ರೈತರಿಗೆ ಸರ್ಕಾರದಿಂದ ನೆರವು: ಲಕ್ಷ್ಮಣ ಸವದಿ ಭರವಸೆ - ಡಿಸಿಎಂ ಸಂಧಾನಕ್ಕೆ ಜಗ್ಗದ ರೈತ ಪ್ರತಿಭಟನಾಕಾರರು

ಡಿಸಿಎಂ ಸವದಿ ಮಾತಿಗೆ ರೈತರು ಜಗ್ಗಲಿಲ್ಲ. ಇದರಿಂದ ಡಿಸಿಎಂ ಹಾಗೂ ರೈತರ ನಡುವೆ ಸಂಧಾನ ವಿಫಲವಾಗಿ ಪ್ರತಿಭಟನಾ ಸ್ಥಳದಿಂದ ಡಿಸಿಎಂ ಲಕ್ಷ್ಮಣ ಸವದಿ ಹೊರಟ ಹೋದರು. ಆದರೆ ರೈತಸಂಘದವರು ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದರು.

G Hareeshkumar | news18-kannada
Updated:October 10, 2019, 5:24 PM IST
ರೈತರಿಗೆ ಸರ್ಕಾರದಿಂದ ನೆರವು: ಲಕ್ಷ್ಮಣ ಸವದಿ ಭರವಸೆ - ಡಿಸಿಎಂ ಸಂಧಾನಕ್ಕೆ ಜಗ್ಗದ ರೈತ ಪ್ರತಿಭಟನಾಕಾರರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿಎಂ ಲಕ್ಷ್ಮಣ ಸವದಿ
  • Share this:
ಬೆಂಗಳೂರು(ಅ. 10): ಎಲ್ಲ ರೈತರಿಗೂ ಒಂದೇ ಸಮನಾದ ಪರಿಹಾರ ನೀಡಬೇಕು ಎಂದು ಹೇಳಿದ್ದೇವೆ. 5 ಲಕ್ಷ ಹಣವನ್ನು ಮನೆ ಪರಿಹಾರಕ್ಕೆ ಕೊಡಲು ತಿಳಿಸಿದ್ದು, ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಕಾರ್ಖಾನೆಯಿಂದ ಕಾರ್ಖಾನೆಗೆ ಕಬ್ಬು ಸಾಗಾಣಿಕೆಯ ವೆಚ್ಚವನ್ನೂ ಸರ್ಕಾರ ಭರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಕರ್ನಾಟಕದ 22 ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಬರ ಬಂದಿದೆ. ಮಹಾರಾಷ್ಟ್ರದಲ್ಲಿ ಆದ ಮಳೆಯಿಂದ ಈ ಅವಘಡ ಸಂಭವಿಸಿದೆ. 118 ವರ್ಷದ ಇತಿಹಾಸದಲ್ಲಿ ಬಹುದೊಡ್ಡ ಪ್ರವಾಹ ಇದಾಗಿದೆ. ಅನೇಕ ಮನೆಗಳು ಬಿದ್ದುಹೋಗಿವೆ, ದನಕರುಗಳು ಮನುಷ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು

ನನಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ನಾನು ಸಹ ಕಬ್ಬು ಬೆಳೆಗಾರ ಲಕ್ಷಾಂತರ ಹೆಕ್ಟೆರ್ ಭೂಮಿ, ಹಾಗೂ ಅನೇಕ ಮನೆಗಳು ಸರ್ವನಾಶವಾಗಿವೆ. ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲು ಎದುರಿಸುವ ಸಂದರ್ಭ ಇದಾಗಿದ್ದು, ಎಲ್ಲಾ ಸಮಸ್ಯೆಗಳನ್ನು ನಾವೆಲ್ಲರು ಕೂಡಿ ಎದುರಿಸೋಣ. ಹಾಗಾಗಿ ನಿಮ್ಮ ಸಹಕಾರವೂ ನಮಗೆ ಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ವಿರುದ್ದ ಕಾಂಗ್ರೆಸ್ ಮುಖಂಡರ ಆಕ್ರೋಶ

"ಸಿಎಂ ಯಡಿಯೂರಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದರು. ನಿಮ್ಮ ಆಗ್ರಹಕ್ಕೆ ಪೂರಕವಾಗಿ ನಾನು ಇದ್ದೇನೆ. ಈರುಳ್ಳಿ, ಕಬ್ಬು ಬೆಳೆಹಾನಿ ಬಗ್ಗೆ ನಮಗೆ ವಾಸ್ತವವನ್ನು ತಿಳಿಸಿದ್ದೀರಿ. ಈಗಾಗಲೆ ಸರ್ಕಾರ ಸಹ ಸರ್ವೆಗಳ ಮೂಲಕ ಮೂರು ರೀತಿಯ ವರದಿ ಕೊಟ್ಟಿದೆ. ಸಂಪೂರ್ಣ ಬಿದ್ದ ಮನೆಗಳು, ಅರ್ಧ ಹಾನಿ ಹಾಗೂ ಸ್ವಲ್ಪ ಹಾನಿ ಎಂದು ವರದಿ ಬಂದಿದೆ.

"ಮೂರು ಹಂತಗಳ ರೈತರ ಸಾಲ ಮನ್ನಾ ವಿಚಾರವನ್ನು ಅಧಿವೇಶನದಲ್ಲಿ ಚರ್ಚಿಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಯ ಬಗ್ಗೆ ಚರ್ಚಿಸಲಾಗುವುದು. ನಿಮಗೆ ಒಳ್ಳೆಯ ಸುದ್ದಿ ಕೊಡುವ ಕೆಲಸ ಸರ್ಕಾರ ಮಾಡುತ್ತೆ ಎಂದು ಭರವಸೆ ನೀಡುತ್ತೇನೆ" ಎಂದು ಡಿಸಿಎಂ ಸವದಿ ಹೇಳಿದರು.

ಆದರೆ, ಡಿಸಿಎಂ ಮಾತಿಗೆ ರೈತರು ಜಗ್ಗಲಿಲ್ಲ. ಇದರಿಂದ ಡಿಸಿಎಂ ಹಾಗೂ ರೈತರ ನಡುವೆ ಸಂಧಾನ ವಿಫಲವಾಗಿ ಪ್ರತಿಭಟನಾ ಸ್ಥಳದಿಂದ ಡಿಸಿಎಂ ಲಕ್ಷ್ಮಣ ಸವದಿ ಹೊರಟು ಹೋದರು. ಆದರೆ ರೈತ ಸಂಘದವರು ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದರು.ಸರ್ಕಾರ ಸ್ಪಷ್ಟವಾದ ಉತ್ತರ ಕೊಡಬೇಕು : ಕೋಡಿಹಳ್ಳಿ ಚಂದ್ರಶೇಖರ್

ಸರ್ಕಾರ ಸ್ಪಷ್ಟವಾದ ಉತ್ತರ ಕೊಡಬೇಕು ಇಲ್ಲ. ಅಧಿವೇಶನದ ಮುಕ್ತಾಯದ ವರೆಗೂ ಪ್ರತಿಭಟನೆ ನಡೆಸಬೇಕು ಎನ್ನುವ ತೀರ್ಮಾನದೊಂದಿಗೆ ಬಂದಿದೇವೆ. ಡಿಸಿಎಂ ಲಕ್ಷ್ಮಣ ಸವದಿ ನಮ್ಮ ಅಳಲನ್ನು ಕೇಳಲು ಬಂದಿದ್ದಾರೆ. ನೆರೆ ಬಂದು ಈಗಾಗಲೆ 2 ತಿಂಗಳು ಕಳೆದುಹೋಗಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಯಡಿಯೂರಪ್ಪನವರಿಗೂ ನಾವು ಪ್ರವಾಹ ಉಂಟಾದ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಕೃಷ್ಣ ನದಿಯಿಂದ ಅತಿಹೆಚ್ಚು ನೀರು ಬಿಟ್ಟದ್ದು ಕೃತಕ ಅಪರಾದ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಹೇಳಿದರು

ಇದನ್ನೂ ಓದಿ : ಸಂಘ ಪರಿವಾರದಿಂದ ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಆದೇಶ?; ಬೆಚ್ಚಿದ ಸಿಎಂ, ಟ್ವೀಟ್​ ಡಿಲೀಟ್​​

ನದಿ ಹಾಗೂ ಅಣೆಕಟ್ಟುಗಳ ಸಮಿತಿ ಸೂಕ್ತ ನಿರ್ವಹಣೆ ಅತ್ಯಗತ್ಯ. ನೀರು ಕೇಳುವುದು ನಮ್ಮ ಹಕ್ಕು, ಬಿಕ್ಷೆ ಬೇಡುವುದಲ್ಲ. ಕಾವೇರಿ ನಿರ್ವಹಣಾ ಮಂಡಳಿಯಂತೆ ಕೃಷ್ಣ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಈ ವಿಚಾರದಲ್ಲಿ ರಾಜ್ಯ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಮನಸೋಇಚ್ಚೆ ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟು ಪ್ರವಾಹ ಉಂಟಾಗಿದ್ದು, ಇದನ್ನು ಯಾರು ಹೊತ್ತುಕೊಳ್ಳುತ್ತಾರೆ . ರೈತರನ್ನು ಬಲಿ ಕೊಡುವ ಕೆಲಸ ಮಾಡಬೇಡಿ. ಸರ್ಕಾರದ ಆದೇಶದಂತೆ ಗಂಜಿ ಕೇಂದ್ರಗಳಿಗೆ ಬಂದಿದ್ದೇವೆ. ಗಂಜಿಕೇಂದ್ರ ನಡೆದದ್ದು, ಸಾರ್ವಜನಿಕರ ಸಹಕಾರದಿಂದ ಬಹುತೇಕ ಗಂಜೀಕೇಂದ್ರಗಳು ಸದ್ಯಕ್ಕೆ ಬಾಗಿಲು ಹಾಕಿವೆ ಎಂದರು.
First published: October 10, 2019, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading