• Home
  • »
  • News
  • »
  • state
  • »
  • Satish Jarkiholi: ನನ್ನ ಭಾಷಣ ಇನ್ನೂ 10 ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ; ಜಾರಕಿಹೊಳಿ ಸ್ಪಷ್ಟನೆ

Satish Jarkiholi: ನನ್ನ ಭಾಷಣ ಇನ್ನೂ 10 ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ; ಜಾರಕಿಹೊಳಿ ಸ್ಪಷ್ಟನೆ

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಮಾಧ್ಯಮಗಳು ಅನೇಕ ಸುಳ್ಳುಗಳನ್ನ ವಿಜೃಂಭಣೆ ಮಾಡಿವೆ. ಹಿಂದೂ ಧರ್ಮದ ವಿಚಾರ ಬಂದಾಗ ವಿಶೇಷ ಸ್ಥಾನಮಾನ. ದಯವಿಟ್ಟು ನೈಜ್ಯವಾದ ಸುದ್ದಿ ತೋರಿಸುವ ಪ್ರಯತ್ನ ಮಾಡಿ. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ವಿಶೇಷ ಸ್ಥಾನಮಾನ. ದಲಿತ ಮೃತಪಟ್ಟರೇ ಯಾವುದೇ ಸುದ್ದಿ ಇಲ್ಲ

  • Share this:

ಹಿಂದೂ ಪದದ (Hindu) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Former Miniser Satish Jarkiholi) ಸ್ಪಷ್ಟನೆ ನೀಡಿದ್ದಾರೆ. ರಾಜ್ಯಾದ್ಯಂತ ಮತ್ತು ಪಕ್ಷದೊಳಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟನೆ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ನಿಪ್ಪಾಣಿಯಲ್ಲಿ (Nippani, Belagavi) ನಡೆದ ಕಾರ್ಯಕ್ರಮದಲ್ಲಿ ಹಿಂದು ಶಬ್ಧದ ಮೇಲೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದು ಶಬ್ಧ ಪರ್ಷಿಯನ್ ನಿಂದ ಬಂದಿದೆ ಎಂದು ಹೇಳಿದ್ದು ನಿಜ. ಈ ಬಗ್ಗೆ ಚರ್ಚೆ ಆಗಬೇಕು ಎಂದು ನಾನು ಹೇಳಿದ್ದೇನೆ. ಹಿಂದೂ ಶಬ್ಧದ ಬಗ್ಗೆ ನಿಂದನೆ ಕೆಲವು  ಪದಗಳು ದಾಖಲೆಯಲ್ಲಿ ಸಿಗುತ್ತೆ ಈ ಬಗ್ಗೆ ಕೋಟ್ ಮಾಡಿ‌ ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಮಾಧ್ಯಮದಲ್ಲಿ ಚರ್ಚೆ ಹಿನ್ನೆಲೆ ಸ್ಪಷ್ಟನೆ ನೀಡುವುದು ನಮ್ಮ‌ ಕರ್ತವ್ಯ. ಜಾತಿ, ಧರ್ಮ ಮೀರಿ ಕೆಲಸ ಮಾಡುವ ಉದ್ದೇಶ ನನ್ನದು. ಪರ್ಷಿಯನ್​​ನಿಂದ ಹಿಂದೂ ಪದ ಬಂದಿದ್ದ ಬಗ್ಗೆ ನೂರಾರು ದಾಖಲೆ ಇವೆ. ಅನೇಕ ಪುಸ್ತಕಗಳಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ಮಾಧ್ಯಮಗಳು ಉಕ್ರೇನ್, ರಷ್ಯಾ ಯುದ್ಧ ಮಾದರಿಯಲ್ಲಿ ವಿಶ್ಲೇಷಣೆ ಮಾಡುತ್ತಿವೆ. ಈ ಸಮಯ ಬೇರೆ ವಿಷಯಕ್ಕೆ ಕೊಟ್ಟಿದರೇ ಒಳ್ಳೆಯದಾಗುತ್ತಿದೆ ಎಂದಿದ್ದಾರೆ.


ಹಿಂದೂ ಎಂಬುದು ಜೀವನ ಪದ್ಧತಿ


ಮಾಧ್ಯಮಗಳು ಅನೇಕ ಸುಳ್ಳುಗಳನ್ನ ವಿಜೃಂಭಣೆ ಮಾಡಿವೆ. ಹಿಂದೂ ಧರ್ಮದ ವಿಚಾರ ಬಂದಾಗ ವಿಶೇಷ ಸ್ಥಾನಮಾನ. ದಯವಿಟ್ಟು ನೈಜ್ಯವಾದ ಸುದ್ದಿ ತೋರಿಸುವ ಪ್ರಯತ್ನ ಮಾಡಿ. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ವಿಶೇಷ ಸ್ಥಾನಮಾನ. ದಲಿತ ಮೃತಪಟ್ಟರೇ ಯಾವುದೇ ಸುದ್ದಿ ಇಲ್ಲ. ಹಿಂದೂ ಧರ್ಮದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಕೇಳಬೇಕು. ಹಿಂದೂ ಎಂಬುದು ಜೀವನ ಪದ್ಧತಿ ಎಷ್ಟೇ ಎಂದು ಹೇಳಿದ್ದಾರೆ.


ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ


ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ನಾನೇನು ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ಜಾತಿ, ಧರ್ಮದಿಂದ ನಾನು ದೂರ ಇರೋ ವ್ಯಕ್ತಿ. ಈ ರೀತಿ ನಮ್ಮ ಮೇಲೆ ಅಪರಾಧ ಮಾಡಿರೋ ಬಿಂಬಿಸಬೇಡಿ. ವಿದ್ವಾಂಸರನ್ನು ಯಾರಿಗೋ ಲಾಭ ಮಾಡಲು ನೀವು ಚರ್ಚೆ ಮಾಡಬೇಡಿ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ. ತಪ್ಪಿದ್ರೆ ಚರ್ಚೆ ಮುಂದುವರಿಸಿ ಎಂದಿದ್ದಾರೆ.


ಇದನ್ನೂ ಓದಿ:  Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ


ವಿಕಿಪೀಡಿಯಾದಲ್ಲಿ ಇರೋದು ಹೇಳಿದ್ದೇನೆ


ಇದೇ ರೀತಿ ಚರ್ಚೆ ಮುಂದುವರಿದರೆ ಮಾನಹಾನಿ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಯಾವುದೇ ಧರ್ಮ, ಭಾಷೆ ಮಾಡುವ ಪ್ರಶ್ನೆಯೆ ಇಲ್ಲ. ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತೇನೆ. ವಿಕಿಪೀಡಿಯಾದಲ್ಲಿ ಇರೋದು ಹೇಳಿದ್ದೇನೆ ಅಂತ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.


ಸತೀಶ್ ಜಾರಕಿಹೊಳಿ ಹೇಳಿದ್ದೇನು?


ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.


ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದರು. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ. ಅದನ್ನು ನೀವು ಕೇಳಿದ್ರೆ ನಾಚಿಕೆ ಪಡುತ್ತೀರಿ ಎಂದಿದ್ದಾರೆ. ಬೇಕಾದರೆ ಯಾರಾದರೂ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಬಹುದು ಅಂತ ಅವರು ಹೇಳಿದ್ದರು.


ಇದನ್ನೂ ಓದಿ: Congress Twitter: ಕಾಂಗ್ರೆಸ್‌ಗೆ ಕೆಜಿಎಫ್‌ ಕಂಟಕ! ಅನುಮತಿ ಇಲ್ಲದೇ ಹಾಡು ಬಳಸಿದ್ದಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್!


“ಹಿಂದೂ ಪದ ನಮ್ಮದು ಹೇಗೆ ಆಯಿತು ಗೊತ್ತಾಗಬೇಕು”


ಮುಂದುವರೆದು ಮಾತನಾಡಿದ ಸತೀಶ್ ಜಾರಕಿಹೊಳಿ, 'ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ ಎಂದಿದ್ದರು.

Published by:Mahmadrafik K
First published: