಟ್ಟಿದ್ದಾರೆ. ಆದರೆ ಕ್ಲಾಸ್ ಶುರುವಾದ ಮೇಲೆ ಉಲ್ಟಾ ಹೊಡೆದಿರೋ ಆಡಳಿತ ಮಂಡಳಿ ಎಂಬಿಎ ಬದಲಾಗಿ ಪಿಜಿ ಡಿಫ್ಲೋಮಾ ಕೋರ್ಸ್ ನೀಡುವುದಾಗಿ ಹೇಳುತ್ತಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಇನ್ನೂ ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಂತೆ Vogue Institute of Fashion Technology ಆಡಳಿತ ಮಂಡಳಿ ತನ್ನ ವರಸೆ ಬದಲಿಸಿದೆ. ಕರಿಯಪ್ಪ ಸ್ಕೂಲ್ ಆಫ್ ಆರ್ಟ್ ಆ್ಯಂಡ್ ಡಿಸೈನ್ ಎಂದು ಹೆಸರು ಬದಲಿಸಿದ್ದ ಪ್ರಿನ್ಸಿಪಾಲ್ ಹಾಗೂ ಚೇರ್ಮನ್ ಕರಿಯಪ್ಪ ವಿದ್ಯಾರ್ಥಿಗಳ ಕೈಗೆ ಸಿಗದೇ ಯಾಮಾರಿಸುತ್ತಿದ್ದಾರೆ. ಇನ್ನೂ ಕಳೆದ 20 ದಿನಗಳಿಂದ ಕಾಲೇಜು ಬಳಿ ಬಂದರೆ ಯಾವೊಬ್ಬ ಸಿಬ್ಬಂದಿಯು ಸಿಗದೇ ಸತಾಯಿಸುತ್ತಿದ್ದಾರೆ.
ಈ ಕುರಿತು ವರದಿ ಮಾಡಲು ತೆರಳಿದರೆ ಸಂಬಂಧಪಟ್ಟ ಅಧಿಕಾರಿಗಳಿಲ್ಲಾ ಎನ್ನುವ ಉಡಾಫೆಯ ಉತ್ತರ ಕೇಳಲು ಸಿಗುತ್ತದೆ. ಕಾಲೇಜಿನ ಚೇರ್ಮನ್ ತಮ್ಮ ಚೇಂಬರ್ ಒಳಗೆ ಕುಳಿತುಕೊಂಡು ಕಾಲೇಜಿನಲ್ಲಿ ಇಲ್ಲಾ ಎನ್ನುವ ಉತ್ತರ ನೀಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಕಾಲೇಜಿನ ಎಜಿಎಂ ಜಾನ್ ಅವರನ್ನು ಪ್ರಶ್ನೆ ಮಾಡಿದರೆ ಪ್ರಸ್ತುತ ವರ್ಷದಿಂದ ನಮ್ಮಲ್ಲಿ ಎಂಬಿಎ ಕೋರ್ಸ್ ಲಭ್ಯವಿಲ್ಲ ಎಂದಿದ್ದಾರೆ. ಇವರ ಈ ಮಅತುಗಳು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿವೆ.
ಇತ್ತ ಲಕ್ಷ ಲಕ್ಷ ಹಣ ಕಟ್ಟಿರುವ ವಿದ್ಯಾರ್ಥಿ ಹಣವೂ ಇಲ್ಲದೇ ಕೋರ್ಸ್ ಇಲ್ಲದೇ ಪರದಾಡುತ್ತಿದ್ದರೆ ಅತ್ತ ಆಡಳಿತ ಮಂಡಳಿ ಸಿಬ್ಬಂದಿಗಳು ಮಾತ್ರ ಎನು ಆಗೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಒಟ್ಟಿನಲ್ಲಿ ಆಡಳಿತ ಮಂಡಳಿ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ ಈ ಕೂಡಲೇ ಇಂತಹ ಅನಧಿಕೃತ ಪರವಾನಿಗೆ ಇಲ್ಲದ ಕಾಲೇಜುಗಳ ಕ್ಲೋಸ್ ಮಾಡುವುದರ ಜೊತೆಗೆ ಅವುಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ.

Loading...