• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Untouchability: ದೇವಸ್ಥಾನ ಪ್ರವೇಶಿಸಿದ್ದ ದಲಿತ ಕುಟುಂಬದ ಮೇಲೆ ಹಲ್ಲೆ, ಮನೆಗೆ ಬೆಂಕಿ ಹಚ್ಚಲು ಮುಂದಾದ ಸವರ್ಣಿಯರು

Untouchability: ದೇವಸ್ಥಾನ ಪ್ರವೇಶಿಸಿದ್ದ ದಲಿತ ಕುಟುಂಬದ ಮೇಲೆ ಹಲ್ಲೆ, ಮನೆಗೆ ಬೆಂಕಿ ಹಚ್ಚಲು ಮುಂದಾದ ಸವರ್ಣಿಯರು

ಸವರ್ಣಿಯರಿಂದ ದಲಿತ ಕುಟುಂಬದ ಮೇಲೆ ಹಲ್ಲೆ

ಸವರ್ಣಿಯರಿಂದ ದಲಿತ ಕುಟುಂಬದ ಮೇಲೆ ಹಲ್ಲೆ

ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಹಿನ್ನೆಲೆ ದೇವರ ಮೂರ್ತಿ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಲಾಗಿತ್ತು. ಈ ಮೆರವಣಿಗೆಯಲ್ಲಿ ದಲಿತರು ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಈ ಗಲಾಟೆ ಶುರುವಾಗಿತ್ತು ಎಂದು ವರದಿಯಾಗಿದೆ.

  • News18 Kannada
  • 4-MIN READ
  • Last Updated :
  • Haveri, India
  • Share this:

ಹಾವೇರಿ: ದೇವಸ್ಥಾನ ಪ್ರವೇಶ (Temple Enters) ಮಾಡಿದ್ದಕ್ಕೆ ದಲಿತ ಕುಟುಂಬದ (Dalit Family) ತಾಯಿ ಮತ್ತು ಮಗ ಮೇಲೆ ಸವರ್ಣಿಯರು ಹಲ್ಲೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur,Haveri) ತಾಲೂಕಿನ ನಂದಿಹಳ್ಳಿಯಲ್ಲಿ (Nandihalli) ನಡೆಸಿದ್ದಾರೆ. ಗ್ರಾಮದಲ್ಲಿಯ ದಲಿತರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಏರಿಯಾದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಸವರ್ಣಿಯರ (Upper caste People) ಗುಂಪು ದಲಿತರ ಮನೆಗಳಿಗೆ ಬೆಂಕಿ ಹಚ್ಚಲು ಮುಂದಾಗಿತ್ತು. ರಮೇಶ್ ಎಂಬ ದಲಿತನ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ನೀನು ದಲಿತನಾಗಿದ್ದು, ದೇವಸ್ಥಾನ ಒಳಗೆ ಹೋಗಬಾರದು. ನಮ್ಮ ಜೊತೆ ಮೆರವಣಿಗೆಯಲ್ಲಿ ಕುಣಿಯಬಾರದು ಎಂದು ನಿಂದಿಸಿ ಗಲಾಟೆ ಮಾಡಲಾಗಿದೆ. ಹಲ್ಲೆಗೊಳಗಾದ ರಮೇಶ್ ತಾಯಿ ಹೇಮವ್ವ ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ದೇವರ ಮೂರ್ತಿ ಮೆರವಣಿಗೆಯಲ್ಲಿಯೂ ಗಲಾಟೆ


ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಹಿನ್ನೆಲೆ ದೇವರ ಮೂರ್ತಿ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಲಾಗಿತ್ತು. ಈ ಮೆರವಣಿಗೆಯಲ್ಲಿ ದಲಿತರು ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಈ ಗಲಾಟೆ ಶುರುವಾಗಿತ್ತು ಎಂದು ವರದಿಯಾಗಿದೆ.


ಈ ಮೆರವಣಿಗೆಯಲ್ಲಿ ಮೇಲ್ಜಾತಿಯವರ ಜೊತೆಯಾಗಿ ದಲಿತರು ಹೆಜ್ಜೆ ಹಾಕಿದ್ದಾರೆ. ಈ ವೇಳೆ ಎರಡೂ ಸಮುದಾಯದ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಎರಡು ಸಮುದಾಯದವರು ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.


ಇದನ್ನೂ ಓದಿ:  Madal Virupakshappa ಹಗರಣದಿಂದ ತೀವ್ರ ಮುಜುಗರ; ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕೇಸರಿ ಪಡೆ


ಅಂಬೇಡ್ಕರ್ ಭಾವಚಿತ್ರ ಹರಿದು ಹಾಕಿದ್ರಾ?


ಗಲಾಟೆ ಸಮಯದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ಹಾಕಲಾಗಿದೆ ಎಂದು ದಲಿತರು ಆರೋಪಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಮಾರಪಟ್ಟಣಂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ಸಂಬಂಧ ಮೂವತ್ತಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


‘ಕೈ’ನಿಂದ ಗಿಫ್ಟ್​ ಪಾಲಿ‘ಟ್ರಿಕ್ಸ್’


ಚಿಕ್ಕೋಡಿ ಉಪವಿಭಾಗದಲ್ಲಿ ಗಿಫ್ಟ್​ ಪಾಲಿಟಿಕ್ಸ್ ಮುಂದುವರಿದಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಂಭು ಕಲ್ಲೋಳಿಕರ ಮತದಾರರಿಗೆ ಸೀರೆಗಳನ್ನು ಹಂಚಿದ್ದಾರೆ. ಸೀರೆ ಹಂಚಿಕೆ ಮಾಡುತ್ತಿರುವುದನ್ನ ತಿಳಿದ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ರು.




ನಿರೀಕ್ಷೆಗೂ ಮೀರಿ ಮಹಿಳೆಯರು ಬಂದಿದ್ದ ಹಿನ್ನೆಲೆ ಅವರನ್ನ ನಿಯಂತ್ರಿಸಲು ಹರ ಸಾಹಸ ಪಡಿಸಲಾಯ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರಿಂದ ಸೀರೆ ಹಂಚಿಕೆ ಸ್ಥಗಿತಗೊಳಿಸಲಾಯ್ತು. ಇದರಿಂಧ ಮಹಿಳೆಯರು ಸಿಟ್ಟಾಗಿ ಮನೆಗೆ ತೆರಳಿದರು.


ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ


ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟವಾಗಿದೆ. ಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರೋ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಪ್ರಾಯೋಗಿಕ ಪರೀಕ್ಷೆ ವೇಳೆ ಅವಘಡ ಸಂಭವಿಸಿದೆ.


ಘಟನೆಯಲ್ಲಿ ಬಿಹಾರ ಮೂಲದ ಐವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.. ಗಾಯಾಳುಗಳಿಗೆ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.


ಶಿಕ್ಷಕಿ ಮೃತದೇಹ ಇಟ್ಟು ಪ್ರತಿಭಟನೆ


ಚಿಕ್ಕೋಡಿಯ ರಾಯಬಾಗ ರೈಲು ನಿಲ್ದಾಣ ಸಮೀಪ ರೈಲಿಗೆ ತಲೆ ಕೊಟ್ಟು ಶಿಕ್ಷಕಿ ಆತ್ಮಹತ್ಯೆ  ಮಾಡಿಕೊಂಡಿದ್ದರು. ಈ ಪ್ರಕರಣ ಸಂಬಂಧ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕುಡಚಿ ಪಟ್ಟಣದ ಜುನ್ನೇದಿಯಾ ಶಾಲೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.


ಮೃತ ಶಿಕ್ಷಕಿ ಅನ್ನಪೂರ್ಣ ರಾಜು ಬಸಾಪೂರೆ, ಡೆತ್​​ ನೋಟ್​ನಲ್ಲಿ ಹೆಡ್​ ಮಾಸ್ಟರ್ ಹೆಸರು ಹಾಗೂ ಸಹ ಶಿಕ್ಷಕಿಯರ ಹೆಸರು ಬರೆದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಕೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Published by:Mahmadrafik K
First published: