LIVE NOW

SC Verdict on Karnataka Disqualified MLAs Live; ಅನರ್ಹ ಶಾಸಕರು ಬಿಜೆಪಿ ಸೇರಿದ ನಂತರ ಅಭ್ಯರ್ಥಿಗಳಾಗಿ ಘೋಷಿಸಲು ನಿರ್ಧಾರ

Supreme Court Judgement On Disqualified MLAs Live: ಅನರ್ಹತೆಯ ಆದೇಶವನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಇದೀಗ ತೀರ್ಪು ಪ್ರಕಟವಾಗಿದ್ದು, ಅನರ್ಹತೆಯ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೂಡ ಹೇಳಿದೆ.

Kannada.news18.com | November 13, 2019, 5:45 PM IST
facebook Twitter Linkedin
Last Updated November 13, 2019
auto-refresh
SC Verdict On Karnataka Disqualified MLAs LIVE: ಮೈತ್ರಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್- ಜೆಡಿಎಸ್ ಪಕ್ಷದ 17 ಶಾಸಕರನ್ನು ಅನರ್ಹಗೊಳಿಸಿದ್ದರು. ಆ ಆದೇಶವನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಇದೀಗ ತೀರ್ಪು ಪ್ರಕಟವಾಗಿದ್ದು, ಅನರ್ಹತೆಯ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೂಡ ಹೇಳಿದೆ. ಈ ಕುರಿತ ಕ್ಷಣ- ಕ್ಷಣದ ಮಾಹಿತಿ ನ್ಯೂಸ್​18 ಕನ್ನಡದಲ್ಲಿ ಲಭ್ಯ.  Read More
5:45 pm (IST)

ಉಪಚುನಾವಣಾ ಬಿಜೆಪಿ  ಉಸ್ತುವಾರಿಗಳು

ಅಥಣಿ- ಸಚಿವ ಕೆ.ಎಸ್‌. ಈಶ್ವರಪ್ಪ, ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಂಸದ ಅಣ್ಣಾ ಸಾಹೇಬ್ ಜೊಲ್ಲೆ

ಕಾಗವಾಡ- ಸಚಿವ ಸಿ.ಸಿ. ಪಾಟೀಲ್ , ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಟ, ಶಾಸಕರಾದ ಪಿ.‌ ರಾಜೀವ್ ಮತ್ತು ಅರವಿಂದ ಬೆಲ್ಲದ್

ಗೋಕಾಕ್- ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಎ.ಎಸ್‌.‌ ಪಾಟೀಲ್ ನಡಹಳ್ಳಿ

ಯಲ್ಲಾಪುರ-  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ,  ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ

ಹಿರೇಕೆರೂರು- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ.‌ ಬಣಕಾರ್

ರಾಣೆಬೆನ್ನೂರು-  ಸಚಿವ ಜಗದೀಶ್ ಶೆಟ್ಟರ್, ಸಚಿವ ಪ್ರಭು ಚೌಹಾಣ್, ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಬಿಜೆಪಿ ಮುಖಂಡ ಗಿರೀಶ್ ಪಟೇಲ್

ವಿಜಯನಗರ- ಡಿಸಿಎಂ ಗೋವಿಂದ ಕಾರಣಜೋಳ, ಎಂಎಲ್ಸಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ,  ಬಿಜೆಪಿ ಪರಾಜಿತ ಅಭ್ಯರ್ಥಿ ಗವಿಯಪ್ಪ,

 ಚಿಕ್ಕಬಳ್ಳಾಪುರ- ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್, ಸಂಸದ ಬಿ.ಎನ್. ಬಚ್ಚೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಂಜುನಾಥ್ 

ಕೆ.ಆರ್. ಪುರಂ- ಸಚಿವ ಆರ್.‌ ಅಶೋಕ್, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ 

ಯಶವಂತಪುರ- ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ. ಕೃಷ್ಣಪ್ಪ, ಮಾಜಿ ಎಂಎಲ್ಸಿಗಳಾದ ಅಶ್ವಥ್ ನಾರಾಯಣ, ಜಗ್ಗೇಶ್

ಮಹಾಲಕ್ಷ್ಮೀ ಲೇಔಟ್- ಸಚಿವ ವಿ.‌ ಸೋಮಣ್ಣ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬನರಸಿಂಹ

ಶಿವಾಜಿನಗರ- ಬೆಂಗಳೂರು ಮಹಾ ನಗರ  ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ನಗರ  ಜಿಲ್ಲಾ ಅಧ್ಯಕ್ಷ ಎಸ್. ಮುನಿರಾಜು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್. ರಘು

ಹೊಸಕೋಟೆ- ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶ ಎಸ್. ಅರ್. ವಿಶ್ವನಾಥ್, ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ

ಕೆ.ಆರ್. ಪೇಟೆ- ಸಚಿವ ಜೆ.ಸಿ. ಮಾಧುಸ್ವಾಮಿ, ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ,  ಶಾಸಕ ಪ್ರೀತಂ ಗೌಡ

ಹುಣಸೂರು- ಸಚಿವ ಶ್ರೀರಾಮುಲು, ಮಾಜಿ ಸಚಿವ ವಿಜಯಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್.

4:18 pm (IST)

ಅನರ್ಹರ ಕುರಿತು ಸುಪ್ರೀಂ ತೀರ್ಪು ವಿಚಾರ 
17 ಕ್ಷೇತ್ರಗಳಲ್ಲೂ ಅನರ್ಹರು ಗೆಲ್ಲುತ್ತಾರೆ 
ಬೆಲಗೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ 
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗ್ರಾಮ
ಬಿಎಸ್ವೈ 3 ವರ್ಷ ರಾಜ್ಯದ ಸಿಎಂ ಆಗಿರುತ್ತಾರೆ 
17 ಅನರ್ಹರ ಶಾಸಕರಿಗೂ ಉತ್ತಮ ಭವಿಷ್ಯವಿದೆ 
ಬೆಲಗೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ 


ಅನರ್ರು ಪಕ್ಷಕ್ಕೆ ಬಂದರೆ ಅವರಿಗೆ ಒಳ್ಳೆದಾಗುತ್ತೆ  
ನಾವೆಲ್ಲರೂ ಸೇರಿ ಗೆಲ್ಲಿಸುವ ಕೆಲಸ ಮಾಡುತ್ತೇವೆ 
ನಾವು ಮಂತ್ರಿ ಸ್ಥಾನ ತ್ಯಾಗ ಮಾಡಿದ್ದೇವೆ 
17 ಜನರನ್ನ ಗೆಲ್ಲಿಸಿ ಮಂತ್ರಿ ಮಾಡಬೇಕಾಗುತ್ತದೆ 
17 ಜನರಿಂದ ಸರ್ಕಾರ ಬಂದು BSY ಸಿಎಂ ಆಗಿದ್ದಾರೆ 
3 ವರ್ಷ ಸರ್ಕಾರ ಇರುತ್ತೆ 17 ಜನರನ್ನ ಗೆಲ್ಲಿಸುತ್ತೇವೆ 
ಬೆಲಗೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ 

Load More


corona virus btn
corona virus btn
Loading