ಬೆಳಗಾವಿ(ಡಿ.5): ಬೆಳಗಾವಿಯಲ್ಲಿ (Berlagavi) ಕನ್ನಡ ಬಾವುಟ (Karnataka Flag) ಹಿಡಿದು ಡ್ಯಾನ್ಸ್ ಮಾಡಿದ ವಿದ್ಯಾರ್ಥಿ ಮೇಲೆ ಹಲ್ಲೆ (Assault) ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ಗೆ ಜಾತಿ ಬಣ್ಣ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ (Satish Jarkiholi) ಬೆಳಗಾವಿಯಲ್ಲಿ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಏನಾಗಿದೆ ಅದನ್ನ ಅಲ್ಲಿಯೇ ಮುಗಿಸುವುದು ಒಳ್ಳೆಯದು. ಬೆಳಗಾವಿ ಬೆಳೆಯುತ್ತಿರುವ ನಗರ, ಪದೇಪದೇ ಮರಾಠಿ ಕನ್ನಡ ಅಂತಾ ಗಲಾಟೆ ಆಗಬಾರದು. ಬೆಳಗಾವಿ ಬೆಳೆಯಲು ಅವಕಾಶ ಕೊಡಬೇಕು, ಬೆಳೆಯುತ್ತಿದೆ. 20 ವರ್ಷಗಳ ಹಿಂದೆ ಹಿಂದೂ ಮುಸ್ಲಿಂ ಗಲಭೆ (Hindu Muslim Clash) ಆಗಿತ್ತು, ಈಗ ಫ್ರೀ ಆಗಿದೆ. ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಬೆಳಗಾವಿಗೆ ಕೆಟ್ಟ ಹೆಸರು ಬರಬಾರದು ಎಂಬ ಸಲಹೆಯನ್ನು ನೀಡಿದ್ದಾರೆ.
ಸರ್ಕಾರಕ್ಕೆ ಧಮ್ ಇಲ್ಲ
ಕನ್ನಡ ಬಾವುಟ ಬಗ್ಗೆ ಡಿಸಿಪಿ ಅವಾಚ್ಯ ಶಬ್ದ ಬಳಕೆ ಆರೋಪ ವಿಚಾರ ಪೊಲೀಸರು ಬಳಸಿದ ಭಾಷೆ ಖಂಡಿಸುವೆ. ದೂರು ನೀಡಲು ಹೋದ ವಿದ್ಯಾರ್ಥಿ ಮೇಲೆ ಪೊಲೀಸ್ ಅಧಿಕಾರಿಗಳ ದರ್ಪ ವಿಚಾರ. ಪೊಲೀಸರೇ ರಾಂಗ್ ಸೈಡ್ ಹೋಗಬಾರದು. ಪೊಲೀಸರು ಸಂಯಮವಾಗಿ ವರ್ತನೆ ಮಾಡಬೇಕು. ರಫ್ ಆಗಿ ವರ್ತನೆ ಮಾಡಿದ್ದಿದೆ, ಅವರು ಬೈದಿದ್ದು ಇದೆ. ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇನೆ ಅಂದಿದ್ದಿದೆ. ಬೇರೆ ಶಬ್ದಗಳಿವೆ, ಬೇರೆ ರೀತಿಯಿಂದ ಅವರಿಗೆ ಕನ್ವಿಯನ್ಸ್ ಮಾಡಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ತರಹದ ನಿರ್ಣಯ ಕೈಗೊಳ್ಳುವ ಶಕ್ತಿ ಅವರಿಗೆ ಇಲ್ಲವೇ ಇಲ್ಲ. ಅವರಿಗೆ ಧಮ್ ಇಲ್ವೇ ಇಲ್ಲ ಏನ್ ಮಾಡೋದು?, ಧಮ್ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಧಮ್ ಇಲ್ವೇ ಇಲ್ಲ. ಇಲ್ಲಿಯ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಹೇಳುವಂತ ಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!
ಬಿಜೆಪಿಯನ್ನು ಎದುರಿಸಬಹುದು ಆದರೇ ದುಷ್ಮನ್ ಬಗಲಮೇ ಹೈ- ಜಾರಕಿಹೊಳಿ
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೆ ಇಲ್ಲ. ಮುಂದಿನ ಸಲ ಬೇಕಾದ್ರೆ ಬೇರೆ ಕಡೆ ಹೋಗೊ ಬಗ್ಗೆ ವಿಚಾರ ಮಾಡ್ತಿವಿ. ಈ ಸಲ 20-20 ಮ್ಯಾಚ್ ಇದೆ ನೋಡೇ ಬಿಡುತ್ತೇವೆ. ಮುಂಬರುವ ಚುನಾವಣೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ವಿರೋಧಿಗಳು ಸಂಖ್ಯೆ ಅಷ್ಟೇ ಇದೆ, ಸೌಂಡ್ ಜಾಸ್ತಿ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: RTI ಅರ್ಜಿ ನಿರಾಕರಿಸಿದರೆ 25,000 ರೂಪಾಯಿ ದಂಡ; ಸರ್ಕಾರದ ಖಡಕ್ ಎಚ್ಚರಿಕೆ
ಕಳೆದ ಮೂರು ವರ್ಷಗಳಿಂದ ಸೋಲಿಸಲು ಸ್ಕೇಚ್ ನಡೆದಿದೆ ಎಂಬ ಮಾಹಿತಿ ನಮಗೂ ಇದೆ. ಕೇವಲ ಸತೀಶ ಜಾರಕಿಹೋಳಿ ಅಷ್ಟೇ ಅಲ್ಲ ಐದು, ಆರು ಜನ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯನ್ನು ಎದುರಿಸಬಹುದು ಆದರೇ ದುಷ್ಮನ್ ಬಗಲಮೇ ಹೈ. ಬಿಜೆಪಿ ಜೊತೆಗೆ ಡೈರೆಕ್ಟ್ ಫೈಟ್ ಇದೆ. ಪಕ್ಕದಲ್ಲಿ ಇರೋವರ ಬಗ್ಗೆ ಬಗ್ಗೆ ಹೆಚ್ಚಿನ ಆತಂಕ ಇದೆ ಎಂದು ಅಚ್ಚರಿಯ ಹೇಳಿಕೆಯನ್ನು ಜಾರಕಿಹೊಳಿ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ