ಕೈ ತಪ್ಪಿದ ಸಚಿವ ಸ್ಥಾನ; ಸತೀಶ್​ ಜಾರಕಿಹೊಳಿ ಬೆಂಬಲಿಗರಿಂದ ಫ್ರೀಡಂ ಪಾರ್ಕ್​ನಲ್ಲಿಂದು​ ಶಕ್ತಿ ಪ್ರದರ್ಶನ

news18
Updated:June 19, 2018, 10:14 AM IST
ಕೈ ತಪ್ಪಿದ ಸಚಿವ ಸ್ಥಾನ; ಸತೀಶ್​ ಜಾರಕಿಹೊಳಿ ಬೆಂಬಲಿಗರಿಂದ ಫ್ರೀಡಂ ಪಾರ್ಕ್​ನಲ್ಲಿಂದು​ ಶಕ್ತಿ ಪ್ರದರ್ಶನ
news18
Updated: June 19, 2018, 10:14 AM IST
ಲೋಕೇಶ್​ ರಾಮ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಜೂ 19): ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಅವರ ಬೆಂಬಲಿಗರು ಇಂದು ಫ್ರೀಡಂ ಪಾರ್ಕಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಶಾಸಕರಿಗೆ ಮೊದಲಪಟ್ಟಿಯಲ್ಲಿ ಸಚಿವ ಸ್ಥಾನ ನೀಡದ ಹಿನ್ನಲೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು ಇಂದು ಬೆಂಗಳೂರಿನಲ್ಲಿ ತಮ್ಮ ಹೋರಾಟಕ್ಕೆ ಮುಂದಾಗಿದ್ದಾರೆ. ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ ನಡೆಸುತ್ತಿದ್ದು, ಫ್ರೀಡಂ ಪಾರ್ಕ್​ನಲ್ಲಿ ಧರಣಿ ಕೂರಲಿದ್ದಾರೆ.

ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ನಲ್ಲಿ  ಬೃಹತ್ ವೇದಿಕೆ ನಿರ್ಮಾಣಮಾಡಲಾಗಿದ್ದು, ಸುಮಾರು 11ಗಂಟೆಗೆ ಜನಾಗ್ರಹ ಸಮಾವೇಶ ಆರಂಭವಾಗುವ ಸಾಧ್ಯತೆ ಇದೆ. ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಸಾಹಿತಿಗಳು ಮತ್ತು ಹೊರಟಗಾರರು ಭಾಗಿಯಾಗಲಿದ್ದಾರೆ.

ದಿನೇಶ್ ಅಮಿನ್ ಮಟ್ಟು, ಎ.ಕೆ.ಸುಬ್ಬಯ್ಯ, ವಿಲ್ಪ್ರೆಡ್ ಡಿಸೋಜಾ, ಮೋಹನ್ ರಾಜ್, ಬಿ.ಕೆ.ಶಿವರಾಮ್, ರವೀಂದ್ರ ನಾಯ್ಕರ್,ಚಂದ್ರಶೇಖರ್ ಪಾಟೀಲ್, ಪ್ರೊ.ಮಹೇಶ್ ಚಂದ್ರ ಗುರು, ಲೇಖಕಿ ಶರೀಫಾ, ಪ್ರೊ.ಗೋವಿಂದ ರಾವ್, ಲಕ್ಷಿನಾರಯಣ್ ನಾಗವಾರ, ಬಿ.ಟಿ.ಲಲಿತಾ ನಾಯ್ಕ್, ಮಾವಳ್ಳಿ ಶಂಕರ್, ಚಳುವಳಿ ರಾಜಣ್ಣ, ಹನುಮಂತ ಯಳಸಂಗಿ ಭಾಗಿಯಾಗುವ ಸಾಧ್ಯತೆ ಇದೆ.

ಮೊದಲಪಟ್ಟಿಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಎರಡನೇ ಪಟ್ಟಿಯಲ್ಲಿಯಾದರೂ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಇನ್ನು ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಎಐಸಿಸಿ ಕಾರ್ಯಧ್ಯಕ್ಷ ಸ್ಥಾನಕ್ಕೂ ಸತೀಶ್​ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...