Savarkar: ಸಾವರ್ಕರ್ ವಿರೋಧಿಗಳಿಗೆ ಸೆಡ್ಡು, ಗಣೇಶೋತ್ಸವವನ್ನು ಸಾವರ್ಕರ್ ದಿನವನ್ನಾಗಿ ಆಚರಣೆ!

ರಾಜ್ಯದಲ್ಲಿ ಸಾವರ್ಕರ್ ವಿವಾದ ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ಶುರುವಾದ ವಿವಾದ ಸದ್ಯ ಇಡೀ ರಾಜ್ಯದ್ಯಾಂತ ವೇಗವಾಗಿ ಹರಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಶ್ರೀರಾಮಸೇನೆ ಸಂಘಟನೆ ಮುಂದಾಗಿದೆ.

ವೀರ್​ ಸಾವರ್ಕರ್

ವೀರ್​ ಸಾವರ್ಕರ್

  • Share this:
ರಾಜ್ಯದಲ್ಲಿ ವೀರ​ ಸಾವರ್ಕರ್ (Savarkar) ವಿವಾದ ಜೋರಾಗ್ತಿದೆ. ಸಾವರ್ಕರ್ ವಿಚಾರದಲ್ಲಿ ಅಲ್ಲಲ್ಲಿ ಫ್ಲೆಕ್ಸ್​ಗಳನ್ನೆಲ್ಲಾ(Flex) ಹರಿದಾಕಿದ ಘಟನೆಗಳು ನಡೆದಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್​- ಬಿಜೆಪಿ (Congress BJP) ನಡುವೆ ವಾಕ್ಸಮರವೂ ನಡೆದಿತ್ತು. ಈಗ ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ (Controversy) ಹಿನ್ನೆಲೆ ಹಿಂದೂಪರ ಸಂಘಟನೆಗಳು ವಿಭಿನ್ನವಾಗಿ ಸಾರ್ವಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ. ಈ ಬಾರಿಯ ಗಣೇಶೋತ್ಸವದಲ್ಲಿ (Ganesha Festival) ಸಾವರ್ಕರ್ ಫೋಟೋ ಇಟ್ಟು ಮೆರೆಸಲು ಹಿಂದೂ ಪರ ಸಂಘಟನೆಗಳು ಸಜ್ಜಾಗಿದೆ. ಗಣೇಶೋತ್ಸವ ಹಬ್ಬವನ್ನು ವೀರ ಸಾವರ್ಕರ್ ದಿನವನ್ನಾಗಿ ಆಚರಿಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿದೆ. ರಾಜ್ಯದ್ಯಾಂತ ಸಾವರ್ಕರ್​​ಗೆ ಗೌರವ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.

ರಾಜ್ಯದಲ್ಲಿ ಸಾವರ್ಕರ್ ವಿವಾದ ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ಶುರುವಾದ ವಿವಾದ ಸದ್ಯ ಇಡೀ ರಾಜ್ಯದ್ಯಾಂತ ವೇಗವಾಗಿ ಹರಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಶ್ರೀರಾಮಸೇನೆ ಸಂಘಟನೆ ಮುಂದಾಗಿದೆ.

ಸಾವರ್ಕರ್ ದಿನವನ್ನಾಗಿ ಆಚರಣೆ 

ಈ ಬಾರಿ ಗಣೇಶೋತ್ಸವದ ಮೂಲಕವೇ ಸಾವರ್ಕರ್​ಗೆ ಇಡೀ ರಾಜ್ಯದ್ಯಾಂತ ಗೌರವ ಸಲ್ಲಿಸಲು ಶ್ರೀರಾಮಸೇನೆ ಸಿದ್ಧತೆ ನಡೆಸಿವೆ. ಗಣೇಶೋತ್ಸವವನ್ನು ಸಾವರ್ಕರೋತ್ಸವಾಗಿ ಆಚರಿಸಲು ಪ್ಲಾನ್ ಮಾಡಲಾಗಿದೆ. ಮಾತ್ರವಲ್ಲ ತಾಕತ್ತಿದ್ದರೆ ತಡೆಯಿರಿ ಎನ್ನುವ ಸವಾಲನ್ನು ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಘಟನೆ ಬಗ್ಗೆ ಸೂಕ್ತ ತನಿಖೆ, ಸಿಎಂ ಬಸವರಾಜ ಬೊಮ್ಮಾಯಿ ಆದೇಶ

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ನೇರವಾಗಿ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಈ ಪ್ರಮಾಣದ ಆಕ್ರೋಶ ಕಟ್ಟೆಹೊಡೆಯೋಕೆ ಕೇವಲ ಶಿವಮೊಗ್ಗದ ಘಟನೆ ಮಾತ್ರವಲ್ಲ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೂಡ ಹಿಂದೂ ಕಾರ್ಯಕರ್ತರನ್ನ ಬೆಂಕಿಯಾಗಿಸಿದೆ. ಜೊತೆಗೆ ಇತ್ತೀಚಿಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆಗಳು ಸೇರಿದಂತೆ ಹಲವು ವಿಚಾರಗಳು ಹಿಂದೂ ಸಂಘಟನೆಗಳನ್ನ ಕೆರಳಿಸಿದೆ.

ಗಣೇಶ ಜೊತೆ ಸಾವರ್ಕರ್ ಫೋಟೋ

ಈ ಎಲ್ಲಾ ಕಾರಣಕ್ಕಾಗಿಯೇ ಹಿಂದೂಗಳನ್ನ ಈ ಮೂಲಕ ಒಗ್ಗೂಡಿಸಬೇಕು ಜೊತೆಗೆ ಸಾವರ್ಕರ್ ವಿರೋಧಿಗಳಿಗೂ ತಕ್ಕ ಉತ್ತರ ಕಲಿಸಲೇಬೇಕು ಅನ್ನೋ ನಿಟ್ಟಿನಲ್ಲಿ ಸಿಡಿದೆದ್ದಾರೆ. ಈ ಬಾರಿ ಗಣೇಶೋತ್ಸವದ ವೇಳೆ ರಾಜ್ಯದ್ಯಾಂತ ಎಲ್ಲಾ ಹಿಂದೂ ಗಣೇಶ ಪೆಂಡಾಲ್​​ಗಳಲ್ಲೂ ಸಾವರ್ಕರ್ ಫೋಟೋ ಇಡಲು ಚಿಂತನೆ ನಡೆಸಿವೆ.

ಫೋಟೋ ತೆಗೆಸುತ್ತಾರೋ ನೋಡೇ ಬಿಡೋಣ

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುತಾಲಿಕ್, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಬದ್ದನಾಗಿರಲಿದ್ದು, ಯಾರೇ ಬಂದು ಫೋಟೋ ತೆಗೆಸುತ್ತಾರೋ ನೋಡೇ ಬಿಡೋಣ ಎಂಬ ಸವಾಲೆಸಿದ್ದಾರೆ.

ಸಾವರ್ಕರ್ ಜೀವನ ಸಂದೇಶ

ಇನ್ನು ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಬಗೆಗಿನ ಜೀವನ ಚರಿತ್ರೆ, ವಿಡಿಯೋಗಳು, ಅವರ ಬಗೆಗಿನ ಪುಸ್ತಕವನ್ನ ಜನರಿಗೆ ತಲುಪಿಸುವ ಕೆಲಸವನ್ನೂ ಸಂಘಟನೆಗಳು ಮಾಡಲಿವೆ ಎಂದಿದ್ದಾರೆ. ಜೊತೆಗೆ ಭಾರತದಲ್ಲಿ ಮತ್ತೆ ಸಾವರ್ಕರ್ ಯುಗವನ್ನ ಆರಂಭಿಸುತ್ತೇವೆ. ಹಾಗಾಗಿ ಈ ಬಾರಿಯ ಗಣೇಶೋತ್ಸವ ಸಾವರ್ಕರ್ ಗಣೇಶೋತ್ಸವ ಆಗಲಿದೆ ಎಂಬುದಾಗಿ ತಿಳಿಸಿದ್ದಾರೆ‌.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್, ಭಾರೀ ವಿವಾದ!

ಈ ವಿಚಾರವಾಗಿ   ಸದ್ಯದಲ್ಲೇ ಎಲ್ಲಾ ಸಂಘಟನೆಗಳ ಒಂದು ಸಭೆ ಸೇರಲು ತೀರ್ಮಾನಿಸಿದ್ದು, ಸದ್ಯದಲ್ಲೆ ಸಭೆ ಕೂಡ ಮಾಡ್ತಿವಿ. ಗಣೇಶ ಹಬ್ಬದ ದಿನ ಸಾವರ್ಕರ್ ಬರೆದ ಗೀತೆಗಳು, ಕಥೆಗಳನ್ನು ನೃತ್ಯ ರೂಪದಲ್ಲಿ ಪ್ರದರ್ಶನ ಮಾಡಿ, ಅವರು ಬರೆದ ಪುಸ್ತಕ ಗಳನ್ನು ಸೇಲ್ ಮಾಡ್ತಿವಿ ಅಂತ ತಿಳಿಸಿದರು.

ಒಟ್ಟಾರೆ ಮತ್ತೆ ಸಾವರ್ಕರ್ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಹಲವು ವಿವಾದಗಳು ಜೊತೆ ತಿಕ್ಕಾಟಗಳು ಕೂಡ ಒಂದರ ಹಿಂದೊಂದು ಆರಂಭವಾಗ್ತಿವೆ. ಈ ವಿವಾದ ಮತ್ತೆಲ್ಲಿಗೆ ಹೋಗಿ ತಲುಪಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
Published by:Thara Kemmara
First published: