Savarkar: ಸಾವರ್ಕರ್ ಒಬ್ಬ ನಾಸ್ತಿಕ‌, ಆತನ ಪೋಟೋ ಇಟ್ಟು ಹಿಂದೂಗಳಿಗೆ ಅವಮಾನ‌: ಕಿಡಿಕಾರಿದ ಕೈ ನಾಯಕ

ಸಾವರ್ಕರ್​ ದೇವರನ್ನು ನಂಬಿರಲಿಲ್ಲ ಎನ್ನುವುದಕ್ಕೆ ಅವರ ಆತ್ಮಚರಿತ್ರೆಯೇ ಸಾಕ್ಷಿ. ಇದನ್ನು ಓದಿದರೆ ಅವರು ನಾಸ್ತಿಕರಲ್ಲ ಎಂಬುವುದು ತಿಳಿಯುತ್ತದೆ. ಬಿಜೆಪಿಯವರು ಇಷ್ಟೆಲ್ಲ ಮಾತನಾಡುತ್ತಾರಲ್ಲ, ಗೋಹತ್ಯೆ ಬಗ್ಗೆ ಸಾವರ್ಕರ್ ಏನು ಹೇಳಿದ್ದಾರೆ ಎನ್ನುವುದನ್ನು ನೋಡಲಿ.

ಗಣೇಶೋತ್ಸವ, ವೀರ ಸಾವರ್ಕರ್

ಗಣೇಶೋತ್ಸವ, ವೀರ ಸಾವರ್ಕರ್

  • Share this:
ಬೆಂಗಳೂರು(ಆ.26): ಸಾವರ್ಕರ್ (Savarkar) ವಿಚಾರ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ಸೇನಾನಿ (Freedom Fighter) ಹೌದು, ಅಲ್ಲ ಎನ್ನುವ ಚರ್ಚೆ ನಡುವೆ ಫ್ಲೆಕ್ಸ್​ ವಿಚಾರ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಇದೇ ವಿಚಾರವನ್ನಿಟ್ಟುಕೊಂಡು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಲು ನಾನಾ ರೀತಿಯ ಹೇಳಿಕೆಗಳನ್ನು ನೀಡಿ ಈ ವಿವಾದ ಮತ್ತಷ್ಟು ಭುಗಿಲೇಳುವಂತೆ ಮಾಡುತ್ತಿದ್ದಾರೆ. ಇದೀಗ ಸಾವರ್ಕರ್ ವಿಚಾರವಾಗಿ ಕಾಂಗ್ರೆಸ್​ ನಾಯಕ ನೀಡಿರುವ ವಿಚಾರ ಮತ್ತೆ ಈ ವಿಚಾರ ಸದ್ದು ಮಾಡುವಂತೆ ಮಾಡಿದೆ. ಹೌದು ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಸಾವರ್ಕರ್ ಒಬ್ಬ ನಾಸ್ತಿಕ ಎಂದಿದ್ದಾರೆ.

ಗಣೇಶೋತ್ಸವದಲ್ಲಿ‌ ಬಿಜೆಪಿರು ಸಾವರ್ಕರ್ ಪೋಟೋ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಹೀಗಿರುವಾಗಲೇ ಮಂಡ್ಯದ ಪಾಂಡವಪುರದಲ್ಲಿ ಮಾತನಾಡಿದ ಕಾಂಗ್ರೆಸ್​ ನಾಯಕ, ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸಾವರ್ಕರ್ ಒಬ್ಬ ನಾಸ್ತಿಕ ಎಂದು ಹಣಿದಿದ್ದಾರೆ. ಅಲ್ಲದೇ ಇಂತಹ ನಾಸ್ತಿಕನ ಪೋಟೋ ಇಟ್ಟು ಹಿಂದೂಗಳಿಗೆ ಅಪಮಾನ‌ ಮಾಡುತ್ತಿದ್ದಾರೆ. ಸಾವರ್ಕರ್ ಫೋಟೋ ಹಿಂದೂ ದೇವರ ಜೊತೆ ಇಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಸಾರ್ವಕರ್ ಯಾವತ್ತು ದೇವರನ್ನು ನಂಬಿರಲಿಲ್ಲ ಎನ್ನುವ ಮೂಲಕ ಗಣೋಶೋತ್ಸವದಲ್ಲಿ ಸಾವರ್ಕರ್ ಫೋಟೋ ಇಡಲು ಹೊರಟ ಬಿಜೆಪಿಗರಿಗೆ ಹರಿಪ್ರಸಾದ್ ಟಕ್ಕರ್ ನೀಡಿದ್ದಾರೆ.

ಇದನ್ನೂ ಓದಿ:  Savarkar: ಮನೆ ಮುಂದೆ ಬ್ಯಾನರ್ ಹಾಕಿದ ಶಾಸಕ ರೇಣುಕಾಚಾರ್ಯ; ಮದ್ವೆಯಲ್ಲಿ ಸಾವರ್ಕರ್ ಫೋಟೋ ಗಿಫ್ಟ್

ಸಾವರ್ಕರ್​ ದೇವರನ್ನು ನಂಬಿರಲಿಲ್ಲ ಎನ್ನುವುದಕ್ಕೆ ಅವರ ಆತ್ಮಚರಿತ್ರೆಯೇ ಸಾಕ್ಷಿ. ಇದನ್ನು ಓದಿದರೆ ಅವರು ನಾಸ್ತಿಕರಲ್ಲ ಎಂಬುವುದು ತಿಳಿಯುತ್ತದೆ. ಬಿಜೆಪಿಯವರು ಇಷ್ಟೆಲ್ಲ ಮಾತನಾಡುತ್ತಾರಲ್ಲ, ಗೋಹತ್ಯೆ ಬಗ್ಗೆ ಸಾವರ್ಕರ್ ಏನು ಹೇಳಿದ್ದಾರೆ ಎನ್ನುವುದನ್ನು ನೋಡಲಿ. ಇಂತಹ ನಾಸ್ತಿಕನನ್ನು ಗಣೇಶನ ಜೊತೆ ಇಟ್ಟುಕೊಂಡು ಹಿಂದೂಗಳಿಗೆ ಅವಮಾನ ಮಾಡ್ತಿರೋ ಕೆಲಸ ಈಗ ಬಿಜೆಪಿಯವರು ಮತ್ತು ಸಂಘಪರಿವಾರದವರು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್: ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಸಾವರ್ಕರ್ ಬ್ರಿಟನ್ ನಲ್ಲಿದ್ದಾಗ ಪ್ರತೀಕಾರದ ಕಾರಣಕ್ಕೆ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ ನಡೆಯುತ್ತದೆ. ಈ ಪ್ರಕರಣದಲ್ಲಿ ಬಂಧಿತರಾದಾಗ ವಿಚಾರಣೆ ಎದುರಿಸಲು ಭಾರತಕ್ಕೆ ಬರಲು ಅವರು ನಿರಾಕರಿಸುತ್ತಾರೆ. ಬಿಜೆಪಿಯವರು ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ ಎಂದು ಪ್ರಶ್ನಿಸಿದರು.

Congress Leaders inaugurated Savarkar garden in 2016 at Tumakuru
ಇಷ್ಟು ದಿನ ವೀರ್ ಸಾವರ್ಕರ್ ಸ್ವಾತಂತ್ರ್ಯ  ಹೋರಾಟಗಾರ ಅಲ್ಲ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವಂತಹ ಸುದ್ದಿ ಇದಾಗಿದೆ.


ದೇಶ ವಿಭಜನೆಗೆ ನೆಹರೂ- ಗಾಂಧಿ ಕಾರಣ ಎನ್ನುವ ಬಿಜೆಪಿಗರು ಇತಿಹಾಸ ಓದಲಿ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್. ಜಿನ್ನಾ ಅವರ ದೇಶ ವಿಭಜನೆಯ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪುತ್ತೇನೆ ಎಂದಿದ್ದರು ಸಾರ್ವಕರ್. ಪ್ರತ್ಯೇಕ ಸಿಖ್ ದೇಶದ ಬೇಡಿಕೆಗೂ ಅವರ ಬೆಂಬಲಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅದೇನಿದ್ದರೂ ಈಗಾಗಲೇ ಸಾವರ್ಕರ್ ವೀರ ಅಲ್ಲ, ಸ್ವಾತಂತ್ರ್ಯ ಸೇನಾನಿಲ್ಲ ಎಂಬಿತ್ಯಾದಿ ಹೇಳಿಕೆಗಳು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್​ ನಾಯಕನ ಈ ಹೊಸ ಹೇಳಿಕೆ ಈ ವಿವಾದ ಮತ್ತೆ ಭುಲೇಳುವಂತೆ ಮಾಡುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ.

ಯಾರು ಸಾವರ್ಕರ್?

1883, ಮೇ 28ರಂದು ಮಹಾರಾಷ್ಟ್ರದ ನಾಶಿಕ್​ನಲ್ಲಿ ಜನಿಸಿದ ಸಾವರ್ಕರ್ ಸಾಕಷ್ಟು ವಿವಾದಗಳಿರುವ ವ್ಯಕ್ತಿತ್ವ. ಇತ್ತೀಚೆಗೆ ಸಾಕಷ್ಟು ವಿವಾದಗಳು ಇವರ ಹೆಸರಿಗೆ ಮೆತ್ತಿಕೊಳ್ಳುತ್ತಿವೆ. ಜೀವಕ್ಕೆ ಹೆದರಿ ಬ್ರಿಟಿಷರ ಪರ ನಿಂತಿದ್ದ ಹೆದರುಪುಕ್ಕಲ ಎಂಬೆಲ್ಲ ಟೀಕೆಗಳು ಇವರ ವಿರುದ್ಧ ಮಾಡಲಾಗುತ್ತಿದೆ. ಕಠೋರ ಹಿಂದುತ್ವ ಎಂಬ ಟೀಕೆಗಳು ಕೇಳಿಬರುತ್ತವೆ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಜೊತೆಗೆ, ಹಿಂದುತ್ವದ ಉಗ್ರ ಪ್ರತಿಪಾದಕರೂ ಹೌದು.

ಇದನ್ನೂ ಓದಿ:  Vijayapura: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಮುಖಂಡ

1921ರಲ್ಲಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ 50 ವರ್ಷ ಜೈಲುಶಿಕ್ಷೆ ವಿಧಿಸಿತು. ಅಂಡಮಾನ್​ ಜೈಲಿನಲ್ಲಿರಿಸಿತು. ಅತ್ಯಂತ ಉಗ್ರ ಶಿಕ್ಷೆ ಇವರಿಗೆ ಕಾದಿತ್ತು. 10 ವರ್ಷ ಯಮಯಾತನೆಯ ಶಿಕ್ಷೆ ಅನುಭವಿಸಿದ ಇವರನ್ನು 1921ರಲ್ಲಿ ಕೆಲ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು.

ದ್ವಿರಾಷ್ಟ್ರ ಕಲ್ಪನೆಗೆ ಬೆಂಬಲ

ಆ ಬಳಿಕ ಇವರು ಬ್ರಿಟಿಷರು ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಹಿಂದುತ್ವದ ಬಗ್ಗೆ ಗಮನ ಹರಿಸಿದರು. ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ, ಆ ಶಬ್ದವನ್ನು ಜನಪ್ರಿಯಗೊಳಿಸಿದ್ದೇ ಅವರು. ಅವರು ದ್ವಿರಾಷ್ಟ್ರ ಕಲ್ಪನೆಗೆ ಬೆಂಬಲ ನೀಡಿದ್ದರು. ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂಬುದು ಇವರ ಅಭಿಪ್ರಾಯ. ಇವರು ಬರೆದ “ಹಿಂದುತ್ವ” ಪುಸ್ತಕದಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.
Published by:Precilla Olivia Dias
First published: