ಸೋತ ಸವದಿಗೆ ಬಿಜೆಪಿ ರೈತ ಮೋರ್ಚಾ ಜವಾಬ್ದಾರಿ...!


Updated:June 1, 2018, 2:48 PM IST
ಸೋತ ಸವದಿಗೆ ಬಿಜೆಪಿ ರೈತ ಮೋರ್ಚಾ ಜವಾಬ್ದಾರಿ...!

Updated: June 1, 2018, 2:48 PM IST
ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಜೂ.1): 2018ರ ವಿಧಾನಸಭೆ ಚುನಾವಣೆಯಲ್ಲಿ ಅತಿ ಆತ್ಮವಿಶ್ವಾಸದಿಂದಲೇ ಮಾಜಿ ಸಚಿವ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದಿಂದ ಪರಾಭವಗೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ ಕುಮಟಳ್ಳಿ ವಿರುದ್ಧ  2331 ಮತಗಳ ಅಂತರಿಂದ ಸೋತಿದ್ದರು. ಇದೀಗ ಮಾಜಿ ಸಚಿವ ಲಕ್ಷ್ಮಣ ಸವದಿಗೆ ಬಿಜೆಪಿ ರಾಜ್ಯ ರೈತ ಮೋರ್ಚಾದ ಜವಾಬ್ದಾರಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಸವದಿಗೆ ಪ್ರಮಾಣ ಪತ್ರವನ್ನು ಬಿಎಸ್ ವೈ ವಿತರಣೆ ಮಾಡಿದ್ರು. ಈ ಮೂಲಕ ಉತ್ತಮ ವಾಗ್ಮಿ ಆಗಿರೋ ಲಕ್ಷ್ಮಣ ಸವದಿಯನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯ ದೃಷ್ಠಿಯಲ್ಲಿ ಇಟ್ಟುಕೊಂಡು ಈನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ.
First published:June 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...