ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ನಿಶ್ಚಯ; 2 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ

ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಫೈನಲ್ ಆಗಿದ್ದು, ಸತೀಶ್ ಜಾರಕಿಹೊಳಿ ಹೆಸರು ಅಂತಿಮಗೊಳಿಸಲಾಗಿದೆ. ಸರ್ವಾನುಮತದಿಂದ ಸತೀಶ್ ಜಾರಕಿಹೊಳಿ ಆಯ್ಕೆ ಮಾಡಲಾಗಿದ್ದು, ಹೈಕಮಾಂಡ್​ಗೆ ಅಭ್ಯರ್ಥಿ ಹೆಸರು ರವಾನಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು: ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಮಾರ್ಚ್ 29ರಂದು ನಾವು ನಾಮಪತ್ರ ಸಲ್ಲಿಸುತ್ತೇವೆ. ಮಾರ್ಚ್ 30ರಂದು ಬಸವಕಲ್ಯಾಣದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಬೆಳಗಾವಿಗೆ ಇನ್ನೂ ಅಭ್ಯರ್ಥಿ‌ ಫೈನಲ್ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

  ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಒಂದು ಲೋಕಸಭೆ,ಎರಡು ವಿಧಾನಸಭೆ ಉಪ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೂರು ಕ್ಷೇತ್ರಗಳಿಗೆ ಉಸ್ತುವಾರಿಗಳನ್ನ ನೇಮಿಸಿದ್ದೇವೆ. ಮುಖಂಡರ ಅಭಿಪ್ರಾಯಗಳನ್ನ ಪಡೆದಿದ್ದೇವೆ. ಕೊರೋನಾ ಗೈಡ್ ಲೈನ್ಸ್ ಗೊಂದಲ ಇದೆ. ಹೀಗಾಗಿ ಬಹಿರಂಗ ಸಭೆಗಳನ್ನ ಹೆಚ್ಚು ಮಾಡದಿರಲು ತೀರ್ಮಾನಿಸಿದ್ದೇವೆ. ವಿಧಾನಸಭೆಗೆ ಎರಡು ಸಭೆ ಮಾಡುತ್ತೇವೆ. ಆಡಳಿತ ಪಕ್ಷವೂ ಸಭೆಗಳನ್ನ ಮಾಡ್ತಿದೆ. ಕೊರೋನಾದಿಂದ ಸಭೆಗಳನ್ನ ಮಾಡಿರಲಿಲ್ಲ. ಬಿಜೆಪಿ ಪಕ್ಷದವರು ಸಭೆಗಳನ್ನ ಮಾಡ್ತಿದ್ದಾರೆ. ಹಾಗಾಗಿ ನಾವು ಮಾಡಬೇಕೋ, ಬೇಡವೋ ಎಂದು ತೀರ್ಮಾನಿಸುತ್ತೇವೆ. ಸರ್ಕಾರ ಕೊರೋನಾ ವಿಚಾರದಲ್ಲಿ ಗೊಂದಲದಲ್ಲಿದೆ ಎಂದು ಹೇಳಿದರು.

  ಬೆಳಗಾವಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಒಂದೇ ಹೆಸರನ್ನು ಕಳಿಸಿಕೊಟ್ಟಿದ್ದೇವೆ ಎಂದರು. ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ನಿಂದ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಬೆಳಗಾವಿ ಜವಾಬ್ದಾರಿ, ಬಸವಕಲ್ಯಾಣಕ್ಕೆ ಈಶ್ವರ್ ಖಂಡ್ರೆಗೆ ಉಸ್ತುವಾರಿ ಹಾಗೂ ಮಸ್ಕಿ ಕ್ಷೇತ್ರಕ್ಕೆ ಧ್ರುವನಾರಾಯಣ್ ಗೆ ಇನ್ ಚಾರ್ಜ್ ನೀಡಲಾಗಿದೆ ಎಂದು ತಿಳಿಸಿದರು.

  ಸಭೆ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ಲೋಕಸಭೆ ಟಿಕೆಟ್ ಬಗ್ಗೆ ಸಮಗ್ರ ಚರ್ಚೆಯಾಗಿದೆ. ನನ್ನ‌ ಜೊತೆ ಇನ್ನಿಬ್ಬರ ಹೆಸರು ರವಾನಿಸಲಾಗಿದೆ. ನನಗಿಷ್ಟ ಇದೆ ಇಲ್ಲ ಅನ್ನೋದು ಅಲ್ಲ. ಪಕ್ಷ ಬಯಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ. ನಾನು ಕೂಡ ಒಮ್ಮೆ ಹೈಕಮಾಂಡ್ ಭೇಟಿ ಮಾಡುತ್ತೇನೆ. ನಂತರ ಚುನಾವಣೆ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಲಾಗುವುದು. ಪ್ರಕಾಶ್ ಹುಕ್ಕೇರಿ ಹೆಸರು ಕೂಡ ದೆಹಲಿಗೆ ಕಳಿಸಿದ್ದಾರೆ. ಈ ಸಭೆಗೆ ಬಂದಿಲ್ಲ ಅಂತ ಅಸಮಾಧಾನ ಇಲ್ಲ ಎಂದು ಹೇಳಿದರು.

  ದಿನೇಶ್ ಗುಂಡೂರಾವ್ ಮಾತನಾಡಿ, ಹಿರಿಯ ನಾಯಕರ‌ ಸಭೆ ನಡೆಸಲಾಗುತ್ತಿದೆ. ಪ್ರಬಲ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗಿದೆ. ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಿದೆ. ಲೂಟಿ ಹೊಡೆಯುವುದು, ಅದೇ ದುಡ್ಡಿನಿಂದ ಚುನಾವಣೆ ಮಾಡುವುದು. ಎಷ್ಟು ಸಚಿವರ ಸಿಡಿಗಳು ಹೊರಗೆ ಬರುತ್ತಿವೆ. ಲೈಂಗಿಕ ಆರೋಪಗಳು ಬಂದಿವೆ. ವಿಡಿಯೋ -ಆಡಿಯೋ ಸಿಡಿಗಳ ಹಗರಣ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ವರ್ಗಾವಣೆ ದಂಧೆ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

  ಬೆಳಗಾವಿ ಲೋಕಸಭೆ ಅಭ್ಯರ್ಥಿ‌ ಘೋಷಣೆ ಮಾತ್ರ ಬಾಕಿ ಇದೆ. ಎಲ್ಲ ನಾಯಕರು ಒಂದೇ ಹೆಸರನ್ನು ಹೇಳಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಂತೆ ಹೈಕಮಾಂಡ್ ಗೆ ಕಳಿಸಲಾಗಿದೆ ಎಂದು ಹೇಳಿದರು.

  ಇದನ್ನು ಓದಿ: Lok Sabha BY Election 2021: ಬೆಳಗಾವಿ ಲೋಕಸಭಾ ಉಪ ಚುನಾವಣೆ ದಂಗಲ್‌ಗೆ ಸಾಹುಕಾರ್ ಸತೀಶ್ ಜಾರಕಿಹೊಳಿ ಎಂಟ್ರಿ!

  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಮೂರು ಉಪಚುನಾವಣೆ ಸಂಬಂಧ ಸುದೀರ್ಘ ಚರ್ಚೆ ಮಾಡಲಾಗಿದೆ. ಯಾವ ರೀತಿ ಚುನಾವಣೆ ನಡೆಸಬೇಕು, ಯಾವ ತಂತ್ರಗಾರಿಕೆ ಮಾಡಬೇಕೆಂದು ಚರ್ಚಿಸಲಾಗಿದೆ. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಅಧಿಕಾರ ದುರಪಯೋಗ ಮಾಡಿಕೊಳ್ತಿದೆ. ಭ್ರಷ್ಟ ಸರ್ಕಾರವನ್ನ ಬುಡಸಮೇತ ಕೀಳಬೇಕು. ಹೀಗಾಗಿ ಚುನಾವಣೆಯಲ್ಲಿ ಗೆಲ್ಲಬೇಕಿದೆ.  ಚುನಾವಣೆಗೆ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ. ಮಸ್ಕಿಗೆ ಬಸನಗೌಡ ತುರುವೀಹಾಳ ಹಾಗೂ ಬಸವಕಲ್ಯಾಣದಲ್ಲಿ ಮಲ್ಲಮ್ಮ ಗೆ ಟಿಕೆಟ್ ನೀಡಲಾಗಿದೆ. ಬೆಳಗಾವಿ ಅಭ್ಯರ್ಥಿಯ ಆಯ್ಕೆಯಾಗಿದೆ. ಅವರ ಹೆಸರನ್ನ ಕಾಯ್ದಿಡಲಾಗಿದೆ. ನಮ್ಮ ಪಕ್ಷದಲ್ಲಿ ಗೆಲ್ಲುವ ಹಲವರು ಇದ್ದಾರೆ. ಒಮ್ಮತದಿಂದ ಸೂಚಿಸಿದ್ದರಿಂದ ಅವರ ಆಯ್ಕೆಯಾಗಿದೆ. ಮೂರರಲ್ಲೂ ನಾವು ಗೆಲ್ಲುತ್ತೇವೆ. ಈ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿದಿದೆ. ಆಡಳಿತ ಯಂತ್ರ ಸಂಪೂರ್ಣ ಕುದಿಸಿದೆ ಎಂದು ಹೇಳಿದರು.

  ಬೆಳಗಾವಿಗೆ ಸತೀಶ್ ಜಾರಕಿಹೊಳಿ ಹೆಸರೇ ಫೈನಲ್ 

   ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಫೈನಲ್ ಆಗಿದ್ದು, ಸತೀಶ್ ಜಾರಕಿಹೊಳಿ ಹೆಸರು ಅಂತಿಮಗೊಳಿಸಲಾಗಿದೆ. ಸರ್ವಾನುಮತದಿಂದ ಸತೀಶ್ ಜಾರಕಿಹೊಳಿ ಆಯ್ಕೆ ಮಾಡಲಾಗಿದ್ದು, ಹೈಕಮಾಂಡ್​ಗೆ ಅಭ್ಯರ್ಥಿ ಹೆಸರು ರವಾನಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
  Published by:HR Ramesh
  First published: