• Home
  • »
  • News
  • »
  • state
  • »
  • Satish Jarkiholi Hindu Controversy: ಹಿಂದೂ ಪದದ ಅರ್ಥವೇ ಅಶ್ಲೀಲ! ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ

Satish Jarkiholi Hindu Controversy: ಹಿಂದೂ ಪದದ ಅರ್ಥವೇ ಅಶ್ಲೀಲ! ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ

ಶಾಸಕ ಸತೀಶ್ ಜಾರಕಿಹೊಳಿ (ಸಂಗ್ರಹ ಚಿತ್ರ)

ಶಾಸಕ ಸತೀಶ್ ಜಾರಕಿಹೊಳಿ (ಸಂಗ್ರಹ ಚಿತ್ರ)

"ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ" ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. "ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ" ಅಂತ ಅವರು ಹೇಳಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

  • News18 Kannada
  • Last Updated :
  • Belgaum, India
  • Share this:

ನಿಪ್ಪಾಣಿ, ಬೆಳಗಾವಿ: ಮಾಜಿ ಸಚಿವ (Former Minister) ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ (Congress MLA Satish Jarkiholi) ಹಿಂದೂ ಧರ್ಮದ (Hinduism) ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಈಗ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಹಿಂದೂ ಧರ್ಮದ ಅರ್ಥದ (meaning of Hinduism) ಬಗ್ಗೆ ಆಕ್ಷೇಪಾರ್ಹ ಹೇಳಿಕೆ (objectionable statement) ನೀಡಿದ್ದು, ಇದೀಗ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿಯಲ್ಲಿ (Nippani) ಆಯೋಜಿಸಲಾಗಿದ್ದ ‘ಬುದ್ಧ ಮತ್ತು ಅಂಬೇಡ್ಕರ್ ಸಮಾವೇಶ’ದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, “ಹಿಂದೂ ಪದವೆಂದರೆ ಅದು ಕೆಟ್ಟ ಅರ್ಥಗಳನ್ನು ಕೊಡುವಂತದ್ದು” ಎಂದಿದ್ದಾರೆ. “ಹಿಂದೂ (Hindu) ಎನ್ನುವುದು ಪರ್ಷಿಯನ್ (Persian) ಭಾಷೆಯ ಪದ, ಅದರ ಅರ್ಥ ಅಶ್ಲೀಲವಾಗಿದೆ (obscene)” ಅಂತ ಹೇಳಿದ್ದಾರೆ.


ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ


ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.




“ಹಿಂದೂ ಪದದ ಅರ್ಥವೇ ಅಶ್ಲೀಲ” ಎಂದ ಸತೀಶ್ ಜಾರಕಿಹೊಳಿ


ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ. ಅದನ್ನು ನೀವು ಕೇಳಿದ್ರೆ ನಾಚಿಕೆ ಪಡುತ್ತೀರಿ ಎಂದಿದ್ದಾರೆ. ಬೇಕಾದರೆ ಯಾರಾದರೂ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಬಹುದು ಅಂತ ಅವರು ಹೇಳಿದ್ದಾರೆ.


ಇದನ್ನೂ ಓದಿ: Murugha Swamy: ಬಿಳಿ ಪೌಡರ್​ಗಾಗಿ ಗೋಡೆ ಮುಂದೆ ಅಳ್ತಿದ್ದ ಬಾಲಕಿ; ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಕೆ


“ಹಿಂದೂ ಪದ ನಮ್ಮದು ಹೇಗೆ ಆಯಿತು ಗೊತ್ತಾಗಬೇಕು”


ಮುಂದುವರೆದು ಮಾತನಾಡಿದ ಸತೀಶ್ ಜಾರಕಿಹೊಳಿ, 'ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ ಎಂದಿದ್ದಾರೆ.




“ಎಲ್ಲಿಂದರೋ ಬಂದಿರುವ ಧರ್ಮವನ್ನು ಹೇರಲಾಗುತ್ತಿದೆ”


ಎಲ್ಲಿಂದಲೋ ಬಂದಿರೋ ಹಿಂದೂ ಧರ್ಮವನ್ನು ತಂದು ಭಾರತದಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಹಿಂದೂ ಧರ್ಮಕ್ಕೂ ನಮ್ಮ ಭಾರತಕ್ಕೂ ಏನು ಸಂಬಂಧ ಹೇಳಿ? ನಾವು ಹಿಂದೂಗಳು ಎಂದು ಬೀಗುವ ಇಂದಿನ ಯುವಕರು ತಮ್ಮ ವಾಟ್ಸಾಪ್ ಗಳಲ್ಲಿ, ಗೂಗಲ್ ನಲ್ಲಿ, ವಿಕಿಪೀಡಿಯಾದಲ್ಲಿ ಹಿಂದೂ ಎಂಬ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಪದವನ್ನು ನಮ್ಮ ಮೇಲೆ ಏಕೆ ಬಲವಂತವಾಗಿ ಹೇರಿದರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಅದರ ನಿಜವಾದ ಅರ್ಥ ಗೊತ್ತಾದಾಗ, ಅವರಿಗೆ ಹಿಂದುತ್ವ ನಮ್ಮದಲ್ಲ ಎಂದು ತಿಳಿಯುತ್ತದೆ. ಆಗ ಅದನ್ನು ಪೂಜ್ಯನೀಯ ಭಾವದಿಂದ ನೋಡುವುದನ್ನು ಬಿಡುತ್ತಾರೆ ಅಂತ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


“ಸುಳ್ಳು ಹೇಳುವ ಇಬ್ಬರು ನಾಯಕರಾಗಿದ್ದಾರೆ”


ನಂತರ ತಮ್ಮ ಭಾಷಣದುದ್ದಕ್ಕೂ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರನ್ನೂ ಎಳೆದು ತಂದಿದ್ದಾರೆ. ನಾವು ಸುಳ್ಳು ಹೇಳುವ ಇಬ್ಬರನ್ನು ಈ ದೇಶದ ನಾಯಕರನ್ನಾಗಿಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.


ಇದನ್ನೂ ಓದಿ: Dattapeetha: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ; ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ


ಸತೀಶ್ ಜಾರಕಿಹೊಳಿ ವಿರುದ್ಧ ಭುಗಿಲೆದ್ದ ಆಕ್ರೋಶ


ಸತೀಶ್ ಜಾರಕಿಹೊಳಿ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದ್ದು, ಹಿಂದೂ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು, ಹಿಂದೂ ಪರ ಸಂಘಟನೆ ಮುಖಂಡರು ಸತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Published by:Annappa Achari
First published: