• Home
  • »
  • News
  • »
  • state
  • »
  • Congress Campaign: ಪೇ ಮೇಯರ್ ಆಯ್ತು ಈಗ ಸೇ ಮೇಯರ್, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ನಿಂದ ವಿನೂತನ ಅಭಿಯಾನ!

Congress Campaign: ಪೇ ಮೇಯರ್ ಆಯ್ತು ಈಗ ಸೇ ಮೇಯರ್, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ನಿಂದ ವಿನೂತನ ಅಭಿಯಾನ!

ಸೇ ಮೇಯರ್ ಅಭಿಯಾನ

ಸೇ ಮೇಯರ್ ಅಭಿಯಾನ

ಕೆಲ ದಿನಗಳ ಹಿಂದೆಯಷ್ಟೇ ಪೇ ಮೇಯರ್ ಅಭಿಯಾನ ಮಾಡೋ ಮೂಲಕ ಮೇಯರ್ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮಾಡಿದ್ದ ಕಾಂಗ್ರೆಸ್ ಇದೀಗ ಸೇ ಮೇಯರ್ ಅಭಿಯಾನ ಆರಂಭಿಸಿದೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ಅ.19):  ಪೇ ಮೇಯರ್ (Pay Mayor) ಆಯ್ತು ಈಗ ಸೇ ಮೇಯರ್ (Say Mayor) ಅಭಿಯಾನ ಆರಂಭವಾಗಿದೆ . ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು (Congress Activist) ಈ ಅಭಿಯಾನ ಆರಂಭಿಸಿದ್ದಾರೆ. ಮೇಯರ್ ಈರೇಶ ಅಂಚಟಗೇರಿ ಕಾರ್ಯವೈಖರಿ ಖಂಡಿಸಿ, ಅವರ ವಿರುದ್ಧ ಅಭಿಯಾನ ಶುರು ಮಾಡಿದ್ದಾರೆ. ಬಾಡಿಗೆ ಕಾರು ಪಡೆದು ತಿಂಗಳಿಗೆ 72,505 ರೂಪಾಯಿ ಪಾವತಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.


ಕಾರಿಗೆ ದುಬಾರಿ ಹಣ ವ್ಯಯಿಸುತ್ತಿರುವ ಮೇಯರ್​


ತಮಗೆ ಕೊಟ್ಟ ಕಾರನ್ನು ಈರೇಶ ಅಂಚಟಗೇರಿ ಅವರು ಉಪ ಮೇಯರ್ ಗೆ ಕೊಟ್ಟಿದ್ದಾರೆ. ತಾವು ಇನೋವಾ ಕಾರನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು 72 ಸಾವಿರ ರೂಪಾಯಿ ಪಾವತಿ ಮಾಡುತ್ತಿದ್ದಾರೆ. ಮೊದಲೇ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಿರುವಾಗ ಬಾಡಿಗೆ ಕಾರಿಗೆ ದುಬಾರಿ ಹಣ ವ್ಯಯಿಸುತ್ತಿರುವುದೇಕೆ. ಅದರ ಬದಲಿ ಇ.ಎಂ.ಐ. ನಲ್ಲಿ ಪಾಲಿಕೆಯೇ ಸ್ವಂತ ಕಾರು ಖರೀದಿಸಬಹುದಿತ್ತು. ಪ್ರತಿ ತಿಂಗಳು ಇ.ಎಂ.ಐ. ಕಟ್ಟಿದರೂ ಕಾರು ಪಾಲಿಕೆಯ ಸ್ವತ್ತಾಗುತ್ತೆ. ಅದನ್ನು ಬಿಟ್ಟು ಕಾರಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಉತ್ತರ ಕೊಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.


ಕಾರು ಬಾಡಿಗೆ ಪಡೆಯುವುದರಲ್ಲಿಯೂ ಭ್ರಷ್ಟಾಚಾರ


ಕಾರು ಬಾಡಿಗೆ ಪಡೆಯುವುದರಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ಆರೋಪಿಸಿದ್ದಾರೆ. ಪಾಲಿಕೆಯಲ್ಲಿ ಮೇಯರ್ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿಯುವಂತಾಗಿದೆ. ಇದೆಲ್ಲಕ್ಕೂ ಸಾರ್ವಜನಿಕವಾಗಿ ಉತ್ತರ ಕೊಡುವಂತೆ ಆಗ್ರಹಿಸಿದ್ದಾರೆ.


ಮೇಯರ್ ಗೌನ್ ಹಾಕಿಕೊಳ್ಳದೇ ಇರೋದಕ್ಕೂ ಆಕ್ರೋಶ


ಧಾರವಾಡ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಗೌನ್ ಧರಿಸದಿರೋ ವಿಚಾರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಗೌನ್ ಧರಿಸಿ ಬಂದರಷ್ಟೇ ಸಭೆಗೆ ಅವಕಾಶ ನೀಡುವುದಾಗಿ ಪಾಲಿಕೆ ವಿರೋಧ ಪಕ್ಷದ ನಾಯಕ ದೊರಾಜು ಮಣಿಕುಂಟ್ಲ ಹಾಗೂ ಸದಸ್ಯ ಇಮ್ರಾನ್ ಎಲಿಗಾರ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Puneeth Rajkumar: ಶಿವಮೊಗ್ಗದಲ್ಲಿ ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಭರ್ಜರಿ ಬಾಡೂಟ


ಮೇಯರ್ ಗೌನ್ ಹಾಕಿಕೊಂಡು ಬರದೇ ಇರೋ ವಿಚಾರ ಗದ್ದಲ ಸ್ವರೂಪ ಪಡೆದು, ಸಭೆಯನ್ನು ಏಳು ದಿನಗಳ ಕಾಲ ಮುಂದೂಡಲಾಗಿತ್ತು. 18 ದಿನಗಳಾದ್ರೂ ಸಭೆ ನಡೆಸದೇ ಇರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಕಾಂಗ್ರೆಸ್, ಕೂಡಲೇ ಸಭೆ ನಡೆಸುವಂತೆ ಆಗ್ರಹಿಸಿದೆ. ಪಾಲಿಕೆ ಮೇಯರ್ ಗೌನ್ ಹಾಕಿಕೊಳ್ಳೋದು ಸಂಪ್ರದಾಯ. ಅದನ್ನು ಧಿಕ್ಕಿರಿಸಿ ಮೇಯರ್ ಈರೇಶ ಅಂಚಟಗೇರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ.


ಗೌನ್ ಧರಿಸಿಕೊಂಡು ಬಂದು ಸಭೆ ಮಾಡಲಿ


ಈ ಕುರಿತು ಸರ್ಕಾರದಿಂದ ಸ್ಪಷ್ಟನೆ ಪಡೆದುಕೊಳ್ಳಲಿ. ಗೌನ್ ಧರಿಸಿಕೊಂಡು ಬಂದು ಸಭೆ ಮಾಡಲಿ. ಏಕೆ ಗೌನ್ ಧರಿಸೋಲ್ಲ ಅಂತ ಸಭೆಗೆ ಹೇಳಿ, ಬೇಕಿದ್ದರೆ ತೆಗೆಯಲಿ. ಅಲ್ಲಿಯವರೆಗೂ ಸಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಪಾಲಿಕೆ ಮೇಯರ್ ಡಿಕ್ಟೇಟರ್ ರಂತೆ ವರ್ತಿಸುತ್ತಿದ್ದಾರೆ. ಹಣ ಇಲ್ಲದೇ ಇದ್ದರೂ ಕೆಲ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅನುಮತಿ ನೀಡಿದ್ದಾರೆ. ತಮ್ಮ ಪಕ್ಷದವರ ವಾರ್ಡ್ ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ತಾರತಮ್ಯ ಕೂಡಲೇ ನಿಲ್ಲಿಸುವಂತೆ ದೊರಾಜು ಮತ್ತು ಇಮ್ರಾನ್ ಎಲಿಗಾರ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Deepavali Celebration: ಬೆಂಗಳೂರಲ್ಲಿ ಪಟಾಕಿ ಸಿಡಿಸಲು 2 ಗಂಟೆ ಮಾತ್ರ ಅವಕಾಶ! ಇದು ದೀಪಾವಳಿ ಹಬ್ಬದ ರೂಲ್ಸ್​!


ಈ ನಡುವೆ ಮುಂದೂಡಲ್ಪಟ್ಟ ಸಾಮಾನ್ಯ ಸಭೆಯನ್ನು ಅಕ್ಟೋಬರ್ 28 ರಂದು ಧಾರವಾಡದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಿ ಮೇಯರ್ ಸೂಚನಾ ಪತ್ರ ಹೊರಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನೂತನ ಸಭಾಂಗಣ ನಿರ್ಮಾಣ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸುವ ಕುರಿತು ವಿಷಯ ಪಟ್ಟಿ ಪ್ರಕಟಿಸಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಮುಂದೆ ನಡೆಯಲಿರೋ ಸಾಮಾನ್ಯ ಸಭೆಯತ್ತ ನೆಟ್ಟಿದೆ.

Published by:ಪಾವನ ಎಚ್ ಎಸ್
First published: