ರಮೇಶ್​ ಜಾರಕಿಹೊಳಿ ಬೆಂಬಲಿಗನ ಮನೆಗೆ ನುಗ್ಗಿ ಹೊಡೆಯುತ್ತೇನೆ; ಹೇಳಿಕೆ ಸಮರ್ಥಿಸಿಕೊಂಡ ಸತೀಶ್​ ಜಾರಕಿಹೊಳಿ

ಗೋಕಾಕ್​ನಲ್ಲಿ​ ಭಯದ ವಾತಾವರಣ ಹೊಸದಲ್ಲ. ಅವರಿಗೆ ಅವರದೇ ಆದ ಭಾಷೆಯಲ್ಲಿ ಉತ್ತರಿಸಬೇಕು. ರಮೇಶ್ ಜಾರಕಿಹೊಳಿ ಜನರ ಮುಂದೆ ಯಾವುದೇ ಸ್ಥಾನವನ್ನು ಹೊಂದಿಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಮೇಶ ದೊಡ್ಡವನು ಅಷ್ಟೇ.

Seema.R | news18-kannada
Updated:October 3, 2019, 12:54 PM IST
ರಮೇಶ್​ ಜಾರಕಿಹೊಳಿ ಬೆಂಬಲಿಗನ ಮನೆಗೆ ನುಗ್ಗಿ ಹೊಡೆಯುತ್ತೇನೆ; ಹೇಳಿಕೆ ಸಮರ್ಥಿಸಿಕೊಂಡ ಸತೀಶ್​ ಜಾರಕಿಹೊಳಿ
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ (ಅ.03): ಸಹೋದರ ರಮೇಶ್​ ಜಾರಕಿಹೊಳಿ ಬೆಂಬಲಿಗ ರಾಜು ತಳವಾರ ದಬ್ಬಾಳಿಕೆಯನ್ನು ನಿಯಂತ್ರಿಸದಿದ್ದರೆ, ಅವರ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂಬ ತಮ್ಮ ಹೇಳಿಕೆಯನ್ನು ಶಾಸಕ ಸತೀಶ್​ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಜನರನ್ನು ಬೆದರಿಸಿ ಇಟ್ಟಿದ್ದಾರೆ. ಗೋಕಾಕ್​ನಲ್ಲಿ ಇದನ್ನು ಬಿಟ್ಟು ಬೇರೆ ಏನು ಉಳಿದಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ದೂರು‌ ಕೊಟ್ಟರು ಪೊಲೀಸರು ಸ್ವೀಕರಿಸಲಿಲ್ಲ. ಗೋಕಾಕ್​ನಲ್ಲಿ ಅಂಬಿರಾವ್ ಮುಂದೆ  ನಾನು ಶ್ಯೂನವಾಗಿದ್ದೇನೆ. ಅಂಬಿರಾವ್​​ಗೆ ಹೇಳದೇ ಇಲ್ಲಿ ಯಾವುದೇ ಕೆಲಸ ಆಗಲ್ಲ. ಗೋಕಾಕ್​ನಲ್ಲಿ ಅಧಿಕಾರಗಳ ಮೇಲೆ ಒತ್ತಡವಿದೆ. ಈ ಹಿನ್ನೆಲೆ ಈ ರೀತಿ ಹೇಳಿಕೆ ನೀಡಿದೆ ಎಂದರು.

ಗೋಕಾಕ್​ನಲ್ಲಿ​ ಭಯದ ವಾತಾವರಣ ಹೊಸದಲ್ಲ. ಅವರಿಗೆ ಅವರದೇ ಆದ ಭಾಷೆಯಲ್ಲಿ ಉತ್ತರಿಸಬೇಕು. ರಮೇಶ್ ಜಾರಕಿಹೊಳಿ ಜನರ ಮುಂದೆ ಯಾವುದೇ ಸ್ಥಾನವನ್ನು ಹೊಂದಿಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಮೇಶ ದೊಡ್ಡವನು ಅಷ್ಟೇ ಎಂದು ಲೇವಡಿ ಮಾಡಿದರು.

ಇದನ್ನು ಓದಿ: ಜೆಡಿಎಸ್​ಗೆ ಒಲಿದ ಮನ್ಮುಲ್ ಅಧ್ಯಕ್ಷ​ ಪಟ್ಟ; ಬಿಜೆಪಿಗೆ ಭಾರೀ ಮುಖಭಂಗ

ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ರಾಜು ತಳವಾರ ಹಲ್ಲೆ ನಡೆಸಿದ್ದಾನೆ. ಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿಗಿಂತ ಅವರ ಅಂಬಿರಾವ್​ ಪಾಟೀಲ್​ ಅಧಿಕಾರ ಹೆಚ್ಚಾಗಿದೆ. ಇವರನ್ನು ನಿಯಂತ್ರಿಸಬೇಕಾದ ಆಡಳಿತವನ್ನೇ ಅವರು ನಿಯಂತ್ರಿಸಿಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದೇನೆ. ಇಲ್ಲಿನ ಪರಿಸ್ಥಿತಿ ಹಾಗೆ ಇದೆ ಎಂದರು.

First published: October 3, 2019, 12:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading