ಸಿದ್ದರಾಮಯ್ಯ ಮೇಲೆ ಮುನಿಸು; ದೆಹಲಿಗೆ ಹೋಗದೆ ಬೆಂಗಳೂರಿನಲ್ಲೇ ಉಳಿದ ಜಾರಕಿಹೊಳಿ

news18
Updated:September 19, 2018, 12:18 PM IST
ಸಿದ್ದರಾಮಯ್ಯ ಮೇಲೆ ಮುನಿಸು; ದೆಹಲಿಗೆ ಹೋಗದೆ ಬೆಂಗಳೂರಿನಲ್ಲೇ ಉಳಿದ ಜಾರಕಿಹೊಳಿ
news18
Updated: September 19, 2018, 12:18 PM IST
ಕೃಷ್ಣಾ ಜಿ,ವಿ , ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.19): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ಸ್ಥಾನದಿಂದ ಸತೀಶ್​ ಜಾರಕಿಹೊಳಿ ತೆಗೆದುಹಾಕಿದ ಕಾರಣ ಈಗ ಅವರು ಮಾಜಿ ಸಿಎಂ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂಬ ಮಾತಿಗೆ ಸತೀಶ್​ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ರಮೇಶ್​ ಜಾರಕಿಹೊಳಿ ಮನವೊಲಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಅವರ ಮಾತಿಗೆ ಮನ್ನಣೆ ಸಿಗಲಿಲ್ಲ. ಆದರೆ, ಮಂಗಳವಾರ ನಡೆದ ಸಿಎಂ ಕುಮಾರಸ್ವಾಮಿ ಜೊತೆಗಿನ ಮಾತುಕತೆ ಯಶಸ್ವಿಯಾಗಿತ್ತು. ಈ ಮೂಲಕ ಸತೀಶ್​ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್​ ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮನಸ್ತಾಪ ಇಲ್ಲ. ಈಗಾಗಲೇ ರಮೇಶ್​ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಹಾಗಾಗಿ ನಾನು ಸಿದ್ದರಾಮಯ್ಯರನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲೇ ಇರುವ ಜಾರಕಿಹೊಳಿ 

ಬಂಡಾಯ ಶಮನ ಮಾಡಿ​  ಸತೀಶ್​ ಜಾರಕಿಹೊಳಿ ಸಂಧಾನ ಮಾತುಕತೆ ಮಾಡಲು   ಹೈ ಕಮಾಂಡ್ ಬುಲಾವ್​ ನೀಡಿತ್ತು. ಇಂದು ನಡೆಯುವ ಮಾತುಕತೆ ಕಾರ್ಯಕ್ರಮಕ್ಕೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ನಾಯಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಆದರೆ, ಇದುವರೆಗೂ ಸತೀಶ್​ ಜಾರಕಿಹೊಳಿ ದೆಹಲಿಗೆ ಹೋಗದೆ ಬೆಂಗಳೂರಿನಲ್ಲಿಯೇ ಇದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,  ರಾಜ್ಯ ನಾಯಕರು ಎಂಎಲ್​ಸಿ ವಿಚಾರದ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ. ಹೀಗಾಗಿ ನಾನು ಪ್ರತ್ಯೇಕವಾಗಿ ದೆಹಲಿಗೆ ತೆರಳುತ್ತಿದ್ದೇನೆ. ಪಕ್ಷ, ಜಿಲ್ಲೆಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ. ನಮ್ಮ‌ ಸಮಸ್ಯೆ ಸರ್ಕಾರಕ್ಕೆ ಸಂಬಂಧಿಸಿದ್ದು, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದರು.

ಮಂಗಳವಾರ  ಸಿಎಂ ಹೆಚ್​ಡಿಕೆ ಭೇಟಿ ವೇಳೆ ಎಲ್ಲ ಸಮಸ್ಯೆಗಳೂ ಬಗೆಹರಿದಿದೆ. ದೆಹಲಿಯಲ್ಲಿ ಬೆಳಗಾವಿ ಸಮಸ್ಯೆ ಬಗ್ಗೆ ಚರ್ಚಿಸಲು ಇದರ ಬಗ್ಗೆ ರಾಹುಲ್​ ಗಾಂಧಿ ಕೂಡ ತಿಳಿದುಕೊಳ್ಳಲು ಮುಂದಾಗಿದ್ದಾರೆ.  ಸ್ವಲ್ಪ ಅಸಮಾಧಾನವಿರೋದು ನಿಜ, ಇಂದು ಎಲ್ಲದರ ಬಗ್ಗೆ ಚರ್ಚಿಸುತ್ತೇನೆ ಎಂದರು.
Loading...

ಮಾಧ್ಯಮಗಳಲ್ಲಿ ಕೇವಲ ಪ್ರಚಾರ ಗಿಟ್ಟಿಸಲು ನಾವು ಕೆಲಸ ಮಾಡುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ನಮ್ಮ ಕೆಲಸ ಮಾಡಿ ಸಾಬೀತು ಮಾಡಿದ್ದೇವೆ. ಈಗಾಗಲೇ ಬಾದಾಮಿಯಲ್ಲೂ ನಮ್ಮ‌ ಸಾಮರ್ಥ್ಯ ತೋರಿಸಿದ್ದೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆಗೆ ಸ ತಿರುಗೇಟು ನೀಡಿದರು.
First published:September 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...