ಮುಷ್ಕರನಿರತ ವೈದ್ಯರಿಗೆ ಭದ್ರತೆ ಒದಗಿಸುವಂತೆ ಮನವಿ; ನಾಳೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

Doctor Strike: ಕಳೆದ ಸೋಮವಾರ ಕೊಲ್ಕತ್ತಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಸಾವನ್ನಪ್ಪಿದ ಎಂದು ರೋಗಿಯ ಸಂಬಂಧಿಕರು ಕಿರಿಯ ವೈದ್ಯನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ನಡೆದ ಪ್ರತಿಭಟನೆಯ ತೀವ್ರ ಸ್ವರೂಪ ಪಡೆದಿತ್ತು.

Seema.R | news18
Updated:June 17, 2019, 12:10 PM IST
ಮುಷ್ಕರನಿರತ ವೈದ್ಯರಿಗೆ ಭದ್ರತೆ ಒದಗಿಸುವಂತೆ ಮನವಿ; ನಾಳೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ
ವೈದ್ಯರ ಮುಷ್ಕರ
  • News18
  • Last Updated: June 17, 2019, 12:10 PM IST
  • Share this:
ನವದೆಹಲಿ (ಜೂ.17): ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಮಂಡಳಿ ಕರೆ ನೀಡಿರುವ ಬಂದ್​​ಗೆ ದೇಶಾದ್ಯಂತ ವೈದ್ಯರು ಬೆಂಬಲ ನೀಡಿದ್ದಾರೆ. ಇದೇ ವೇಳೆ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಭದ್ರತೆ ನಿಯೋಜಿಸಬೇಕೆಂದು ಕೋರಿ ಅಲೋಕ್ ಶ್ರೀವಾಸ್ತವ ಎಂಬ ವಕೀಲರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ನಾಳೆ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದೆ.

ನ್ಯಾ. ದೀಪಕ್​ ಗುಪ್ತಾ ಮತ್ತು ಸೂರ್ಯ ಕಾಂತ್​ ಒಳಗೊಂಡ ರಜಾ ಪೀಠ ಜೂನ್​ 18ರಂದು  ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಕಳೆದ ಸೋಮವಾರ ಕೊಲ್ಕತ್ತಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಸಾವನ್ನಪ್ಪಿದ ಎಂದು ರೋಗಿಯ ಸಂಬಂಧಿಕರು ಕಿರಿಯ ವೈದ್ಯನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ನಡೆದ ಪ್ರತಿಭಟನೆಯ ತೀವ್ರ ಸ್ವರೂಪ ಪಡೆದಿತ್ತು.

ವೈದ್ಯರ ಮೇಲೆ ರೋಗಿ ಸಂಬಂಧಿಕರು ನಡೆಸುತ್ತಿರುವ ಖಂಡಿಸಿ ಸುಪ್ರೀಂ ಕೋರ್ಟ್​ನಲ್ಲಿಯೂ ಅರ್ಜಿ ದಾಖಲಿಸಲಾಗಿದೆ. ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಭದ್ರತೆಗೆ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮುಂದಾಗಬೇಕು ಎಂದು ವಕೀಲ ಅಲೋಕ್​ ಶ್ರೀವಾಸ್ತವ್​ ತುರ್ತು ಅರ್ಜಿ ಸಲ್ಲಿಕೆ ಮಾಡಿದ್ದರು.

ಮುಷ್ಕರ ಅಂತ್ಯಗೊಳಿಸದಿದ್ದರೆ ಕೆಲಸ ತೊರೆಯುವಂತೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆಯನ್ನು ನಿರ್ಲಕ್ಷ್ಯಸಿ ವೈದ್ಯರು ಮುಷ್ಕರ ನಡೆಸಿದರು. ಅಲ್ಲದೇ ವೈದ್ಯರೊಂದಿಗೆ ನಡೆಸಿದ ಮಾತುಕತೆಗಳು ಕೂಡ ವಿಫಲವಾಗಿದ್ದವು. ಈ ಮುಷ್ಕರ ಬಿಜೆಪಿ ಪ್ರೇರಿತ ಧರಣಿ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಸಿಎಂ ಕ್ಷಮೆ ಸೇರಿದಂತೆ ಆರು ಬೇಡಿಕೆಗಳನ್ನು ವೈದ್ಯರು ಸಿಎಂ ಮುಂದೆ ಇಟ್ಟಿದ್ದಾರೆ.

ಇದನ್ನು ಓದಿ: ನಿಮ್ಮ ಬೇಡಿಕೆಗಳಿಗೆ ಒಪ್ಪಿಗೆ ಇದೆ, ಪ್ರತಿಭಟನೆ ನಿಲ್ಲಿಸಿ: ವೈದ್ಯರಿಗೆ ಮಮತಾ ಬ್ಯಾನರ್ಜಿ ಮನವಿ

ಈ ಮುಷ್ಕರ ಬೆಂಬಲಿಸಿ ದೇಶಾದ್ಯಂತ ವೈದ್ಯರು ಶುಕ್ರವಾರ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಕೇಂತಿಕ ಧರಣಿ ನಡೆಸಿದರು. ಇದಾದ ಬಳಿಕವೂ ವೈದ್ಯರೊಂದಿಗೆ ಮಾತುಕತೆ ವಿಫಲವಾದ ಹಿನ್ನೆಲೆ ಇಂದು ದೇಶ್ಯಾದ್ಯಂತ ಹೊರ ರೋಗಿಗಳ ಸೇವೆ ಬಂದ್​ ಮಾಡಿ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ವೈದ್ಯರ ಸೇವೆಯಿಲ್ಲದೆ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ.ಬಿಹಾರದ ಮುಜಾಫರ್​ ಪುರದಲ್ಲಿ ಮಿದುಳು ಜ್ವರದಿಂದ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯರ ಮುಷ್ಕರದಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ